* ಗೌರಿ ಚಂದ್ರಕೇಸರಿ
ಸಂಸಾರದಲ್ಲಿ ಸಾಮರಸ್ಯ ಸದಾ ಕಾಲ ಇರಬೇಕೆನ್ನುವುದು ಒಂದು ಆಶಯ. ಆದರೆ ಕಾರಣಾಂತರಗಳಿಂದ ಸತಿ-ಪತಿಯರಲ್ಲಿ ಮನಸ್ತಾಾಪ ತಲೆ ದೋರಬಹುದು, ವಾದ ವಿವಾದ ಅಂತಹ ಸಂದರ್ಭಗಳಲ್ಲಿ, ತಾಳ್ಮೆೆ, ಸಹನೆ ಅತಿ ಮುಖ್ಯ.
ಗಂಡ-ಹೆಂಡತಿ ಎಂಬ ಬೆಸುಗೆಯಲ್ಲಿ ಬೆಸೆದುಕೊಂಡಾಗ ಅಲ್ಲಿ ಸ್ನೇಹ, ಪ್ರೀತಿ, ಕಾಳಜಿ, ಪರಸ್ಪರ ಗೌರವಿಸುವ ಮನೋಭಾವವಿರಬೇಕು. ಪ್ರತಿಯೊಬ್ಬರಲ್ಲೂ ಆತ್ಮ ಗೌರವವಿರುವುದು ಮಾನವ ಸಹಜ ಗುಣ. ಆದರೆ ಸುದೀರ್ಘಕಾಲ ಜತೆಯಲ್ಲಿರುವ ಸಂದರ್ಭಗಳಲ್ಲಿ, ಕೆಲವೊಮ್ಮೆೆ ಸಂಗಾತಿಯ ವರ್ತನೆಯಿಂದ ಮನಸ್ಸು ಘಾಸಿಗೊಳ್ಳುವ ಪ್ರಸಂಗಗಳು ನಡೆಯುತ್ತವೆ. ಇದರಿಂದ ಗಟ್ಟಿಿಗೊಂಡ ಸಂಬಂಧಗಳಲ್ಲಿ ಬಿರುಕು ಮೂಡಲು ನಾವಾಗಿಯೇ ಆಸ್ಪದಕ್ಕೆೆಡೆ ಮಾಡಿ ಕೊಟ್ಟಂತಾಗುತ್ತದೆ. ಅವರ ಬಗ್ಗೆೆ ತುಚ್ಛ ಭಾವನೆ ಮೂಡಲೂಬಹುದು.
ಸಾರ್ವಜನಿಕ ಸ್ಥಳಗಳಲ್ಲಿ, ಬಸ್ಸು, ರೈಲುಗಳಲ್ಲಿ ಪ್ರಯಾಣಿಸುವಾಗ ಅಪ್ರಿಿಯ ಎನ್ನಿಿಸುವ ಪ್ರಸಂಗಗಳಿಗೆ ಕಣ್ಣಾಾಗಬೇಕಾಗುತ್ತದೆ, ಕಿವಿಯಾಗಬೇಕಾಗುತ್ತದೆ. ಕೆಲವು ಗಂಡ-ಹೆಂಡತಿ ಜನನಿಬಿಡ ಸ್ಥಳಗಳಲ್ಲಿ ಪರಸ್ಪರ ವಾದ ಜಗಳಗಳಲ್ಲಿ ತೊಡಗಿರುವುದನ್ನು ಕಾಣುತ್ತೇವೆ. ಒಬ್ಬರು ಸೇರಾದರೆ ಇನ್ನೊೊಬ್ಬರು ಸವ್ವಾಾ ಸೇರು ಎನ್ನುವಂತೆ ಜನರ ಪರಿವೆಯೂ ಇಲ್ಲದೆ ಕಿತ್ತಾಾಡುತ್ತಿಿರುತ್ತಾಾರೆ. ತಾವಿರುವುದು ಸಾರ್ವಜನಿಕ ಸ್ಥಳದಲ್ಲಿ ಎನ್ನುವುದನ್ನೂ ಮರೆತು ಒಬ್ಬರಿನ್ನೊೊಬ್ಬರ ಮೇಲೆ ದೋಷಾರೋಪಣೆಯನ್ನು ಮಾಡುತ್ತಿಿರುತ್ತಾಾರೆ. ಇನ್ನು ಅಪರೂಪದ ಸಂದರ್ಭಗಳಲ್ಲಿ, ಗಂಡನಾದವನು ಹೆಂಡತಿಯ ಮೇಲೆ ಕೈ ಮಾಡುವ ಪ್ರಸಂಗಗಳೂ ನಡೆಯುತ್ತವೆ. ನೋಡುಗರಿಗೆ ಮನರಂಜನೆ ಎನ್ನಿಿಸಿದರೂ ಆ ಜೋಡಿಯ ಬಗ್ಗೆೆ ತಾತ್ಸಾಾರ ಮೂಡುವುದು ಖಂಡಿತ.
ಕೆಲವರಿಗೆ ಒಂದು ಕೆಟ್ಟ ಚಟ ಇದೆ. ತಮ್ಮ ಸ್ನೇಹಿತರ ಗುಂಪಿನಲ್ಲಿ ಮಾತಿನ ಭರದಲ್ಲಿ ತಮ್ಮ ಸಂಗಾತಿಯನ್ನು ತೆಗಳುವುದನ್ನು ಕಾಣುತ್ತೇವೆ. ‘ಇವಳಿಗೆ ಅಡುಗೆಯ ಗಂಧ ಗಾಳಿಯೂ ಗೊತ್ತಿಿಲ್ಲ. ಮಕ್ಕಳನ್ನು ಹೇಗೆ ಬೆಳೆಸಬೇಕೆಂಬ ಜ್ಞಾಾನವೂ ಇಲ್ಲ. ಇವನಿಗೆ ಬಟ್ಟೆೆಯನ್ನು ಹೇಗೆ ಧರಿಸಬೇಕೆಂಬ ಅಭಿರುಚಿ ಇಲ್ಲ, ಸೌಂದರ್ಯ ಪ್ರಜ್ಞೆ ಎಂಬುದು ಇಲ್ಲವೇ ಇಲ್ಲ’ ಈ ರೀತಿ ತಮ್ಮ ತಮ್ಮ ಸಂಗಾತಿಯನ್ನು ಪರಿಚಯಸ್ಥರ ಸ್ನೇಹಿತರ ಗುಂಪಿನಲ್ಲಿ ಹೀಯಾಳಿಸುವುದು ಉಂಟು. ಇದರಿಂದ ಪರಸ್ಪರ ಬಾಂಧವ್ಯಕ್ಕೆೆ ಕುತ್ತು ಬರಬಹುದು. ನಮ್ಮ ಬಗ್ಗೆೆ ನಾವು ಎಷ್ಟು ಗೌರವವನ್ನು ಹೊಂದಿರುತ್ತೇವೆಯೋ ಅದೇ ಗೌರವವನ್ನು ನಮ್ಮ ಸಂಗಾತಿಯ ಬಗ್ಗೆೆ ಹೊಂದಿರಬೇಕು. ಅಂದಾಗ ಮಾತ್ರ ಸಂಬಂಧಗಳು ಗಟ್ಟಿಿಗೊಳ್ಳಲು ಸಾಧ್ಯ. ಇಲ್ಲದಿದ್ದಲ್ಲಿ ಮಧ್ಯದಲ್ಲಿಯೇ ತುಂಡಾಗಿ ಹೋಗಬಹುದು.
ನಾಲ್ಕು ಗೋಡೆಗಳ ಮಧ್ಯೆೆ
ಗಂಡ ಅಥವಾ ತಮ್ಮ ಹೆಂಡತಿಯ ಪ್ರತಿ ಏನೇ ಅಸಮಧಾನಗಳಿದ್ದರೂ ಅವುಗಳನ್ನು ನಾಲ್ಕು ಗೋಡೆಯ ಮಧ್ಯದಲ್ಲಿ ಚರ್ಚಿಸಿ ಬಗೆ ಹರಿಸಿಕೊಳ್ಳಬೇಕು. ಕೋಪ ತಾಪ ಸಹಜ ಗುಣ. ಆದರೆ ಅದನ್ನು ನಿಯಂತ್ರಿಿಸಿಕೊಳ್ಳುವ ವ್ಯವಧಾನವಿರಬೇಕು. ಒಬ್ಬರಿನ್ನೊೊಬ್ಬರ ಮೇಲೆ ಕೈ ಮಾಡುವುದಾಗಲಿ, ದೌರ್ಜನ್ಯವನ್ನು ಎಸಗುವುದು ಅಪರಾಧವಷ್ಟೇ ಅಲ್ಲ ಅದು ಹೇಯ ಮನಸ್ಥಿಿತಿ. ನಮ್ಮಲ್ಲಿನ ಅರಿಷಡ್ವರ್ಗಗಳನ್ನು ಅಂಕೆಯಲ್ಲಿಟ್ಟುಕೊಳ್ಳಲು ರೂಢಿಸಿಕೊಳ್ಳಬೇಕು.
ತಮ್ಮ ಅನಿಯಂತ್ರಿಿತ ವರ್ತನೆಗಳು, ಅತೀವ ಕೋಪ, ಮುಂಗೋಪ, ದಾರ್ಷ್ಟ್ಯ ಮನೋಭಾವದ ಕಾರಣದಿಂದ ಸಾರ್ವಜನಿಕ ಸ್ಥಳಗಳಲ್ಲಿ ಅಸಹನೀಯವೆನಿಸುವಂತಹ ವರ್ತನೆಗಳನ್ನು ತೋರುತ್ತಾಾರೆ. ಇದರಿಂದ ತಮ್ಮ ಸಂಗಾತಿಯಷ್ಟೇ ಅಲ್ಲದೆ ತಾವೂ ಕೂಡ ಅವಮಾನಿತರಾಗುತ್ತಾಾರೆ. ಸಭ್ಯತೆಯ ರೇಖೆಯನ್ನು ಮೀರಬಾರದೆನ್ನುವ ಕಾರಣದಿಂದ ಕೆಲವರು ಗಂಡ/ಹೆಂಡತಿಯ ಎದುರಾಡದೇ ಅವಮಾನವನ್ನು ಸಹಿಸಿಕೊಂಡು ಸುಮ್ಮನಾಗುತ್ತಾಾರೆ. ಆದರೆ ಕೆಲವರು ತಮಗಾದ ಅವಮಾನಕ್ಕೆೆ ಸ್ಥಳದಲ್ಲಿಯೇ ಸೇಡು ತೀರಿಸಿಕೊಳ್ಳಲು ಮುಂದಾಗಿ ಸಾರ್ವಜನಿಕರ ಗಮನವನ್ನು ತಮ್ಮೆೆಡೆ ಸೆಳೆದುಕೊಳ್ಳುತ್ತಾಾರೆ. ಇಂಥ ಪ್ರಸಂಗಗಳಲ್ಲಿ ಅವರ ಮಕ್ಕಳು ಜೊತೆಗಿದ್ದಲ್ಲಿ ಮಕ್ಕಳ ಮೇಲೆ ಕೈ ಮಾಡುವುದರ ಮೂಲಕ ತಮ್ಮ ಒತ್ತಡವನ್ನು ಹೊರ ಹಾಕುತ್ತಾಾರೆ. ಇದರಿಂದ ಮಕ್ಕಳ ಮೇಲಾಗುವ ಪರಿಣಾಮ ಅತ್ಯಂತ ಘೋರವಾಗಿರುತ್ತದೆ. ಮಕ್ಕಳು ಅಸುರಕ್ಷಿತ ಭಾವನೆಯಿಂದ ನರಳುವುದಲ್ಲದೆ ತಮ್ಮ ಪಾಲಕರ ಪ್ರತಿ ದ್ವೇಷದ ಭಾವನೆಯನ್ನು ಬೆಳೆಸಿಕೊಳ್ಳುತ್ತ ಹೋಗುತ್ತಾಾರೆ. ಅಲ್ಲದೆ ಅವರ ಜೊತೆಗೆ ಹೋಗುವುದನ್ನು ತಪ್ಪಿಿಸಿಕೊಳ್ಳಲು ನೆಪಗಳನ್ನು ಒಡ್ಡುತ್ತಾಾರೆ.
ಬಡವನ ಕೋಪ ದವಡೆಗೇ ಮೂಲ. ಕೋಪ, ಹಿಂಸಾ ಪ್ರವೃತ್ತಿಿಗಳನ್ನು ನಿಗ್ರಹಿಸಿ ನಡೆದಾಗ ಸೂಕ್ಷ್ಮವಾದ ಸಂಬಂಧ ಧಕ್ಕೆೆಗೊಳ್ಳದೇ ಮುಂದುವರಿಯಬಲ್ಲದು.