Friday, 13th December 2024

ಯಾರಲ್ಲಿ ಪ್ರೀತಿ ?

ಪವನ್ ಆಚಾರ್ಯ

ಪ್ರಪಂಚದಲ್ಲಿ ಯಾರು, ಯಾರನ್ನು ಅತಿಯಾಗಿ ಪ್ರೀತಿಸಿರಬಹುದು? ಇದೊಂದು ಯಕ್ಷ ಪ್ರಶ್ನೆಯೇ ಸರಿ. ಯಾಕೆಂದರೆ  ಒಬ್ಬೊಬ್ಬ ರಲ್ಲಿ ಒಂದೊಂದು ಉತ್ತರಗಳಿರಬಹುದು. ಕೆಲವರು ಶಾಜಹಾನ್ಞ ಮುಂತಾಜ್ ಅಂದರೆ, ಪುರಾಣ ಜ್ಞಾನವಿರುವವರು
ರಾಮ-ಸೀತೆ, ಕೃಷ್ಣ-ರಾಧೆ ಅಂದರೆ ಕೆಲವರು ಸಿನೆಮಾ ಗಳಲ್ಲಿ ಬರುವ ಕಥೆಯನ್ನೇ ವರ್ಣಿಸಬಹುದು.

ಆದರೆ ಇದ್ಯಾವುದೂ ಅಲ್ಲ. ಪ್ರೀತಿ ಎಂದರೆ ನಂಬಿಕೆ, ವಿಶ್ವಾಸ, ಒಬ್ಬರ ನ್ನೊಬ್ಬರು ಅರ್ಥ ಮಾಡುವಂತದ್ದು, ಪ್ರಾಯದ ಮಿತಿ ಯಿಲ್ಲದೆ, ಆಕರ್ಷಣೆಗೆ ಒಳಗಾಗದೆ ಕೇವಲ ಹೃದಯ ದಿಂದ ಬರುವಂತದ್ದು, ಅಂತರಾತ್ಮದಿಂದ ಉದ್ಭವಿಸುವಂತದ್ದು, ಅಂತೆಲ್ಲಾ ಮನಸಿಲ್ಲದೆ ಮನ ಶಾಸೀಯವಾಗಿ, ನಾಟಕೀಯವಾಗಿ ವಾದ ಮಾಡುವವರು ಇದ್ದಾರೆ.

ಒಬ್ಬ ಭಕ್ತನಲ್ಲಿ ಹೋಗಿ ಕೇಳಿದರೆ ಅವನಿಗೆ ದೇವರೇ ಪ್ರೀತಿ. ಒಬ್ಬ ಕಾರ್ಮಿಕನಲ್ಲಿ ಕೇಳಿದರೆ ಅವನ ಕೆಲಸವೇ ಪ್ರೀತಿ. ಒಬ್ಬ ಗಂಡನಲ್ಲಿ ಕೇಳಿದರೆ ಅವನಿಗೆ ಹೆಂಡತಿಯೇ ಪ್ರೀತಿ. ಒಬ್ಬ ಅಣ್ಣನಲ್ಲಿ ಕೇಳಿದರೆ ಅವನಿಗೆ ತಂಗಿಯೇ ಪ್ರೀತಿ. ಆದರೆ ಯಾವುದು ಯಾರಿಗೆ ಮುಖ್ಯವೋ ಅದುವೇ ಪ್ರೀತಿಯಾ?. ಈಗೆಲ್ಲಾ ಅಗತ್ಯವಿದ್ದರೆ ಪ್ರೀತಿ ಮಾಡುವವರು ಹೆಚ್ಚಾಗಿದ್ದಾರೆ. ಕೆಲವರಿಗೆ ಹಣದ ಮೇಲೆ ಪ್ರೀತಿ, ಚಿನ್ನ, ಬೆಳ್ಳಿ, ವಜ್ರ ವೈಡೂರ‍್ಯ ಮುಂತಾದ ಬೆಲೆಬಾಳುವು ದರಲ್ಲಿ ಪ್ರೀತಿ. ಜಾಗದ ಮೇಲೆ, ಕಟ್ಟಡದ ಮೇಲೆ ಎಲ್ಲೆಲ್ಲೂ ಪ್ರೀತಿ. ಅದರಲ್ಲೂ ಇತ್ತೀಚೆಗೆ ವಾಹನ ಪ್ರೇಮಿಗಳ ಸಂಖ್ಯೆ ಹೆಚ್ಚಾಗುತ್ತಾ ಬರುತ್ತಿದೆ.

ಹಾಗದರೆ ವಸ್ತುಗಳ ಮೇಲಿನ ಪ್ರೀತಿ ಸತ್ಯವೇ? ಇನ್ನೂ ಕೆಲವು ವಿಚಿತ್ರ ವ್ಯಾಖ್ಯಾನಗಳಿವೆ. ಊರಿಡೀ ಪ್ರೀತಿಗಾಗಿ ಹುಡುಕಾಡಿ, ಸುತ್ತಮುತ್ತಲಿನ ಎಲ್ಲಾ ಹುಡುಗಿಯರಲ್ಲಿ ಯಾಚಿಸಿ, ಕೊನೆಗೂ ಯಾವುದೂ ಸಿಗುವುದಿಲ್ಲಾ ಎಂದುಬು ಅರಿವಿಗೆ ಬಂದಾಗ, ‘ಈ ಪ್ರಪಂಚದಲ್ಲಿ ನಿಜವಾದ ಪ್ರೀತಿಯೇ ಇಲ್ಲಾ’ ಎಂದು ಘೋಷಣೆ ಕೂಗುವವರು. ಅವರಿಗವರೇ ಹೊಸ ಸಿದ್ದಾಂತವನ್ನು ಸೃಷ್ಟಿಸಿ, ಊರುತುಂಬಾ ಪಾಠ ಮಾಡಿಕೊಂಡು; ಆ ನೋವನ್ನು ಇನ್ಯಾವುದೋ ರೀತಿಯಲ್ಲಿ ಮುಚ್ಚಿ ಹಾಕುವ ಪ್ರಯತ್ನ.

ಒಬ್ಬ ಹುಡುಗ -ಹುಡುಗಿ ಜತೆಯಲ್ಲಿದ್ದರೆ ಪ್ರೀತಿಯ ಪಟ್ಟ ಕಟ್ಟುವ ಕಾಲವಿದು. ಬರೀ ವಾಟ್ಸಾಪ್, ಫೇಸ್ ಬುಕ್ ಲವರ್‌ಗಳು ಹೆಚ್ಚಾಗಿದ್ದಾರೆ. ಅದರಲ್ಲಿ ಗಂಟೆಗಟ್ಟಲೆ ಹುಡುಗಿಯರೊಂದಿಗೆ ಮಾತನಾಡುವ ತಾಕತ್ತು ಒಂದು ನಿಮಿಷ ಅದೇ ಹುಡುಗಿಯ
ಮುಂದೆನಿಂತು ಕಣ್ಣಲ್ಲಿ ಕಣ್ಣಿಟ್ಟು ಮಾತಾಡುವುದರಲ್ಲಿಲ್ಲ. ಇವರಿಗೆಲ್ಲಾ ಮೊಬೈಲ್ ಲವರ‍್ಸ್ ಅಂತ ಹೆಸರಿಟ್ಟರೆ ಒಳ್ಳೆದಿತ್ತು.
ಮೊಬೈಲನ್ನು ಪ್ರೀತಿಸುವವರಲ್ಲ, ಮೊಬೈಲಲ್ಲಿ ಮಾತ್ರ ಪ್ರೀತಿಸುವ ವರು. ಕಾಲ ಹೇಗಾಗಿದೆ ಬಲ್ಲಿರಾ, ಹುಡುಗಿ ಜತೆನಿಂತ ಫೋಟೋ ಸ್ಟೇಟಸ್ ಹಾಕುವವರನ್ನು ಬೇಕಾದರೆ ನಂಬಿ; ಆದರೆ ನಾನು ಸಿಂಗಲ್ ಅಂತ ಸ್ಟೇಟಸ್ ಹಾಕುವವರೆಲ್ಲಾ ಹೆಚ್ಚಾಗಿ ಮಿಂಗಲ್ ಆಗೋಕೆ ಕಾಯ್ತಾ ಇರ್ತಾರೆ. ಪ್ರೀತಿಯ ಕಥೆ ಇಷ್ಟು, ಇನ್ನು ಮದುವೆ! ಇನ್ನೊಮ್ಮೆ ಹೇಳೋಣ ಬಿಡಿ.