Wednesday, 11th December 2024

ಎಲ್ಲದಕ್ಕೂ ಬೇಕೆ ಪತಿಯ ಅನುಮತಿ ?

ನಳಿನಿ. ಟಿ. ಭೀಮಪ್ಪ , ಧಾರವಾಡ

ಎಕ್ಸಿಬಿಷನ್ನಿಗೆ ಹೋಗಿದ್ದೆವು. ಅಲ್ಲಿ ಅಡುಗೆ ಮನೆಗೆ ಬೇಕಾಗುವ ಸಾಮಾನುಗಳನ್ನು ನೋಡುತ್ತಿರುವಾಗ ತುಂಬಾ ಅನುಕೂಲಸ್ಥ ಮನೆಯವರ ಹಾಗೆ ಕಾಣುತ್ತಿದ್ದ ಒಬ್ಬಾಕೆ ತರಕಾರಿ ಸಿಪ್ಪೆ ಹೆರೆಯುವ ಪೀಲರ್ ಅನ್ನು ಹಿಡಿದು ಪಕ್ಕದಲ್ಲಿದ್ದ ಗಂಡನಿಗೆ ತೋರಿಸಿ, ‘ರೀ, ಮನೆಯಲ್ಲಿದ್ದ ಪೀಲರ್ ಹಾಳಾಗಿದೆ, ತೆಗೆದುಕೊಳ್ಳಲಾ’ ಎಂದು ಕೇಳುತ್ತಿದ್ದಳು.

‘ಏನೂ ಬೇಡ ಸುಮ್ನೆ ನಡೀ’ ಎಂದು ಗಟ್ಟನೆ ಗದರಿಸಿದ ಆ ಗಂಡ. ‘ಬರೀ ಮೂವತ್ತು ರೂಪಾಯಿ ರೀ’ ಎಂದರೂ ಗಮನ ಕೊಡದೆ ಆತ ಹೊರಗೆ ನಡೆದಾಗ, ಮುಖ ಸಪ್ಪಗೆ ಮಾಡಿಕೊಂಡ ಆಕೆ ಅದನ್ನು ಅಲ್ಲಿಯೇ ಇಟ್ಟು ಅವನನ್ನು ಹಿಂಬಾಲಿಸಿದಳು. ದೊಡ್ಡ ಇನ್ನೋವಾ ಗಾಡಿಯನ್ನು ಹತ್ತಿ ಹೊರಟು ಬಿಟ್ಟರು. ಕೇವಲ ಮೂವತ್ತು ರೂಪಾಯಿ ಖರ್ಚು ಮಾಡುವುದಕ್ಕೆ ಗಂಡನನ್ನು ಅಷ್ಟೊಂದು ಗೋಗರೆಯುತ್ತಿದ್ದ ಆ ಹೆಣ್ಣುಮಗಳ ಚಿತ್ರವು ಅದೆಷ್ಟೋ ದಿನ ನನ್ನ ಕಣ್ಣ ಮುಂದೆ ಬಂದು ಪದೇ ಪದೇ ಕಾಡುತ್ತಿತ್ತು.

ಅಷ್ಟು ಅನುಕೂಲಸ್ಥರ ಮನೆಯ ಹೆಣ್ಣಿಗೆ ಕೇವಲ ಮೂವತ್ತು ರೂಪಾಯಿ ಖರ್ಚು ಮಾಡುವ ಸ್ವಾತಂತ್ರ್ಯವಿಲ್ಲವೇ ಎಂದು ಅಚ್ಚರಿ. ಮತ್ತೊಬ್ಬ ಗೆಳತಿ ಹೇಳುತ್ತಿದ್ದು ನೆನಪಾಯಿತು. ಇಪ್ಪತ್ತು ವರ್ಷವಾದರೂ ಆಕೆಗೆ ಇದೂವರೆಗೂ ಒಂದು ಸೀರೆ ಅಥವಾ ಡ್ರೆಸ್ಸ್‌ ಅಥವಾ ಒಡವೆ ಆಯ್ಕೆ ಮಾಡುವ ಸ್ವಾತಂತ್ರ್ಯ ಇಲ್ಲ. ಎಲ್ಲವನ್ನೂ ಆಕೆಯ ಯಜಮಾನರೇ ಆರಿಸಿ ತರುತ್ತಿದ್ದರು. ಮತ್ತೆ ಎಲ್ಲವೂ
ಸಹ ತುಂಬಾ ಬೆಲೆಬಾಳುವಂತಹುವೇ. ಜೊತೆಗೆ ಬ್ಲೌಸ್ ಹೊಲೆಯಲು ಕೊಡುವುದಕ್ಕೆ ಹೋದಾಗಲೂ ಸಹ ಅವರೇ ಮುಂದೆ ನಿಂತು ಕ್ಯಾಟಲಾಗ್ ಪರಿಶೀಲಿಸಿ, ‘ಇಂಥಾ ಡಿಸೈನ್ ಹೊಲೆಯಿರಿ, ಎದೆಯಳತೆ ಸರಿಯಾಗಿ ತೆಗೆದುಕೊಳ್ಳಿ, ಅಲ್ಲಿ ಫಿಟ್ಟಿಂಗ್ ಸರಿಯಿರ ಬೇಕು’ ಎಂದೆಲ್ಲ ಟೈಲರ್‌ಗೆ ಹೇಳುವಾಗ ತುಂಬಾ ಮುಜುಗರವಾಗುತ್ತದೆ

ಕಣೇ ಎನ್ನುವಾಗ ಹಿಡಿಯಾಗಿದ್ದಳು. ಎಷ್ಟೋ ವಿವಾಹಿತ ಮಹಿಳೆಯರು ಆರ್ಥಿಕವಾಗಿ ತುಂಬಾ ಸಬಲರಾಗಿದ್ದರೂ ಅವರಿಗೆ ಸ್ವಂತ ಆಯ್ಕೆ ಹಾಗೂ ತಮ್ಮಿಚ್ಚೆಯಂತೆ ಖರ್ಚು ಮಾಡುವ ಸ್ವಾತಂತ್ರ್ಯ ಇಲ್ಲ. ಹೆಂಡತಿಯ ಕೈಗೆ ಲಕ್ಷಗಟ್ಟಲೆ ಬ್ಯಾಂಕ್ ಬ್ಯಾಲೆನ್ಸ್‌ ಇರುವ ಎಟಿಎಮ್ ಕಾರ್ಡು ಕೊಟ್ಟಿದ್ದರೂ, ಪ್ರತಿಯೊಂದು ನೊಟಿಫಿಕೇಷನ್ಸೂ ಸಹ ಗಂಡನ ಮೊಬೈಲಿಗೆ ರವಾನೆಯಾಗುವಾಗ ಏನು ತಾನೇ ಮಾಡಲು ಸಾಧ್ಯ.

ಬರೀ ಆ ಬಿಲ್ಲು, ಈ ಬಿಲ್ಲು ಅಂತಾ ಆನ್‌ಲೈನ್‌ನಲ್ಲಿ ಕಟ್ಟುವಂತಹ, ಆವಶ್ಯಕ ಖರೀದಿಗೆ ಮಾತ್ರ ಆಕೆಗೆ ಅನುಮತಿ. ಕೈಗೆ ಕೊಟ್ಟ ಪ್ರತಿ ರೂಪಾಯಿಗೂ ಲೆಕ್ಕ ಹೇಳುವ ಪರಿಸ್ಥಿತಿ. ಚೂರು ಹೆಚ್ಚು ಕಮ್ಮಿಯಾದರೂ ಯಾಕೆ? ಏನು? ಎತ್ತ? ಸಾಕಷ್ಟು ವಿಚಾರಣೆ ಗಳನ್ನು ಆಕೆ ಎದುರಿಸಬೇಕಾಗುತ್ತದೆ. ಅನಾವಶ್ಯಕವಾಗಿ ಖರ್ಚು ಮಾಡುವುದಂತೂ ದೂರದ ಮಾತು. ಮನೆಯಲ್ಲಿ ಎಲ್ಲಾ ಇದೆ, ನೀ ಹೇಳಿದ್ದನ್ನೆಲ್ಲಾ ತಂದು ಹಾಕ್ತೀನಿ, ಬೇಕಾದ ಹಾಗೆ ಒಡವೆ, ವಸ್ತ್ರ ಕೊಡಿಸಿದ್ದೇನೆ, ಮತ್ತೇನು ಖರ್ಚಿರುತ್ತದೆ ನಿನಗೆ ಎಂದು ದಬಾಯಿಸುವವರೇ ಹೆಚ್ಚು. ಕುಡಿಯೋದಿಕ್ಕೆ, ಮಜಾ ಮಾಡುವುದಕ್ಕೆ ಸಾವಿರಾರು ರೂಪಾಯಿಗಳನ್ನು ಉಡಾಯಿಸುವ ಗಂಡ ಸರು, ಹೆಂಡತಿಯ ಚಿಕ್ಕ ಪುಟ್ಟ ಬೇಡಿಕೆಗಳಿಗೆ ಸ್ಪಂದಿಸದೇ ಇರುವುದು ದುರ್ದೈವ.

ಐವತ್ತು ಇಂಚಿನ ಟಿವಿಗೆ ಸಲೀಸಾಗಿ ಹಣ ಪಾವತಿಸುವ ಇವರು ಐವತ್ತು ರೂಪಾಯಿಯ ಚಾಕು, ಎಪ್ಪತ್ತು ರೂಪಾಯಿಯ ಸೌಟು ಖರೀದಿಸಲು ಹಿಂದೆ ಮುಂದೆ ನೋಡುತ್ತಾರೆ. ದಿನದ ಮೂರು ಹೊತ್ತೂ ಅಡುಗೆ ಮನೆಯಲ್ಲಿ ಬೇಯಿಸುವ ಗೃಹಿಣಿಯರಿಗೆ ಇಂತಹ
ಚಿಕ್ಕ ಪುಟ್ಟ ಸಾಮಾನುಗಳ ಅವಶ್ಯಕತೆಯ ಮಹತ್ವ ಅವರಿಗೆ ಗೊತ್ತಾಗುವುದೇ ಇಲ್ಲ. ಅತಿಥಿಗಳನ್ನು ಮೆಚ್ಚಿಸಲು, ಅವರ ಸತ್ಕಾರಕ್ಕೆ ಬೆಲೆಬಾಳುವ ತಟ್ಟೆಲೋಟಗಳ ಖರೀದಿಗೆ ಮುಂದಾಗುತ್ತಾರೆಯೇ ಹೊರತು, ಅಡುಗೆ ಮನೆಯಲ್ಲಿ ಗೃಹಿಣಿಗೆ ಅವಶ್ಯಕ ವಾಗಿ ಬೇಕಾಗುವ ಪರಿಕರಗಳ ಬಗ್ಗೆ ಯೋಚಿಸುವುದು ಕಡಿಮೆ.

ಹಲವಾರು ವರ್ಷಗಳಿಂದ ಅದೇ ಹರಕು, ಮುರುಕು ಪಾತ್ರೆಗಳ ಜೊತೆ ಗುದ್ದಾಡುವ ಆಕೆಯ ಒದ್ದಾಟದ ಅರಿವಿರುವುದಿಲ್ಲ.
ಸ್ವಾವಲಂಬನೆ ಇದಕ್ಕೆ ಇರುವ ಪರಿಹಾರ ಎಂದರೆ ಮಹಿಳೆ ಉದ್ಯೋಗಸ್ಥಳಾಗಿ ಸ್ವಾವಲಂಬಿಯಾಗುವುದು. ಯಾರ ಮುಂದೆಯೂ ಬೊಗಸೆಯೊಡ್ಡದೆ ತಾನೇ ದುಡಿದು ಗಳಿಸಿದ ಹಣವನ್ನು ತನ್ನಿಚ್ಛೆಯಂತೆ ಖರ್ಚು ಮಾಡುವ ಸಂತೃಪ್ತಿ ಆಕೆಯ ಪಾಲಿನ ದೊಡ್ಡ ಖುಷಿ ಎಂದೇ ಹೇಳಬಹುದು.

ಆದರೆ ವಿವಾಹಿತ ಉದ್ಯೋಗಸ್ಥ ಮಹಿಳೆಗೆ ಆ ಸ್ವಾತಂತ್ರ್ಯ ಇದೆಯಾ? ಕೆಲವರು ಮಾತ್ರ ಆ ಅದೃಷ್ಟ ಪಡೆದು ಬಂದಿರುತ್ತಾರೆ. ಬಹುತೇಕರಿಗೆ ಇಲ್ಲ. ಮದುವೆಯಾಗುತ್ತಿದ್ದಂತೆ ಆಕೆಯ ಸಂಬಳವೆಲ್ಲ ಗಂಡನ ಮನೆಯವರಿಗೇ ಮೀಸಲು ಎನ್ನುವ ಅಲಿಖಿತ
ನಿಯಮಕ್ಕೆ ಆಕೆ ಇಷ್ಟವಿಲ್ಲದಿದ್ದರೂ ತಲೆಬಾಗಲೇಬೇಕಾಗುತ್ತದೆ. ಇರಲಿ, ತಪ್ಪೇನೂ ಇಲ್ಲ. ಆದರೆ ಸಂಬಳ ಬರುತ್ತಿದ್ದ ಹಾಗೆ ಎಲ್ಲವನ್ನೂ ಗಂಡನ ಅಕೌಂಟಿಗೆ ವರ್ಗಾಯಿಸಿ, ತಿಂಗಳ ಖರ್ಚಿಗೆ ಬೊಗಸೆಯೊಡ್ಡ ಬೇಕಾದ ಪರಿಸ್ಥಿತಿ ಎಷ್ಟೋ ಮಹಿಳೆಯರದು. ಅದೂ ಅಲ್ಲದಿದ್ದರೆ ಜಾಯಿಂಟ್ ಅಕೌಂಟಿಗೆ. ಆಕೆಗೆ ಅದರಲ್ಲಿನ ಒಂದು ಪೈಸೆಯೂ ಸ್ವ ಇಚ್ಚೆಯಂತೆ ಖರ್ಚು ಮಾಡುವ ಸ್ವಾತಂತ್ರ್ಯ ಕಡಿಮೆ.

ಎಷ್ಟೋ ಸಲ ಮನೆ ಕಟ್ಟುವುದಕ್ಕೋ, ಮತ್ಯಾವುದಕ್ಕೋ ದೊಡ್ಡ ಮೊತ್ತದ ಲೋನ್ ತೆಗೆಸಿ ಆಕೆಯ ಸಂಬಳವೆಲ್ಲಾ ಅದಕ್ಕೇ ಕಟ್ಟುವುದಕ್ಕೆ ಕಟ್ಟಾಗಿ ಹೋಗುತ್ತಿರುತ್ತದೆ. ತನ್ನ ಸ್ನೇಹಿತರಿಗೋ, ಹತ್ತಿರದವರಿಗೋ ಹಣದ ಅವಶ್ಯಕತೆ ಇದ್ದಾಗ ಆಕೆ ಹೂಂ ಅನ್ನಲಾಗದೆ, ಊಹೂಂ ಅನ್ನಲಾಗದೆ ಕೈ ಕೈ ಹಿಸುಕಿಕೊಳ್ಳುವ ಪರಿಸ್ಥಿತಿ ಎದುರಾಗಿರುತ್ತದೆ. ಒಂದು ಸೀರೆಗೂ, ಕಾಂಪ್ಯಾಕ್ಟ್‌ ಪೌಡರ್‌ಗೂ ಗಂಡನನ್ನು ಪುಸಲಾಯಿಸಬೇಕಾದ ಅನಿವಾರ್ಯತೆ. ತವರು ಮನೆಯ ಕಡೆಯ ಸಮಾರಂಭಗಳಿಗೆ ಉಡುಗೊರೆ ಕೊಡುವಾಗಲೂ ಸಹ, ಹಣ ತನ್ನದೇ ಆದರೂ ಗಂಡನ ಅನುಮತಿ ಬೇಕೇ ಬೇಕು. ಇದೆಲ್ಲಾ ಗಂಡನ ಮನೆಯವರಿಗೆ ಗೊತ್ತಿದ್ದರೂ ಸಹ ‘ಅಯ್ಯೊ, ಲಕ್ಷಗಟ್ಟಲೆ ದುಡಿತಾಳೆ, ಇದೂವರೆಗೂ ನಾವೇನ್ ಆಕೆಯದು ಒಂದು ಪೈಸನೂ ಕಂಡಿಲ್ಲ, ಸೊಸೆ ಬಂದ್ರೂ ನಮಗೆ ಮಾಡಾಕೋದು ತಪ್ಪಿಲ್ಲ’ ಎಂದು ಹಂಗಿಸುವವರೇ ಹೆಚ್ಚು.

ಹೆಚ್ಚು ಕಡಿಮೆ ಎಲ್ಲ ದುಡಿಯುವ ಮಹಿಳೆಯರ ಪರಿಸ್ಥಿತಿಯೂ ಇದೇ. ದುಡಿದ ಹಣ ತನ್ನ ಕೈಯ್ಯಲ್ಲಿ ಸಿಗದಿದ್ದರೂ ಪರವಾಗಿಲ್ಲ, ಒಂದು ಆತ್ಮತೃಪ್ತಿ, ಏನಾದರೂ ಸಾಧಿಸುವ ಹಂಬಲ ಹೊತ್ತು ಅಲೆಯುತ್ತಿರುವ ಜೀವಗಳು ಅವು. ದುಡಿದ ಹಣಕ್ಕಿಂತ, ದುಡಿಮೆ ಯಲ್ಲಿ ಸುಖ ಅರಸುವ ಅವರ ಪರಿಸ್ಥಿತಿ ಕೊಂಚ ಬದಲಾದರೂ ಅದೆಷ್ಟೋ ನೆಮ್ಮದಿ ಕಾಣುತ್ತವೆ.

ಗೃಹಿಣಿಯಾಗಲೀ, ಉದ್ಯೋಗಸ್ಥಳಾಗಲೀ, ಒಟ್ಟಿನಲ್ಲಿ ಹೆಣ್ಣಿಗೆ ಸ್ವಲ್ಪವಾದರೂ ಆಯ್ಕೆ ಮತ್ತು ಸ್ವಾತಂತ್ರ್ಯದ ಅವಕಾಶ ಸಿಕ್ಕರೆ ಸಾಕು, ತನ್ನ ಮನೆ, ತನ್ನವರಿಗಾಗಿ ಮತ್ತಷ್ಟು ಅರ್ಪಣಾಭಾವದಿಂದ, ಜೀವನೋತ್ಸಾಹದಿಂದ ಪುಟಿಯುತ್ತ ಜೀವಿಸಲು ಶುರು
ಮಾಡುವುದು ಖಂಡಿತ, ಅಲ್ಲವೇ?ಎಕ್ಸಿಬಿಷನ್ನಿಗೆ ಹೋಗಿದ್ದೆವು. ಅಲ್ಲಿ ಅಡುಗೆ ಮನೆಗೆ ಬೇಕಾಗುವ ಸಾಮಾನುಗಳನ್ನು ನೋಡು ತ್ತಿರುವಾಗ ತುಂಬಾ ಅನುಕೂಲಸ್ಥ ಮನೆಯವರ ಹಾಗೆ ಕಾಣುತ್ತಿದ್ದ ಒಬ್ಬಾಕೆ ತರಕಾರಿ ಸಿಪ್ಪೆೆ ಹೆರೆಯುವ ಪೀಲರ್ ಅನ್ನು ಹಿಡಿದು ಪಕ್ಕದಲ್ಲಿದ್ದ ಗಂಡನಿಗೆ ತೋರಿಸಿ, ‘ರೀ, ಮನೆಯಲ್ಲಿದ್ದ ಪೀಲರ್ ಹಾಳಾಗಿದೆ, ತೆಗೆದುಕೊಳ್ಳಲಾ’ ಎಂದು ಕೇಳುತ್ತಿದ್ದಳು.

‘ಏನೂ ಬೇಡ ಸುಮ್ನೆ ನಡೀ’ ಎಂದು ಗಟ್ಟನೆ ಗದರಿಸಿದ ಆ ಗಂಡ. ‘ಬರೀ ಮೂವತ್ತು ರೂಪಾಯಿ ರೀ’ ಎಂದರೂ ಗಮನ ಕೊಡದೆ ಆತ ಹೊರಗೆ ನಡೆದಾಗ, ಮುಖ ಸಪ್ಪಗೆ ಮಾಡಿಕೊಂಡ ಆಕೆ ಅದನ್ನು ಅಲ್ಲಿಯೇ ಇಟ್ಟು ಅವನನ್ನು ಹಿಂಬಾಲಿಸಿದಳು. ದೊಡ್ಡ ಇನ್ನೋವಾ ಗಾಡಿಯನ್ನು ಹತ್ತಿ ಹೊರಟುಬಿಟ್ಟರು. ಕೇವಲ ಮೂವತ್ತು ರೂಪಾಯಿ ಖರ್ಚು ಮಾಡುವುದಕ್ಕೆ ಗಂಡನನ್ನು ಅಷ್ಟೋಂದು ಗೋಗರೆಯುತ್ತಿದ್ದ ಆ ಹೆಣ್ಣುಮಗಳ ಚಿತ್ರವು ಅದೆಷ್ಟೋ ದಿನ ನನ್ನ ಕಣ್ಣ ಮುಂದೆ ಬಂದು ಪದೇ ಪದೇ ಕಾಡು ತ್ತಿತ್ತು.

ಅಷ್ಟು ಅನುಕೂಲಸ್ಥರ ಮನೆಯ ಹೆಣ್ಣಿಗೆ ಕೇವಲ ಮೂವತ್ತು ರೂಪಾಯಿ ಖರ್ಚು ಮಾಡುವ ಸ್ವಾತಂತ್ರ್ಯವಿಲ್ಲವೇ ಎಂದು ಅಚ್ಚರಿ. ಮತ್ತೊಬ್ಬ ಗೆಳತಿ ಹೇಳುತ್ತಿದ್ದು ನೆನಪಾಯಿತು. ಇಪ್ಪತ್ತು ವರ್ಷವಾದರೂ ಆಕೆಗೆ ಇದೂವರೆಗೂ ಒಂದು ಸೀರೆ ಅಥವಾ ಡ್ರೆಸ್ಸ್‌ ಅಥವಾ ಒಡವೆ ಆಯ್ಕೆ ಮಾಡುವ ಸ್ವಾತಂತ್ರ್ಯ ಇಲ್ಲ. ಎಲ್ಲವನ್ನೂ ಆಕೆಯ ಯಜಮಾನರೇ ಆರಿಸಿ ತರುತ್ತಿದ್ದರು. ಮತ್ತೆ ಎಲ್ಲವೂ
ಸಹ ತುಂಬಾ ಬೆಲೆಬಾಳುವಂತಹುವೇ. ಜೊತೆಗೆ ಬ್ಲೌಸ್ ಹೊಲೆಯಲು ಕೊಡುವುದಕ್ಕೆ ಹೋದಾಗಲೂ ಸಹ ಅವರೇ ಮುಂದೆ ನಿಂತು ಕ್ಯಾಟಲಾಗ್ ಪರಿಶೀಲಿಸಿ, ‘ಇಂಥಾ ಡಿಸೈನ್ ಹೊಲೆಯಿರಿ, ಎದೆಯಳತೆ ಸರಿಯಾಗಿ ತೆಗೆದುಕೊಳ್ಳಿ, ಅಲ್ಲಿ ಫಿಟ್ಟಿಂಗ್ ಸರಿಯಿ ರಬೇಕು’ ಎಂದೆಲ್ಲ ಟೈಲರ್‌ಗೆ ಹೇಳುವಾಗ ತುಂಬಾ ಮುಜುಗರವಾಗುತ್ತದೆ ಕಣೇ ಎನ್ನುವಾಗ ಹಿಡಿಯಾಗಿದ್ದಳು.

ಎಷ್ಟೋ ವಿವಾಹಿತ ಮಹಿಳೆಯರು ಆರ್ಥಿಕವಾಗಿ ತುಂಬಾ ಸಬಲರಾಗಿದ್ದರೂ ಅವರಿಗೆ ಸ್ವಂತ ಆಯ್ಕೆ ಹಾಗೂ ತಮ್ಮಿಚ್ಚೆಯಂತೆ ಖರ್ಚು ಮಾಡುವ ಸ್ವಾತಂತ್ರ್ಯ ಇಲ್ಲ. ಹೆಂಡತಿಯ ಕೈಗೆ ಲಕ್ಷಗಟ್ಟಲೆ ಬ್ಯಾಂಕ್ ಬ್ಯಾಲೆನ್ಸ್‌ ಇರುವ ಎಟಿಎಮ್ ಕಾರ್ಡು ಕೊಟ್ಟಿ ದ್ದರೂ, ಪ್ರತಿಯೊಂದು ನೊಟಿಫಿಕೇಷನ್ಸೂ ಸಹ ಗಂಡನ ಮೊಬೈಲಿಗೆ ರವಾನೆಯಾಗುವಾಗ ಏನು ತಾನೇ ಮಾಡಲು ಸಾಧ್ಯ. ಬರೀ ಆ ಬಿಲ್ಲು, ಈ ಬಿಲ್ಲು ಅಂತಾ ಆನ್‌ಲೈನ್‌ನಲ್ಲಿ ಕಟ್ಟುವಂತಹ, ಆವಶ್ಯಕ ಖರೀದಿಗೆ ಮಾತ್ರ ಆಕೆಗೆ ಅನುಮತಿ. ಕೈಗೆ ಕೊಟ್ಟ ಪ್ರತಿ ರೂಪಾಯಿಗೂ ಲೆಕ್ಕ ಹೇಳುವ ಪರಿಸ್ಥಿತಿ. ಚೂರು ಹೆಚ್ಚು ಕಮ್ಮಿಯಾದರೂ ಯಾಕೆ? ಏನು? ಎತ್ತ? ಸಾಕಷ್ಟು ವಿಚಾರಣೆಗಳನ್ನು ಆಕೆ ಎದುರಿಸಬೇಕಾಗುತ್ತದೆ.

ಅನಾವಶ್ಯಕವಾಗಿ ಖರ್ಚು ಮಾಡುವುದಂತೂ ದೂರದ ಮಾತು. ಮನೆಯಲ್ಲಿ ಎಲ್ಲಾ ಇದೆ, ನೀ ಹೇಳಿದ್ದನ್ನೆಲ್ಲಾ ತಂದು ಹಾಕ್ತೀನಿ, ಬೇಕಾದ ಹಾಗೆ ಒಡವೆ, ವಸ್ತ್ರ ಕೊಡಿಸಿದ್ದೇನೆ, ಮತ್ತೇನು ಖರ್ಚಿರುತ್ತದೆ ನಿನಗೆ ಎಂದು ದಬಾಯಿಸುವವರೇ ಹೆಚ್ಚು.  ಕುಡಿಯೋ ದಿಕ್ಕೆ, ಮಜಾ ಮಾಡುವುದಕ್ಕೆ ಸಾವಿರಾರು ರೂಪಾಯಿಗಳನ್ನು ಉಡಾಯಿಸುವ ಗಂಡಸರು, ಹೆಂಡತಿಯ ಚಿಕ್ಕ ಪುಟ್ಟ ಬೇಡಿಕೆ ಗಳಿಗೆ ಸ್ಪಂದಿಸದೇ ಇರುವುದು ದುರ್ದೈವ. ಐವತ್ತು ಇಂಚಿನ ಟಿವಿಗೆ ಸಲೀಸಾಗಿ ಹಣ ಪಾವತಿಸುವ ಇವರು ಐವತ್ತು ರೂಪಾಯಿಯ ಚಾಕು, ಎಪ್ಪತ್ತು ರೂಪಾಯಿಯ ಸೌಟು ಖರೀದಿಸಲು ಹಿಂದೆ ಮುಂದೆ ನೋಡುತ್ತಾರೆ.

ದಿನದ ಮೂರು ಹೊತ್ತೂ ಅಡುಗೆ ಮನೆ ಯಲ್ಲಿ ಬೇಯಿಸುವ ಗೃಹಿಣಿಯರಿಗೆ ಇಂತಹ ಚಿಕ್ಕ ಪುಟ್ಟ ಸಾಮಾನುಗಳ ಅವಶ್ಯಕತೆಯ ಮಹತ್ವ ಅವರಿಗೆ ಗೊತ್ತಾಗುವುದೇ ಇಲ್ಲ. ಅತಿಥಿಗಳನ್ನು ಮೆಚ್ಚಿಸಲು, ಅವರ ಸತ್ಕಾರಕ್ಕೆ ಬೆಲೆಬಾಳುವ ತಟ್ಟೆಲೋಟಗಳ ಖರೀದಿಗೆ ಮುಂದಾಗು ತ್ತಾರೆಯೇ ಹೊರತು, ಅಡುಗೆ ಮನೆಯಲ್ಲಿ ಗೃಹಿಣಿಗೆ ಅವಶ್ಯಕವಾಗಿ ಬೇಕಾಗುವ ಪರಿಕರಗಳ ಬಗ್ಗೆ ಯೋಚಿಸುವುದು ಕಡಿಮೆ. ಹಲವಾರು ವರ್ಷಗಳಿಂದ ಅದೇ ಹರಕು, ಮುರುಕು ಪಾತ್ರೆಗಳ ಜೊತೆ ಗುದ್ದಾಡುವ ಆಕೆಯ ಒದ್ದಾಟದ ಅರಿವಿರುವುದಿಲ್ಲ.

ಸ್ವಾವಲಂಬನೆ ಇದಕ್ಕೆ ಇರುವ ಪರಿಹಾರ ಎಂದರೆ ಮಹಿಳೆ ಉದ್ಯೋಗಸ್ಥಳಾಗಿ ಸ್ವಾವಲಂಬಿಯಾಗುವುದು. ಯಾರ ಮುಂದೆಯೂ ಬೊಗಸೆಯೊಡ್ಡದೆ ತಾನೇ ದುಡಿದು ಗಳಿಸಿದ ಹಣವನ್ನು ತನ್ನಿಚ್ಛೆಯಂತೆ ಖರ್ಚು ಮಾಡುವ ಸಂತೃಪ್ತಿ ಆಕೆಯ ಪಾಲಿನ ದೊಡ್ಡ ಖುಷಿ ಎಂದೇ ಹೇಳಬಹುದು. ಆದರೆ ವಿವಾಹಿತ ಉದ್ಯೋಗಸ್ಥ ಮಹಿಳೆಗೆ ಆ ಸ್ವಾತಂತ್ರ್ಯ ಇದೆಯಾ? ಕೆಲವರು ಮಾತ್ರ ಆ ಅದೃಷ್ಟ ಪಡೆದು ಬಂದಿರುತ್ತಾರೆ.

ಬಹುತೇಕರಿಗೆ ಇಲ್ಲ . ಮದುವೆಯಾಗುತ್ತಿದ್ದಂತೆ ಆಕೆಯ ಸಂಬಳವೆಲ್ಲ ಗಂಡನ ಮನೆಯವರಿಗೇ ಮೀಸಲು ಎನ್ನುವ ಅಲಿಖಿತ
ನಿಯಮಕ್ಕೆೆ ಆಕೆ ಇಷ್ಟವಿಲ್ಲದಿದ್ದರೂ ತಲೆಬಾಗಲೇಬೇಕಾಗುತ್ತದೆ. ಇರಲಿ, ತಪ್ಪೇನೂ ಇಲ್ಲ. ಆದರೆ ಸಂಬಳ ಬರುತ್ತಿದ್ದ ಹಾಗೆ ಎಲ್ಲವನ್ನೂ ಗಂಡನ ಅಕೌಂಟಿಗೆ ವರ್ಗಾಯಿಸಿ, ತಿಂಗಳ ಖರ್ಚಿಗೆ ಬೊಗಸೆಯೊಡ್ಡ ಬೇಕಾದ ಪರಿಸ್ಥಿತಿ ಎಷ್ಟೋ ಮಹಿಳೆಯರದು. ಅದೂ ಅಲ್ಲದಿದ್ದರೆ ಜಾಯಿಂಟ್ ಅಕೌಂಟಿಗೆ. ಆಕೆಗೆ ಅದರಲ್ಲಿನ ಒಂದು ಪೈಸೆಯೂ ಸ್ವಇಚ್ಚೆಯಂತೆ ಖರ್ಚು ಮಾಡುವ ಸ್ವಾತಂತ್ರ್ಯ ಕಡಿಮೆ. ಎಷ್ಟೋ ಸಲ ಮನೆ ಕಟ್ಟುವುದಕ್ಕೋ, ಮತ್ಯಾವುದಕ್ಕೋ ದೊಡ್ಡ ಮೊತ್ತದ ಲೋನ್ ತೆಗೆಸಿ ಆಕೆಯ ಸಂಬಳ ವೆಲ್ಲಾ ಅದಕ್ಕೇ ಕಟ್ಟುವುದಕ್ಕೆ ಕಟ್ಟಾಗಿ ಹೋಗುತ್ತಿರುತ್ತದೆ.

ತನ್ನ ಸ್ನೇಹಿತರಿಗೋ, ಹತ್ತಿರದವರಿಗೋ ಹಣದ ಅವಶ್ಯಕತೆ ಇದ್ದಾಗ ಆಕೆ ಹೂಂ ಅನ್ನಲಾಗದೆ, ಊಹೂಂ ಅನ್ನಲಾಗದೆ ಕೈ ಕೈ
ಹಿಸುಕಿಕೊಳ್ಳುವ ಪರಿಸ್ಥಿತಿ ಎದುರಾಗಿರುತ್ತದೆ. ಒಂದು ಸೀರೆಗೂ, ಕಾಂಪ್ಯಾಕ್ಟ್‌ ಪೌಡರ್‌ಗೂ ಗಂಡನನ್ನು ಪುಸಲಾಯಿಸಬೇಕಾದ ಅನಿವಾರ್ಯತೆ. ತವರು ಮನೆಯ ಕಡೆಯ ಸಮಾರಂಭಗಳಿಗೆ ಉಡುಗೊರೆ ಕೊಡುವಾಗಲೂ ಸಹ, ಹಣ ತನ್ನದೇ ಆದರೂ ಗಂಡನ ಅನುಮತಿ ಬೇಕೇ ಬೇಕು. ಇದೆಲ್ಲಾ ಗಂಡನ ಮನೆಯವರಿಗೆ ಗೊತ್ತಿದ್ದರೂ ಸಹ ‘ಅಯ್ಯೊ, ಲಕ್ಷಗಟ್ಟಲೆ ದುಡಿತಾಳೆ, ಇದೂವರೆಗೂ ನಾವೇನ್ ಆಕೆಯದು ಒಂದು ಪೈಸನೂ ಕಂಡಿಲ್ಲ, ಸೊಸೆ ಬಂದ್ರೂ ನಮಗೆ ಮಾಡಾಕೋದು ತಪ್ಪಿಲ್ಲ’ ಎಂದು ಹಂಗಿಸುವವರೇ ಹೆಚ್ಚು.

ಹೆಚ್ಚು ಕಡಿಮೆ ಎಲ್ಲ ದುಡಿಯುವ ಮಹಿಳೆಯರ ಪರಿಸ್ಥಿತಿಯೂ ಇದೇ. ದುಡಿದ ಹಣ ತನ್ನ ಕೈಯ್ಯಲ್ಲಿ ಸಿಗದಿದ್ದರೂ ಪರವಾಗಿಲ್ಲ, ಒಂದು ಆತ್ಮತೃಪ್ತಿ, ಏನಾದರೂ ಸಾಧಿಸುವ ಹಂಬಲ ಹೊತ್ತು ಅಲೆಯುತ್ತಿರುವ ಜೀವಗಳು ಅವು. ದುಡಿದ ಹಣಕ್ಕಿಂತ, ದುಡಿಮೆ ಯಲ್ಲಿ ಸುಖ ಅರಸುವ ಅವರ ಪರಿಸ್ಥಿತಿ ಕೊಂಚ ಬದಲಾದರೂ ಅದೆಷ್ಟೋ ನೆಮ್ಮದಿ ಕಾಣುತ್ತವೆ. ಗೃಹಿಣಿಯಾಗಲೀ, ಉದ್ಯೋಗ ಸ್ಥಳಾಗಲೀ, ಒಟ್ಟಿನಲ್ಲಿ ಹೆಣ್ಣಿಗೆ ಸ್ವಲ್ಪವಾದರೂ ಆಯ್ಕೆ ಮತ್ತು ಸ್ವಾತಂತ್ರ್ಯದ ಅವಕಾಶ ಸಿಕ್ಕರೆ ಸಾಕು, ತನ್ನ ಮನೆ, ತನ್ನವರಿಗಾಗಿ ಮತ್ತಷ್ಟು ಅರ್ಪಣಾಭಾವದಿಂದ, ಜೀವನೋತ್ಸಾಹದಿಂದ ಪುಟಿಯುತ್ತ ಜೀವಿಸಲು ಶುರು ಮಾಡುವುದು ಖಂಡಿತ, ಅಲ್ಲವೇ?