* ಮಂಜುಳಾ ಎನ್ ಶಿಕಾರಿಪುರ
ನಮ್ಮ ದೇಶದಲ್ಲಿ ಮದುವೆಯ ಪ್ರಮುಖ ಅಂಗ ಎಂದರೆ ಮದುಮಗನು ಮದುಮಗಳಿಗೆ ತಾಳಿ ಕಟ್ಟುವುದು. ಆ ಒಂದು ಸಂಪ್ರದಾಯದ ಆಚರಣೆಯು ಮದುವೆಗೆ ಅರ್ಥಪೂರ್ಣ ಮುನ್ನುಡಿ ಬರೆಯುತ್ತದೆ.
ಮದುವೆ ಅನ್ನೋೋದು ಗಂಡು ಹೆಣ್ಣಿಿನ ಜೀವನದ ಹೊಸ ಅಧ್ಯಾಾಯ. ಹೊಸ ಜೀವನದ ಪುಟ ತೆರೆಯೋಕೆ ಹೊಸ ಹೊಸ ಕನಸುಗಳೊಂದಿಗೆ ಎರಡು ಜೀವಗಳು ಸೇರುವ ಸುಸಮಯ. ಇಷ್ಟು ದಿನ ಒಬ್ಬಂಟಿಯಾಗಿದ್ದ ಜೀವಗಳು ಜೊತೆಯಾಗಿ ಹೆಜ್ಜೆೆ ಹಾಕುತ್ತಾಾ ಮುನ್ನುಡಿ ಬರೆಯುವ ಘಳಿಗೆಯೇ ಈ ಮದುವೆ ಎಂಬ ಬಂಧನ.
ಹೆಣ್ಣೊೊಬ್ಬಳು ತಾನು ಹುಟ್ಟಿಿ ಬೆಳೆದ ಮನೆಯನ್ನ ತನ್ನವರನ್ನೆೆಲ್ಲಾ ಬಿಟ್ಟು ಇನ್ನೊೊಂದು ಕುಟುಂಬದ ಜವಾಬ್ದಾಾರಿ ಹೊರುತ್ತಾಾಳೆ . ತನ್ನ ಜೀವನ ಸಂಗಾತಿ ಬದುಕಿಗೆ ಸಾಥಿಯಾಗಿ ನಿಲ್ಲುತ್ತಾಾಳೆ. ಅದೇ ಗಂಡು ತನ್ನ ಒಪ್ಪಿಿ ಬರುವ ಹೆಣ್ಣಿಿನ ನಂಬಿಕೆಗೆ ಹೆಗಲಾಗಿ ಕೈ ಹಿಡಿದು ನಡೆಸುವ ಮೂಲಕ ಜೊತೆಯಾಗುತ್ತಾಾನೆ.ಈ ರೀತಿ ಒಬ್ಬರನ್ನೊೊಬ್ಬರು ಪರಸ್ಪರ ಕಷ್ಟಸುಖಗಳನ್ನೆೆಲ್ಲಾ ಅರ್ಥೈಸಿಕೊಂಡು ಸಾಮರಸ್ಯದಿಂದ ಬಾಳುವುದೇ ಈ ಮದುವೆ. ಈ ಮದುವೆ ಅನ್ನೋೋದು ಪ್ರೀತಿ ಎನ್ನೋೋ ಪವಿತ್ರವಾದ ಸಂಬಂಧವನ್ನು ಸಂಭ್ರಮಿಸೋ ಮೊದಲ ಹೆಜ್ಜೆೆ . ಮದುವೆಯಲ್ಲಿನ ಏಳು ಹೆಜ್ಜೆೆಗಳು ಏಳು ಜನ್ಮಗಳ ಅನುಬಂಧ ಸಾರುತ್ತದೆ.
ಈ ಸಂಬಂಧಗಳನ್ನ ಬೆಸೆಯುವ ಮೂಲಕ ಸಮಾಜದಲ್ಲಿ ಮನ್ನಣೆ ಪಡೆದಿರೋ ಈ ಮದುವೆ ಸ್ವರ್ಗದಲ್ಲಿ ನಿಶ್ಚಯವಾಗಿರುತ್ತದೆ ಎಂದು ಹೇಳಲಾಗುತ್ತದೆ. ಇಂತಹ ಶುಭ ಸಮಾರಂಭದಲ್ಲಿ ನಮ್ಮ ದೇಶದ ಸಂಪ್ರದಾಯದಲ್ಲಿ ಮಾಂಗಲ್ಯಧಾರಣೆ ಎನ್ನುವುದು ಬಹುಮುಖ್ಯ ಭಾಗ. ಮಾಂಗಲ್ಯಧಾರಣೆ ಎಂದರೆ ಒಳ್ಳೆೆಯದನ್ನ ಧರಿಸುವುದು ಎಂಬ ಅರ್ಥವನ್ನು ಸಹ ನೀಡುತ್ತದೆ.
ಇಂತಹ ಮದುವೆಯಲ್ಲಿ ಒಂದು ಮಾಂಗಲ್ಯವನ್ನು ಗಂಡಿನ ಕಡೆಯವರು ಮತ್ತು ಇನ್ನೊೊಂದನ್ನು ಹೆಣ್ಣಿಿನ ಕಡೆಯವರು ಸೇರಿ ತರುವ ಮೂಲಕ ಹೆಣ್ಣಿಿನ ಕೊರಳಿಗೆ ಗಂಡು ಕಟ್ಟುತ್ತಾಾನೆ. ಜೀವನದ ಕೊನೆಕ್ಷಣದವರೆಗೂ ನೆರಳಂತೆ ಜೊತೆಯಾಗಿರುತ್ತೇನೆ ಅಂತ ಗಂಡು ಹೆಣ್ಣಿಿಗೆ ನೀಡುವ ನಂಬಿಕೆಯೇ ಮಾಂಗಲ್ಯಧಾರಣೆಯ ಅರ್ಥ. ಮಾಂಗಲ್ಯ ಕಟ್ಟಿಿದ ನಂತರವೇ ಮದುವೆ ಮುಗಿಯಿತು ಎಂದು ನಿರ್ಧರಿಸಲಾಗುತ್ತದೆ.
ಮೂರು ಗಂಟಿನ ನಂಟು
ಸಾಮಾನ್ಯವಾಗಿ ಮಾಂಗಲ್ಯಧಾರಣೆ ಸಮಯದಲ್ಲಿ ಮೂರು ಗಂಟು ಹಾಕಲಾಗುತ್ತದೆ. ಜೋಡಿಯಾಗಿ ಜೊತೆಯಾಗಿ ಹೆಣ್ಣುಗಂಡು ಬಾಳಬೇಕೆಂದು ಹಿರಿಯರು ಆಶೀರ್ವದಿಸುತ್ತಾಾರೆ.
ಗಂಡು ಕಟ್ಟುವ ಮೂರು ಗಂಟುಗಳು ವಿಶೇಷ ಅರ್ಥವನ್ನು ಹೊಂದಿವೆ.
ಧರ್ಮೇಚ :- ಅಂದರೆ ಧರ್ಮದೊಂದಿಗೆ ನಾನು ನನ್ನ ಹೆಂಡತಿಯೊಂದಿಗೆ ನಡೆದುಕೊಳ್ಳುತ್ತೇನೆ ಎಂದು.
ಅರ್ಥೇಚ :- ನಾನು ಧನವನ್ನು ಅವಳೊಂದಿಗೆ ಅನುಭವಿಸುತ್ತೇನೆ.
ಕಾಮೇಚ :- ಅಂದರೆ ತಾನು ತನ್ನ ಕೋರಿಕೆಗಳನ್ನ ಹೆಂಡತಿಯೊಂದಿಗೆ ತೀರಿಸಿಕೊಳ್ಳುತ್ತೇನೆ ಎಂದು.
ಈ ರೀತಿಯಾಗಿ ಮೂರು ಗಂಟಿನ ಮೂಲಕ ಬಾಳ ನಂಟನ್ನು ಬೆಸೆಯುವ ಮೂಲಕ ಹೊಸ ಜೀವನಕ್ಕೆೆ ಕಾಲಿಡುತ್ತಾಾರೆ.
ಒಂದು ವೇಳೆ ಮಾಂಗಲ್ಯ ಬದಲಾಯಿಸಬೇಕು ಎಂದರೆ ಮೊದಲಿಗೆ ಅರಿಶಿಣ ದಾರದ ಜೊತೆ ಮಾಂಗಲ್ಯ ಸೇರಿಸಿ ಕೊರಳಿಗೆ ಹಾಕಿಕೊಂಡ ಮೇಲೆಯೇ ಬದಲಾಯಿಸುವ ರೂಢಿ ಇಂದಿಗೂ ಪ್ರಚಲಿತದಲ್ಲಿದೆ . ಅದಕ್ಕೆೆ ಕಾರಣ ಮದುವೆ ಎಂಬುದು ಪವಿತ್ರವಾದ ಬಂಧನ.
ಮಾಂಗಲ್ಯದ ವಿನ್ಯಾಾಸಗಳು ಪ್ರಾಾದೇಶಿಕವಾಗಿ ಬದಲಾಗುವುದು ಗಮನಕ್ಕೆೆ ಬರುತ್ತದೆ. ಸಾಮಾನ್ಯವಾಗಿ ಚಿನ್ನದ ತಾಳಿಯನ್ನು ಕರಿಮಣಿಗಳ ದಾರದಲ್ಲಿ ಪೋಣಿಸಿ, ಕುತ್ತಿಿಗೆಯಲ್ಲಿ ಧರಿಸುವುದು ಹೆಚ್ಚು ಜನಪ್ರಿಿಯ. ಕ್ರಮೇಣ, ಜನರ ಆರ್ಥಿಕ ಸ್ಥಿಿತಿ ಉತ್ತಮಗೊಂಡಂತೆಲ್ಲಾಾ, ಕರಿಮಣಿಯಗಳ ನಡುವೆ ಚಿನ್ನದ ಚೈನುಗಳನ್ನು ಜೋಡಿಸುವುದು, ಚಿನ್ನದ ಗುಂಡುಗಳನ್ನು ಸೇರಿಸುವುದು ಚಾಲ್ತಿಿಗೆ ಬಂತು. ಸ್ಥಿಿತಿವಂತರು ಹೆಚ್ಚು ಚಿನ್ನ ಬಳಸಿ ಸರವನ್ನು ಮಾಡಿ, ಒಂದೆರಡು ಕರಿಮಣಿಗಳನ್ನು ಶಾಸ್ತ್ರಕ್ಕೆೆಂಬಂತೆ ಪೋಣಿಸಿ, ತಾಳಿಯನ್ನು ನಡುವೆ ಜೋಡಿಸುವುದು ಕಂಡುಬರುತ್ತದೆ. ಕೆಲವರು ಚಿನ್ನದ ಸರದಲ್ಲಿ ತಾಳಿ ಅಳವಡಿಸಿ, ಕರಿಮಣಿ ಇಲ್ಲದೆಯೂ ಮಾಂಗಲ್ಯವನ್ನು ತಯಾರಿಸುವುದು ಕಂಡುಬರುತ್ತದೆ. ಕರಾವಳಿಯವರು ಹವಳವನ್ನು, ಕೆಂಪುಮಣಿಯನ್ನು ಸಹ ಈ ಸರದಲ್ಲಿ ಸೇರಿಸುವುದುಂಟು. ನಮ್ಮ ದೇಶದ ದಕ್ಷಿಿಣ ಭಾಗದಲ್ಲಿ ಬಣ್ಣದ ದಾರ ಮತ್ತು ಅರಶಿನದ ಕೊಂಬನ್ನು ತಾಳಿಯ ಬದಲಾಗಿ ಕೆಲವು ಬಾರಿ ಉಪಯೋಗಿಸುವುದು ರೂಢಿಯಲ್ಲಿದೆ. ಓರ್ವ ಗಂಡು ಅರಶಿನದ ಕೊಂಬನ್ನು ಹೆಣ್ಣಿಿನ ಕುತ್ತಿಿಗೆಗೆ ಕಟ್ಟಿಿದರೆ, ಮಾಂಗಲ್ಯಧಾರಣೆಯ ಶಾಸ್ತ್ರ ನಡೆಯಿತೆಂದು ತಿಳಿಯುವ ಹಲವಾರು ಸಮಾಜಗಳಿವೆ. ಕಪ್ಪುು ಮಣಿಗಳ ಸರವನ್ನು ಕುತ್ತಿಿಗೆಯಲ್ಲಿ ಧರಿಸುವ ಹೆಣ್ಣು ಗೃಹಿಣಿಯಾಗುವ ಶುಭ ಸಂದರ್ಭ ಮತ್ತು ಈ ಪದ್ಧತಿ ಅರ್ಥಪೂರ್ಣ ಎನಿಸುತ್ತದೆ.
ಮದುವೆಯ ಸಂದರ್ಭದಲ್ಲಿ ತಾಳಿ ಕಟ್ಟುವ ಸಂಪ್ರದಾಯ ಬಹಳ ವಿಶೇಷ. ತಾಳಿಯನ್ನು ಮದುಮಗಳಿಗೆ ಕಟ್ಟುವ ಮುನ್ನ, ಅದನ್ನು ಮೂರು ಅಥವಾ ಐವರು ಮುತ್ತೈದೆಯರು ಮುಟ್ಟಿಿ, ಹರಸುವುದುಂಟು. ‘ಮದುಮಗಳು ಈ ತಾಳಿಯನ್ನು ಕಟ್ಟಿಿಸಿಕೊಂಡು, ನೂರ್ಕಾಾಲ ಸುಖವಾಗಿ ಬಾಳಲಿ, ನೆಮ್ಮದಿಯಿಂದ ಸಂಸಾರ ನಡೆಸಲಿ, ಹಲವು ಮಕ್ಕಳ ತಾಯಾಗಿ, ಯಶಸ್ವಿಿ ಗೃಹಿಣಿಯಾಗಿ ಜೀವನ ನಡೆಸಲಿ’ ಎಂಬ ಆ ಮುತ್ತೈದೆಯರ ಹರಕೆ ಎಷ್ಟೊೊಂದು ಅರ್ಥಗರ್ಭಿತ ಅಲ್ಲವೆ?