Saturday, 23rd November 2024

ಮಧುರ ನೆನಪಿನ ಚಿಕ್ಕಪ್ಪನ ಮದುವೆ

* ಸಂಧ್ಯಾ ತೇಜಪ್ಪ

ಹಳ್ಳಿಯ ಕಡೆಗಳಲ್ಲಿ ಸಂಪ್ರದಾಯ ಬದ್ಧವಾಗಿ ನಡೆಯುವ ಮದುವೆಗಳಲ್ಲಿ ಒಂದು ಮಾಧುರ್ಯ ಇದೆ. ಅಂತಹ ಮದುವೆಗಳು ಮನದಲ್ಲಿ ಮೂಡಿಸುವ ನೆನಪುಗಳು ಸುಮಧುರ.

ಬಹುಶಃ ಆಗ ನನಗೆ 10ನೇ ವಯಸ್ಸು. ಹಸಿರು ಲಂಗ, ಕೆಂಪು ಬಣ್ಣದ ಟಾಪ್, ಝಲ್- ಝಲ್ ಎನ್ನುವ ಕಾಲ್ಗೆೆಜ್ಜೆೆ, ಮೋಟುದ್ದ ಜುಟ್ಟಿಿಗೆ ಮಾರುದ್ದ ಮಲ್ಲಿಗೆ ಹೂ, ಅಬ್ಬಾಾ ! ಈಗಲು ಕಾಡುತ್ತಿಿದೆ ಆ ಮದುವೆಯ ಸಂಭ್ರಮದ ನೆನಪುಗಳು. ಅದೇಕೊ ನನ್ನ ಚಿಕ್ಕಪ್ಪನ ಮದುವೆಯ ಬಗ್ಗೆೆ ಬರೆಯಬೇಕು, ಮದುವೆಯ ಸಂಭ್ರಮದ ಬಗ್ಗೆೆ ನಿಮಗೆಲ್ಲ ತಿಳಿಸಬೇಕೆಂದು ಯೋಚನೆ ಬಂದಿದೆ.

ಸುಮಾರು 15 ದಿನಗಳಿಂದಲೇ ಊರಿನೆಲ್ಲಡೆ ನನ್ನ ಚಿಕ್ಕಪ್ಪನ ಮದುವೆಯ ಕಳೆ. ಮದುವೆ ಊಟಕ್ಕಾಾಗಿ ಅಕ್ಕಿಿಯನ್ನು ಶುಚಿಗೊಳಿಸುವ ಕೆಲಸ, ನಾನಾ ಬಗೆಯ ಮಿಶ್ರಿಿತ ಉಪ್ಪಿಿನಕಾಯಿನ್ನು ಸಿದ್ಧಪಡಿಸುವುದು, ಹಪ್ಪಳ ಮತ್ತು ಸಂಡಿಗೆಯನ್ನು ಮನೆಯಲ್ಲಿ ತಯಾರಿಸುವುದು, ಮದುವೆಗೆ ಬೇಕಾದ ಸಾಮಗ್ರಿಿಗಳನ್ನು ಸಂಗ್ರಹಿಸುವುದು, ಬಟ್ಟೆೆಯನ್ನು ಖರೀದಿಸುವುದು, ಬಳೆಗಳನ್ನು ಇಡಿಸಿಕೊಳ್ಳುವುದು – ಇವೆಲ್ಲವೂ ಸಂಭ್ರಮಕ್ಕೆೆ ಮೆರುಗು ತಂದಿದ್ದವು. ಮದುವೆ ಮನೆ ಎಂದು ತಿಳಿದ ಬಳೆಗಾರನು, ಮಹಿಳೆಯರಿಗೆ, ಹೆಣ್ಣು ಮಕ್ಕಳಿಗೆ ಬಳೆ ಇಡಲು ತನ್ನ ಬಳೆಯ ಸಂಗ್ರಹದೊಂದಿಗೆ ಬರುವ ಸಂಭ್ರಮ, ಅವನ ಸುತ್ತ ಎಲ್ಲರೂ ಕುಳಿತು ತಮಗೆ ಬೇಕೆನಿಸುವ ಬಳೆಗಳನ್ನು ಇಡಿಸಿಕೊಳ್ಳುವ ಸಂತಸ! ಬಳೆ ಇಡಿಸಿಕೊಳ್ಳಲು ಬಂದಿದ್ದ ಆಚೀಚೆ ಹೆಣ್ಣು ಮಕ್ಕಳಲ್ಲಿ ಕೆಲವರಿಗೆ ಬಳೆ ಇಡುವಾಗ ಕೈ ನೋವಾಗಿ, ಅಳಲು ತೊಡಗುವುದೂ ಉಂಟು! ಆದರೆ, ಮದುವೆಯ ಸಂಭ್ರಮದಲ್ಲಿ ಆ ನೋವು ಯಾವ ಲೆಕ್ಕ? ನಾನೂ ಸಹ ಬಳೆಗಾರನ ಮುಂದೆ ನನ್ನ ಕೈಯನ್ನು ನೀಡಿ, ಪುಟಾಣಿ ಗಾತ್ರದ ಬಳೆಗಳನ್ನು ಇಡಿಸಿಕೊಂಡು, ಸಂಭ್ರಮ ಪಟ್ಟಿಿದ್ದೆೆ.

ಇತ್ತ ಊರಿನ ಗಂಡಸರೆಲ್ಲಾಾ ಸೇರಿ ಮನೆ ಮುಂದೆ ಚಪ್ಪರ ಹಾಕಿದರು. ಅಡಿಕೆ ಮರದ ಕಂಬಗಳನ್ನು ಅಂಗಳದ ತುಂಬಾ ನೆಟ್ಟು, ಅದಕ್ಕೆೆ ಅಡ್ಡಲಾಗಿ ಅಡಿಕೆ ದಬ್ಬೆೆಗಳನ್ನು ಹಾಕಿ ಮೇಲೆ ತೆಂಗಿನ ಗರಿಗಳನ್ನು ಹೊದಿಸಿ ಚಪ್ಪರ ಮಾಡಿದರು. ಚಪ್ಪರ ಕಟ್ಟುವಾಗ ಚಿಕ್ಕಪ್ಪಗೆ ಮದುಮಗ ಎಂದು ಕಾಡಿಸುವುದನ್ನು ಕಂಡು ಸಂಭ್ರಮಿಸಿಸುತ್ತಿಿದ್ದ ಘಳಿಗೆಗಳು ನನಗೆ ಇಂದಿಗೂ ಮನದಲ್ಲಿ ಅಚ್ಚಳಿಯದಂತೆ ಉಳಿದಿದೆ.

ಪ್ರತಿಯೊಬ್ಬರ ಬದುಕಿನಲ್ಲಿ ವಿವಾಹ ಎನ್ನುವುದು ಎಂದೆಂದೂ ಪಡೆಯದ ಮಧುರ ಕ್ಷಣ. ಮದುವೆಯ ದಿನದಂದು ಚಿಕ್ಕಪ್ಪನ ಮುಖದಲ್ಲಿ ಎಲ್ಲಿಲ್ಲದ ಸಂತಸ. ಅದುವರೆಗೆ ಯಾರಿಗೂ ಜಗ್ಗದ ಚಿಕ್ಕಪ್ಪನ ಕೈಗಳು ಮಂಟಪಕ್ಕೆೆ ಹೋಗುವಾಗ ಮಾತ್ರ, ಗಡ- ಗಡನೇ ನಡುಗುತ್ತಿಿತ್ತು. ಅದೇನೋ ಸಂತಸ, ಉದ್ವೇಗದಿಂದ ಚಿಕ್ಕಪ್ಪನಿಗೆ ಮೂಡಿತ್ತು. ಆ ಸಂಕೋಚದಲ್ಲಿ ಪಂಚೆ ಉಟ್ಟುಕೊಂಡು ನಡೆಯಲು ಕಷ್ಟಪಡುತ್ತಿಿದ್ದನ್ನು ನೋಡಿ ನಾನು, ತಂಗಿ, ಅಣ್ಣ, ತಮ್ಮ, ಜೋರಾಗಿ ನಕ್ಕಿಿರುವುದು ಹಚ್ಚ ಹಸಿರಾಗಿ ನನ್ನ ನೆನಪಲ್ಲಿ ಉಳಿದುಕೊಂಡಿದೆ. ಚಿಕ್ಕಮ್ಮನನ್ನು ಮನೆದುಂಬಿಸಿಕೊಂಡ ನಂತರ ಓಕಳಿಯ ಆಟದಲ್ಲಿ ಮಧುಮಕ್ಕಳ ಬಟ್ಟೆೆ ಒದ್ದೆೆ. ಅಕ್ಕಿಿಯಲ್ಲಿ ಉಂಗುರ ಹುಡುಕುವ ಆಟದಲ್ಲಿ ಚಿಕ್ಕಮ್ಮನಿಗೆ ನಮ್ಮ ಪ್ರೋೋತ್ಸಾಾಹದ ಗೆಲುವು ಸಿಕ್ಕಿಿದ್ದು. ಛೇ! ಇವೆಲ್ಲಾಾ ಮರೆಯುವುದೆಂದರೇ ಅಸಾದ್ಯಾಾವಾದ ಮಾತೇ ಸರಿ.

ಮಾವಿನ ಸೊಪ್ಪುು, ಹಲಸಿನ ಸೊಪ್ಪುು, ತೇರು ಹೂವಿನಿಂದ ಅಲಂಕಾರಗೊಂಡ ಅಂದ, ಸೋಬಾನೆ ಪದಗಳು, ತಾಳಿ ಕಟ್ಟುವ ಘಳಿಗೆ ರೆಪ್ಪೆೆ ಮುಚ್ಚಿಿದರೆ ಸಾಕು ಕಣ್ಮುಂದೆ ಸಾಗುತ್ತದೆ. ನಂತರ ಊಟ; ನಮ್ಮ ಬಂಧುಗಳೇ ಎಲೆ ಹಾಕುವುದು, ಬಡಿಸುವುದು. ನನಗೆ ಮತ್ತು ನನ್ನ ಜೊತೆಯ ಹೆಣ್ಣು ಮಕ್ಕಳಿಗೆ ನೀರು ಕೊಡುವ ಕೆಲಸ; ಬಡಿಸುವ ಎಲ್ಲರಿಗೂ ಎಲ್ಲರೂ ಪರಸ್ಪರ ಪರಿಚಯ ಇರುವುದರಿಂದಾಗಿ, ಏನು ಬೇಕೆಂದು ಕೇಳಿ ಕೇಳಿ ಬಡಿಸುತ್ತಿಿದ್ದರು. ಊಟದ ನಡುವೆ, ಮದುವೆ ಮಾಡಿಸುವವರು ಎಲ್ಲರಿಗೂ ಉಪಚಾರ ಹೇಳಿ, ‘ನಿಧಾನವಾಗಿ ಊಟ ಮಾಡಿ’ ಎನ್ನುತ್ತಿಿದ್ದರು.

ಸೊಗಡಿನ ಮದುವೆಯ ನೆನಪುಗಳ ಮುಂದೆ ಹಣ ದುಬ್ಬರದ ಆಧುನಿಕ ಮದುವೆಗಳು ಯಾವ ಲೆಕ್ಕಕ್ಕೂ ಇಲ್ಲ. ಹಳೆಯ ಶೈಲಿಯಲ್ಲಿ, ಸಾಧ್ಯವಾದಷ್ಟೂ ಸಂಪ್ರದಾಯಗಳನ್ನು ಒಳಗೂಡಿಸಿಕೊಂಡು ನಡೆಯುವ ಲಗ್ನಕ್ಕೆೆ ಅದರದ್ದೇ ಆದ ಪಾವಿತ್ರ್ಯತೆ ಇದೆ. ಅಂತಹ ಸಂಪ್ರದಾಯನ್ನೊೊಳಗೊಂಡು ನಮ್ಮ ಚಿಕ್ಕಪ್ಪ ಮದುವೆಯಾದರು. ಆದರೆ ಅದೇ ಕೊನೆ, ಮತ್ತೆೆ ಈ ರೀತಿಯ ಸಂಭ್ರಮದ ಮದುವೆ ನನಗೆ ದೊರಕಲಿಲ್ಲ. ತಂತ್ರಜ್ಞಾಾನ ಬೆಳೆದಂತೆ, ಜನರು ಹೆಚ್ಚು ಹೆಚ್ಚು ಶ್ರೀಮಂತರಾದಂತೆ, ನಗರದ ಪ್ರಭಾವ ಹೆಚ್ಚಳಗೊಂಡಂತೆಲ್ಲಾಾ, ಆತ್ಮೀಯ ಸಂಬಂಧ ಮರೆತು, ಮದುವೆಯತ್ತ ಜನರು ಮಾರುಹೋಗಿದ್ದಾಾರೆ. ಅಂತಹ ಮದುವೆಗಳಲ್ಲಿ ಝಗಮಗಿಸುವ ಬೆಳಕು, ಕೃತಕ ಆಚರಣೆಗಳು ಜಾಸ್ತಿಿ ಕಂಡು ಬಂದರೂ, ಆತ್ಮೀಯತೆಯನ್ನು ಹುಡುಕುವುದು ಕಷ್ಟ ಎಂದೇ ನನ್ನ ಭಾವನೆ.