*ನವೀನ್, ಶ್ರೀನಿವಾಸಪುರ
ನಿರಾಶ್ರಿಿತ ಮಕ್ಕಳ ಬಾಳಿಗೆ ಭರವಸೆಯ ಬೆಳಕಿನ ‘ಸ್ಪರ್ಶ’ ಶಿಕ್ಷಣದಿಂದ ವಂಚಿತರಾದ ಸಾವಿರಾರು ಮಕ್ಕಳಿಗೆ ಉತ್ತಮ ಭವಿಷ್ಯ ರೂಪಿಸುವಲ್ಲಿ ಆಶ್ರಯದಾತ ‘ಸ್ಪರ್ಶ ಟ್ರಸ್ಟ್’ 2005 ರಿಂದ ಸತತವಾಗಿ ಇಲ್ಲಿಯವರೆಗೂ ನಿರಾಶ್ರಿಿತ ಮಕ್ಕಳಿಗೆ ಉಚಿತ ಪ್ರಾಾಥಮಿಕ ಶಿಕ್ಷಣ, ಆಹಾರ ಹಾಗೂ ವಸತಿ ನೀಡಿ ಸ್ಪರ್ಶ ತನ್ನದೇ ಆದ ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತಾಾ ಬಂದಿದೆ.
ಇಂದಿನ ಮಕ್ಕಳೇ ಭವಿಷ್ಯದ ಪ್ರಜೆಗಳು ಎಂಬ ಮಾತೊಂದಿದೆ. ಆದರೆ ಇಂದು ಪೋಷಕರ ಅಸಹಾಯಕತೆಯಿಂದಾಗಿ ಲಕ್ಷಾಂತರ ಮಕ್ಕಳು ಮೂಲಸೌಕರ್ಯಗಳಿಂದ ವಂಚಿತರಾಗಿ, ಬೀದಿ ಬೀದಿಯಲ್ಲಿ ಚಿಂದಿ ಆಯುತ್ತಾಾ, ಚಿಕ್ಕ ಪುಟ್ಟ ಕೆಲಸ ಮಾಡುತ್ತಾಾ ಅಥವಾ ಭಿಕ್ಷೆ ಬೇಡುತ್ತಾಾ ದಿನದ ಮೂರು ಹೊತ್ತಿಿನ ಕೂಲಿಗಾಗಿ ಶ್ರಮಿಸುತ್ತಿಿದ್ದಾರೆ.
ನಾವೆಲ್ಲಾದರು ತಿರುಗಾಡುವಾಗ ಅನಾಥ ಮಕ್ಕಳು ಕಂಡು ಬಂದರೆ ಕರುಳು ಚುರ್ ಎನ್ನುತ್ತದೆ. ಅವರಿಗೆ ಒಂದಷ್ಟು ಹಣ ಅಥವಾ ಊಟ, ಬಟ್ಟೆೆ ನೀಡಿ ನಮ್ಮ ಜವಾಬ್ದಾಾರಿ ಮುಗಿಯಿತು ಅಂಥ ಸುಮ್ಮನಾಗಿಬಿಡುತ್ತೇವೆ. ಆದರೆ, ಆ ಮಕ್ಕಳ ಉಜ್ವಲ ಭವಿಷ್ಯದತ್ತ ನಾವು ಕೊಂಚ ಯೋಚಿಸಿದರೆ ಹೇಗಿರುತ್ತದೆ? ಮಕ್ಕಳ ಸರ್ವಾಂಗೀಣ ಬೆಳವಣಿಗೆಯ ಸಂಪೂರ್ಣ ಜವಾಬ್ದಾಾರಿ ತಂದೆ-ತಾಯಿಯಂದಿರದ್ದು, ಆದರೆ ಕಿತ್ತು ತಿನ್ನುವ ಬಡತನದಿಂದಾಗಿ ಮಕ್ಕಳ ಬಾಲ್ಯ ಕೇವಲ ಮೂರು ಕಾಸು ಸಂಪಾದಿಸುವಿಕೆಗೆ ಮೀಸಲಾದರೆ ಎಷ್ಟು ಸರಿ. ಈ ನಿಟ್ಟಿಿನಲ್ಲಿ ಸರಕಾರ, ಹಲವು ಸಂಘ-ಸಂಸ್ಥೆೆಗಳು, ಸರಕಾರೇತರ ಸಂಸ್ಥೆೆಗಳು ಸೇರಿದಂತೆ ನೂರಾರು ಟ್ರಸ್ಟ್ ಹಾಗೂ ಸ್ವಯಂ ಸಂಸ್ಥೆೆಗಳು ತಮ್ಮದೇ ಆದ ರೀತಿಯಲ್ಲಿ ಶ್ರಮಿಸುತ್ತಿಿವೆ. ಇಂತಹ ಟ್ರಸ್ಟ್ಗಳಲ್ಲಿ ಒಂದಾದ ‘ಸ್ಪರ್ಶ’ ಮೂಲತಃ ಬೆಂಗಳೂರಿನ ಸಂಸ್ಥೆೆ. ಯುವ ಮನಸ್ಸುಗಳಿಗೆ ಅರ್ಹ ಶಿಕ್ಷಣ ಪೂರೈಸುತ್ತಾಾ, ಅವರ ಹಕ್ಕು ಭಾದ್ಯತೆಗಳನ್ನು ಪಡೆಯುವಲ್ಲಿ ಹಾಗೂ ಅವರ ರಕ್ಷಣೆ ಹಾಗೂ ಅಭಿವೃದ್ಧಿಿಯ ಉದ್ದೇಶದೊಂದಿದೆ.
ಆರ್.ಗೋಪಿನಾಥ್ ಎಂಬುವವರು ತಮ್ಮ ಪತ್ನಿಿ ಚಿತ್ರ ಹಾಗೂ ಸ್ನೇಹಿತ ಡಿ.ಎಸ್ ಕೃಷ್ಣರವರ ಸಹಾಯಹಸ್ತದೊಂದಿಗೆ 2005 ರಲ್ಲಿ ಆರಂಭಸಿದ ಸ್ಪರ್ಶ ಟ್ರಸ್ಟ್ ಇಂದಿನವರೆಗೂ ನಾನಾ ಅಭಿವೃದ್ಧಿಿ ಕಾರ್ಯಗಳೊಂದಿಗೆ ಶ್ರಮಿಸುತ್ತಾಾ ಬಂದಿದೆ.
ಬೀದಿ ಮಕ್ಕಳ ಸಂಪೂರ್ಣ ಅಭಿವೃದ್ಧಿಿಯತ್ತ ನಿಗಾ ವಹಿಸಿರುವ ಸ್ಪರ್ಶ ಈಗಾಗಲೇ ‘ಶಿಕ್ಷಣ ಮಿತ್ರ’ ‘ಮಕ್ಕಳ ಮಿತ್ರ’ ‘ಚಿಣ್ಣರ ತಂಗುದಾಣ’ ‘ನಿಸರ್ಗಧಾಮ’ ‘ಆಪ್ತಮಿತ್ರ’ ಹೀಗೆ ನಾನಾ ಹೆಸರುಗಳುಳ್ಳ ಹಲವಾರು ಕೇಂದ್ರಗಳು ನಾನಾ ಬಗೆಯ ಉದ್ದೇಶಗಳೊಂದಿಗೆ ಸ್ಥಾಾಪಿಸಿದ್ದು ಸ್ಪರ್ಶ ಟ್ರಸ್ಟ್ ಸಾವಿರಾರು ಮಕ್ಕಳ ಉಜ್ವಲ ಭವಿಷ್ಯಕ್ಕೆೆ ಭರವಸೆಯ ಬೆಳಕಾಗಿದೆ ಎನ್ನಬಹುದು. ಸಂಸ್ಥಾಾಪಕ ಆರ್. ಗೋಪಿನಾಥ್ ಹೇಳುವಂತೆ ಶಿಕ್ಷಣ ವಂಚಿತ ಮಕ್ಕಳನ್ನು ಗುರುತಿಸಿದ ನಂತರ, ಪ್ರಸ್ತುತ ಬೆಂಗಳೂರು ನಗರದಲ್ಲಿರುವ ಏಳು ಸ್ಪರ್ಶ ಸೌಲಭ್ಯ ಕೇಂದ್ರಗಳಿಗೆ ಅವರನ್ನು ಕರೆತರುವುದು ಮೊದಲ ಹೆಜ್ಜೆೆಯಾಗಿದೆ.
ಪ್ರತಿ ವರ್ಷ 300 ಮಕ್ಕಳು ಸೇರ್ಪಡೆ
ಸೇತುವೆ ಶಾಲೆಯಲ್ಲಿ ಔಪಚಾರಿಕ ಶಿಕ್ಷಣ ನೀಡಿದ ನಂತರ ಅವರನ್ನು ಅವರ ಪೋಷಕರ ಬಳಿ ಬಿಡಲಾಗುತ್ತದೆ. ಒಂದು ವೇಳೆ, ಪೋಷಕರು ಮಕ್ಕಳಿಗೆ ಮುಂದಿನ ಹಂತದ ಶಿಕ್ಷಣ ಕೊಡಿಸುವಲ್ಲಿ ವಿಫಲರಾದರೆ ಅವರನ್ನು ತಾವೇ ಸರಕಾರಿ ಶಾಲೆ, ಹಾಸ್ಟೆೆಲ್ ಹಾಗೂ ಶಿಶುಪಾಲನ ಸಂಸ್ಥೆೆಗಳಿಗೆ ನೋಂದಾಯಿಸಲಾಗುತ್ತದೆ ಅಥವಾ ಅವರನ್ನು ಸ್ಪರ್ಶ ಸೌಲಭ್ಯ ಕೇಂದ್ರಗಳಲ್ಲಿ ಸೇರಿಸಲಾಗುತ್ತದೆ. ಸ್ಪರ್ಶ ಸಂಸ್ಥೆೆಗೆ ಪ್ರತೀ ವರ್ಷ ಕನಿಷ್ಠ 300 ಮಕ್ಕಳು ಸೇರ್ಪಡೆಯಾಗುತ್ತಾಾರೆ. ಅಲ್ಲದೇ 16 ವರ್ಷ ಮೇಲ್ಪಟ್ಟ ಯುವಕರಿಗೆ ವಿಶೇಷವಾಗಿ ಗ್ರಾಾಮೀಣ ಮಟ್ಟದಲ್ಲಿ ವೃತ್ತಿಿಪರ ತರಬೇತಿಗಳನ್ನು ಕೈಗೊಳ್ಳಲಾಗುತ್ತದೆ. ಸ್ಪರ್ಶ ಕೇಂದ್ರಗಳು ಸಂಪೂರ್ಣ ಗ್ರಂಥಾಲಯವಾಗಿದ್ದು ಮಕ್ಕಳ ಜ್ಞಾನಾರ್ಜನೆಗಾಗಿ ಉಪಯುಕ್ತವಾಗಿದೆ. ಸಮುದಾಯ ಮಟ್ಟಗಳಲ್ಲಿ ಸಣ್ಣ ಶಾಲೆಗಳಿದ್ದು, ಪೋಷಕರಿಂದ ದೂರವಾಗದೇ ಮಕ್ಕಳು ದಿನನಿತ್ಯ ಶಿಕ್ಷಣ ಪಡೆಯಬಹುದಾಗಿದೆ.
‘ಸ್ಪರ್ಶ’ದ ಹಿಂದಿನ ಕಥೆ
ಸಂಸ್ಥಾಾಪಕರಾದ ಗೋಪಿನಾಥ್ ಮೂಲತಃ ಕೋಲಾರ ಜಿಲ್ಲೆಯ ಮಂಚಿಗಾನ ಎಂಬ ಪುಟ್ಟ ಹಳ್ಳಿಿಯವರು. ನಾಲ್ಕು ಮಕ್ಕಳಿದ್ದ ವಿದ್ಯಾಾವಂತ ಕುಟುಂಬದ ಕೊನೆಯ ಪುತ್ರನಾಗಿ ಜನಿಸಿದ ಇವರ ಬಾಲ್ಯ ಸಂತೋಷದಿಂದ ಕೂಡಿರಲಿಲ್ಲ. ಕಾರಣ, ಅವರ ತಂದೆ ಮದ್ಯವ್ಯಸನಿಯಾಗಿದ್ದರಿಂದ, ಹಣಕ್ಕಾಾಗಿ ಕುಟುಂಬದ ಎಲ್ಲ ಆಸ್ತಿಿಯನ್ನು ಮಾರಿದರು. ಗೋಪಿನಾಥ್ ಮೂರು ವರ್ಷದವರಿದ್ದಾಗಲೇ ತಮ್ಮ ತಂದೆ ಅವರನ್ನು ಕೈಬಿಟ್ಟಿಿದ್ದರು. ದಾರಿ ಕಾಣದ ತಾಯಿ ತನ್ನ ಮಕ್ಕಳೊಂದಿಗೆ ಗುಡಿಸಿಲಿನಲ್ಲಿ ವಾಸಿಸಲು ಆರಂಭಿಸಿದರು. ಮೂರು ಹೊತ್ತಿಿನ ಊಟಕ್ಕಾಾಗಿ ಮಕ್ಕಳು ವಿದ್ಯಾಾಭ್ಯಾಾಸವನ್ನು ಮೊಟಕುಗೊಳಿಸಿ, ತಾಯಿಯೊಂದಿಗೆ ದುಡಿಯಲು ಆರಂಭಿಸಿದರು. ಗುಡಿಸಲಿನ ಕೊಟ್ಟಿಿಗೆ ಸ್ವಚ್ಛತೆ ಮಾಡುತ್ತಿಿದ್ದ ಗೋಪಿನಾಥ್, ಮಾಲೀಕರ ಮಕ್ಕಳು ಶಾಲೆಗೆ ಹೋಗುತ್ತಿಿದ್ದನ್ನು ನೋಡಿ ತಾನು ವಿದ್ಯಾಾಭ್ಯಾಾಸ ಪಡೆಯಲು
ಸಾಧ್ಯವಾಗುತ್ತಿಿಲ್ಲವಲ್ಲವೆಂದು ಕೊರಗುತ್ತಿಿದ್ದರಂತೆ. ಮನೆ ಬಿಟ್ಟು ಹೋಗಿದ್ದ ತಂದೆ ಆರು ವರ್ಷಗಳ ನಂತರ ಮರಳಿ ಮನೆಗೆ ಬಂದರು. ಬೆಂಗಳೂರಿನಲ್ಲಿ ಸ್ವಂತ ಉದ್ಯೋೋಗ ಆರಂಭಿಸಿದ್ದ ತಂದೆ ಬೇರೊಂದು ಮದುವೆಯಾಗಿದ್ದರು. ವಾಪಾಸ್ಸು ಹೋಗುವಾಗ ತನ್ನೊೊಡನೆ ಗೋಪಿನಾಥ್ ಅವರನ್ನು ಕರೆದೊಯ್ದರು. ಮಲತಾಯಿಗೆ ಗೋಪಿನಾಥ್ ಬಗ್ಗೆೆ ಅತಿಯಾದ ಪ್ರೀತಿಯಿತ್ತು ಹಾಗಾಗಿ ಅವರನ್ನು ಹತ್ತಿಿರದ ಶಾಲೆಯೊಂದಕ್ಕೆೆ ಸೇರಿಸಿದರು. ಇದರಿಂದ ಗೋಪಿನಾಥ್ ಅವರ ಜೀವದಲ್ಲಿ ಹೊಸ ತಿರುವು ಪಡೆಯಿತು. ಹೇಗೋ ಎಂಎಸ್ಡಬ್ಲ್ಯು ಪದವಿ ಪಡೆದ ಗೋಪಿನಾಥ್, ಸಮಾನ ಮನಸ್ಕ ಸ್ನೇಹಿತರೊಂದಿಗೆ 2002ರಲ್ಲಿ ಸೋಷಿಯಲ್ ವರ್ಕರ್ಸ್ ಅಸೋಸಿಯೇಷನ್ ಫಾರ್ ಪೀಪಲ್ ಎಂಬ ಗುಂಪೊಂದನ್ನು ರಚಿಸಿಕೊಂಡರು. ಈ ಸಂಘದ ಮೂಲಕ ನೂರಾರು ರೀತಿಯ ಶಿಕ್ಷಣ ವಂಚಿತ ಮಕ್ಕಳನ್ನು ಭೇಟಿ ಮಾಡಿ ಅವರ ಸಮಸ್ಯೆೆ ಆಲಿಸಿ ಪರಿಹಾರ ಒದಗಿಸುವ ಸಮಾಜಮುಖಿ ಕಾರ್ಯಗಳತ್ತ ತಮ್ಮನ್ನು ತೊಡಗಿಸಿಕೊಂಡರು.
ಅಲ್ಲದೇ ಆರೋಗ್ಯ ತಪಾಸಣಾ ಶಿಬಿರಗಳು, ಶಿಕ್ಷಣದ ಬಗ್ಗೆೆ ಜಾಗೃತಿ ಕಾರ್ಯಕ್ರಮಗಳು ಮತ್ತು ಸರಕಾರಿ ಶಾಲೆಗಳ ಮಕ್ಕಳಿಗೆ ವ್ಯಕ್ತಿಿತ್ವ ಅಭಿವೃದ್ಧಿಿ ತರಗತಿಗಳನ್ನು ಸಹ ಆಯೋಜಿಸಿದ್ದರು. ತದನಂತರ 2004ರಲ್ಲಿ ಬಾಲ ಕಾರ್ಮಿಕ ಪ್ರಕರಣಗಳ ಕುರಿತು ಕಾರ್ಯನಿರ್ವಹಿಸುವ ಪರಸ್ಪರ ಟ್ರಸ್ಟ್ಗೆ ಸೇರ್ಪಡೆಯಾದರು. ಸ್ಟೇಟ್ ಅಲಯನ್ಸ್ ಫಾರ್ ಎಜುಕೇಶನ್ ಯೋಜನೆಗೆ ರಾಜ್ಯ ಸಂಯೋಜಕರಾಗಿ ಆಯ್ಕೆೆಯಾಗುವ ಮೂಲಕ ಗೋಪಿನಾಥ್ ಅವರ ವೃತ್ತಿಿಜೀವನ ಆರಂಭವಾಯಿತು. ಈ ಕೆಲಸವು ಕರ್ನಾಟಕದಾದ್ಯಂತ ಮೂರು ವರ್ಷಗಳ ಕಾಲ ಪ್ರಯಾಣಿಸಲು ಮತ್ತು ಶಿಕ್ಷಣದಿಂದ ವಂಚಿತರಾದ ಮಕ್ಕಳ ಸಮಸ್ಯೆೆಗಳನ್ನು ಅಧ್ಯಯನ ಮಾಡಲು ಅವಕಾಶ ಮಾಡಿಕೊಟ್ಟಿಿತು. ಪ್ರತಿ ಮಗುವನ್ನು ಶಾಲೆಗೆ ಕರೆತರಲು ಮತ್ತು ಭಾರತದ ಸಾಮಾನ್ಯ ಶಾಲಾ ವ್ಯವಸ್ಥೆೆಯಲ್ಲಿ ಶಿಕ್ಷಣದ ಗುಣಮಟ್ಟವನ್ನು ಹೆಚ್ಚಿಿಸಲು ಅವರು ಧ್ವನಿ ಎತ್ತಲು ನಿರ್ಧರಿಸಿದರು.
ತಮ್ಮ ಕಾರ್ಯದೊತ್ತಡದ ನಡುವೆ ಸ್ವಲ್ಪ ಬಿಡುವಿನ ಸಮಯದಲ್ಲಿ ಶಿಕ್ಷಣದಿಂದ ವಂಚಿತರಾದ ಮಕ್ಕಳನ್ನು ಗುರುತಿಸಿ ಅವರನ್ನು ಒಗ್ಗೂಡಿಸಿ ಒಂದು ಗುಡಿಸಿಲಿನಲ್ಲಿ ಅವರಿಗೆ ಮೂರು ತಿಂಗಳದವರೆಗೆ ಶಿಕ್ಷಣ ಜಾಗೃತಿ ಮೂಡಿಸಿದರು. ನಂತರದಲ್ಲಿ ಮಕ್ಕಳಿಗೆ ಅನೌಪಚಾರಿಕ ಶಿಕ್ಷಣ ಕೇಂದ್ರಗಳನ್ನು ಸ್ಥಾಾಪಿಸಿದರು. ಈ ನಿಟ್ಟಿಿನಲ್ಲಿ ಸಮಾಜಮುಖಿ ಕಾರ್ಯವು ಕೇವಲ ಒಬ್ಬರಿಂದ ಬೃಹತ್ ಮಟ್ಟದಲ್ಲಿ ಸಾಗಲು ಸಾಧ್ಯವಿಲ್ಲ ಎಂಬುದನ್ನು ಅರಿತ ಇವರು ತಮ್ಮ ವಿಚಾರಧಾರೆಗಳನ್ನು ತಮ್ಮ ಸ್ನೇಹಿತರಾದ ಕೃಷ್ಣ ಹಾಗೂ ಪತ್ನಿಿ ಚೈತ್ರರೊಂದಿಗೆ ಚರ್ಚಿಸಿ ಹಲವು ಹಿತೈಷಿಗಳನ್ನು ಸೇರಿಸಿಕೊಂಡು ತಮ್ಮ ಸ್ಪರ್ಶ ಅಂದರೆ, ನಿರ್ಗತಿಕರನ್ನು ಸ್ಪರ್ಶಿಸುವ ಸಂಸ್ಥೆೆಯೊಂದನ್ನು ರಚಿಸಿದರು.
ಶೇ.70ರಷ್ಟು ಯುವಕರಿಗೆ ಉದ್ಯೋೋಗ
ಪ್ರಸ್ತುತ ಸುಮಾರು 2,500 ಕುಟುಂಬಗಳು ಆಹಾರ ಕೊರತೆ ಹಾಗೂ ಜೀವನೋಪಾಯದ ಬಿಕ್ಕಟ್ಟಿಿನಿಂದ ಪಾರಾಗಿದ್ದಾರೆ. ಅನಾಥರು, ಬಾಲಕಾರ್ಮಿಕರು, ಚಿಂದಿ ಆಯುವವರು ಹಾಗೂ ಭಿಕ್ಷುಕರು ಸೇರಿದಂತೆ 3,000 ಕ್ಕೂ ಹೆಚ್ಚು ಮಕ್ಕಳು ಪ್ರಾಾಥಮಿಕ ಶಿಕ್ಷಣ ಪಡೆದಿದ್ದಾರೆ. ಸುಮಾರು 5,000 ಕೂಲಿ ಕೆಲಸಗಾರರ ಮಕ್ಕಳು ಹಾಗೂ ವಲಸೆಗಾರರ ಶಿಶುಗಳನ್ನು ಪ್ರಾಾಥಮಿಕ ಕಾಳಜಿ ಕೇಂದ್ರದಲ್ಲಿ ಪೋಷಿಸಲಾಗುತ್ತಿಿದೆ. ಸುಮಾರು 1,500 ಕ್ಕೂ ಹೆಚ್ಚು ಯುವಕರಿಗೆ ವೃತ್ತಿಿಪರ ತರಬೇತಿ ನೀಡಿದ್ದು, ಅದರಲ್ಲಿ ಶೇ.70 ರಷ್ಟು ಯುವಕರು ಉದ್ಯೋೋಗ ಪಡೆದಿದ್ದಾರೆ.
ಈ ಪ್ರಕ್ರಿಿಯೆಯಲ್ಲಿ, ನಗರ ಮತ್ತು ಗ್ರಾಾಮೀಣ ಬೆಂಗಳೂರಿನಾದ್ಯಂತದ ನಮ್ಮ ಅಭಿವೃದ್ಧಿಿ ಕೇಂದ್ರಗಳಲ್ಲಿ ಮಕ್ಕಳಿಗೆ ಅನುಕೂಲವಾಗುವಂತೆ ಮಕ್ಕಳ ರಕ್ಷಣೆ, ಮಕ್ಕಳ ಆರೈಕೆ, ಮಕ್ಕಳ ಅಭಿವೃದ್ಧಿಿ, ಮತ್ತು ಯುವ ಕೌಶಲ ಅಭಿವೃದ್ಧಿಿಯತ್ತ ಶ್ರಮಿಸುತ್ತಿಿದೆ. ಮಕ್ಕಳ ಧಾಮ ಇದು ಸ್ಪರ್ಶ ಟ್ರಸ್ಟ್ ಪ್ರಸುತ್ತದ ಬಹು ಆಯಾಮದ ಯೋಜನೆಯಾಗಿದ್ದು, ಬಾಲಕರ ರಕ್ಷಣೆ, ಆರೈಕೆ, ಶಿಕ್ಷಣ ಹಾಗೂ ವಸತಿ ಒದಗಿಸುವ ವೃತ್ತಿಿಪರ ಅಭಿವೃದ್ಧಿಿ ಕೇಂದ್ರದ ಕಾರ್ಯಕ್ರಮವಾಗಿದೆ. 300 ಮಕ್ಕಳ ವೃತ್ತಿಿಪರ ಅಭಿವೃದ್ಧಿಿ ಕೇಂದ್ರವಾಗಿ ‘ಮಕ್ಕಳಧಾಮ’ವನ್ನು ಪರಿವರ್ತಿಸಲು ಚಟುವಟಿಕೆಯ ಮೇಲ್ವಿಿಚಾರಣೆ, ಸಲಹೆಗಾಗಿ ಕಾರ್ಪೋರೇಟ್ ಅಭಿವೃದ್ಧಿಿ ವಲಯದ ಉನ್ನತ ಮಟ್ಟದ ವೃತ್ತಿಿಪರರನ್ನು ಹೊಂದಿರುವ ಸಮಿತಿಯೊಂದನ್ನು ರಚಿಸಲಾಗಿದೆ. ದೇಶಕ್ಕಾಾಗಿ ಯುವ ಉದ್ಯೋೋಗಿಗಳ ಸಾಮರ್ಥ್ಯ ಹೆಚ್ಚಿಿಸಿ, ಶಿಸ್ತುಬದ್ಧ ಮತ್ತು ಉತ್ಪಾಾದಕ ನಾಗರಿಕರನ್ನಾಾಗಿ ಪರಿವರ್ತಿಸಿ, ಸುಸ್ಥಿಿರ ಉದ್ಯೋೋಗಾವಕಾಶಗಳ ಮೂಲಕ ಕುಟುಂಬಗಳನ್ನು ಬೆಂಬಲಿಸುವ ಸಾಮರ್ಥ್ಯ ನೀಡುವ ಉದ್ದೇಶ ಹೊಂದಿದೆ.
24 ಗಂಟೆಯೂ ಕಾರ್ಯನಿರ್ವಹಣೆ:
ನಿಸರ್ಗ ಗ್ರಾಾಮ ಬೀದಿ ಮಕ್ಕಳಿಗೆ ಕೌಶಲಭಿವೃದ್ಧಿಿ ನೀಡುವ ಕೇಂದ್ರವಾಗಿದ್ದು, ಹದಿನೆಂಟು ವರ್ಷದ ವರೆಗಿನ ಮಕ್ಕಳಿಗೆ ಅನೌಪಚಾರಿಕ ಶಿಕ್ಷಣ ನೀಡಲಾಗುತ್ತದೆ. ಸ್ವಯಂ ಉದ್ಯೋೋಗಕ್ಕೆೆ ಪೂರಕ ತರವೇತಿ ನೀಡಲಾಗುತ್ತದೆ. ಶಿಕ್ಷಣ ಮಿತ್ರ ಶಿಕ್ಷಣ ವಂಚಿತ ಮಕ್ಕಳಿಗಾಗಿ ಜಾರಿಗೆ ತಂದ ಶಿಕ್ಷಣ ಮಿತ್ರ ಯೋಜನೆಯಡಿ ಆರು ವರ್ಷದಿಂದ ಹದಿನಾರು ವರ್ಷದೊಳಗಿನ ಮಕ್ಕಳಿಗೆ ಅನೌಪಚಾರಿಕ ಶಿಕ್ಷಣ ನೀಡಲಾಗುತ್ತಿಿದೆ. ಮಕ್ಕಳ ಮಿತ್ರ ಪ್ರತಿದಿನ 25ರಿಂದ 35 ಚಿಂದಿ ಆಯುವ ಮಕ್ಕಳು, ಬಾಲ ಕಾರ್ಮಿಕರು ಮತ್ತು ಅರ್ಧದಲ್ಲಿಯೇ ಶಾಲೆಬಿಟ್ಟ ಮಕ್ಕಳನ್ನು ಪತ್ತೆೆ ಮಾಡಿ ಆಶ್ರಯ ನೀಡಲಾಗುತ್ತಿಿದೆ. ದಿನದ ಇಪ್ಪತ್ತನಾಲ್ಕು ಗಂಟೆಯೂ ಕೇಂದ್ರ ಕಾರ್ಯ ನಿರ್ವಹಿಸುತ್ತಿಿದೆ. ಆಪ್ತಮಿತ್ರ ಗ್ರಾಾಮೀಣ ಭಾಗಗಳಿಂದ ವಲಸೆ ಬರುವ ನಿರ್ಗತಿಕ ಮಕ್ಕಳಿಂದ ವಯೋವೃದ್ಧರವರೆಗೆ ಆಶ್ರಯತಾಣವಾಗಿದೆ.
ನಾನಾ ಸಂಸ್ಥೆೆಗಳು ಬೆನ್ನೆೆಲುಬು:
ಸಂಸ್ಥೆೆಯ ಬೆನ್ನೆೆಲುಬು ಚೈಲ್ಡ್ಲೈನ್ ಇಂಡಿಯಾ ಪ್ರತಿಷ್ಠಾಾನ, ಗೋದ್ರೇಜ್ ಅಪಾರ್ಟ್ಮೆಂಟ್ಸ್ ಫ್ಯಾಾಮಿಲಿ, ಇನ್ಫಿಿನಿಟಿ ಕಂಪ್ಯೂೂಟರ್ ಸೊಲ್ಯೂಷನ್, ಎಕ್ಸ್ ಕ್ಯಾಾಲಿಬರ್ ಪ್ರತಿಷ್ಠಾಾನ, ಇನ್ನರ್ವ್ಹೀಲ್ ಬೆಂಗಳೂರು ಪೂರ್ವ, ಸೀತಾರಾಮ್ ಜಿಂದಾಲ್ ಪ್ರತಿಷ್ಠಾಾನ, ಎಎಕ್ಸ್ಎ ಬ್ಯುಸಿನೆಸ್ ಸರ್ವೀಸ್ ಗಳಂತಹ ಪ್ರತಿಷ್ಠಿಿತ ಕಂಪನಿಗಳು ಈ ಸಂಸ್ಥೆೆಯ ಅನುದಾನಿಗಳಾಗಿದ್ದು ನೂರಾರು ಖಾಸಗಿ ವ್ಯಕ್ತಿಿಗಳು ಈ ಸಂಸ್ಥೆೆಗೆ ಹಣದ ಬೆಂಬಲ ನೀಡುತ್ತಿಿದ್ದಾರೆ. ಬೆಂಬಲ ನೀಡಲು ಬಯಸುವ ದಾನಿಗಳು ಹಣ, ಅಗತ್ಯ ವಸ್ತುಗಳು, ಸ್ವಯಂಸೇವಕರಾಗಿ, ಮಗುವಿನ ಜವಾಬ್ದಾಾರಿ ವಹಿಸಿಕೊಳ್ಳುವ ಮೂಲಕ ಸಹಾಯ ಮಾಡಬಹುದು. ದೂ. ಸಂಖ್ಯೆೆ- 9902088483 ವೆಬೆ ಸೈಟ್- ಡಿಡಿಡಿ.್ಟ.ಟ್ಟಜ .
ಲಿಟಲ್ ಹ್ಯಾಾಂಡ್ಸ್:
ಈ ಬಾರಿಯ ಮಕ್ಕಳ ದಿನಾಚರಣೆಯನ್ನು ವಿಶೇಷವಾಗಿ ಟ್ರಸ್ಟ್ ‘ಲಿಟಲ್ ಹ್ಯಾಾಂಡ್ಸ್’ ಎಂಬ ಕಾರ್ಯಕ್ರಮವನ್ನು ಆಯೋಜಿಸಿದ್ದು, ನವೆಂಬರ್ 14 -17 ರವರೆಗೆ ಬೆಂಗಳೂರಿನ, ಎಂ.ಜಿ ರಸ್ತೆೆಯ ರಂಗೋಲಿ ಮೆಟ್ರೋೋ ಆರ್ಟ್ ಸೆಂಟನರ್ಲ್ಲಿ ಮಕ್ಕಳ ಚಿತ್ರಕಲೆಯ ಪ್ರದರ್ಶನವನ್ನು ಏರ್ಪಡಿಸಿತ್ತು. ಖಾಲಿ ಗೋಡೆಗಳ ಮೇಲೆ ಮಕ್ಕಳ ಪುಟ್ಟ ಕೈಗಳಿಂದ ಚಿತ್ರಬಿಡಿಸಿ, ನಿಮ್ಮ ಸಹಾಯ ಹಸ್ತದೊಂದಿಗೆ ಅವರ ಬಾಳನ್ನು ರಂಗುಗೊಳಿಸಿ ಎಂದು ಕರೆ ನೀಡಿದೆ.
2000ಕ್ಕೂ ಹೆಚ್ಚು ಮಕ್ಕಳ ರಕ್ಷಣೆ
ಮಕ್ಕಳ ಹೆಲ್ಪ್ಲೈನ್ (ಚೈಲ್ಡ್ ಲೈನ್) 1098 ನಿಂದ , 2016ರಿಂದ 2019ರವೆಗೂ 2026ಕ್ಕೂ ಹೆಚ್ಚು ಅಸಹಾಯಕ ಮಕ್ಕಳನ್ನು ರಕ್ಷಿಸಲಾಗಿದೆ. ಸುಮಾರು 100ಕ್ಕೂ ಹೆಚ್ಚು ಬಾಲ್ಯ ವಿವಾಹ ಪ್ರಕರಣಗಳು ಇವರ ಗಮನಕ್ಕೆೆ ಬಂದಿದ್ದು, ಅದರಲ್ಲಿ ನಾವು 2016-2019ರವರೆಗೂ 126 ವಿವಾಹಗಳನ್ನು ನಿಲ್ಲಿಸಿದ್ದಾರೆ. ಮಕ್ಕಳ ಶ್ರೇಯೋಭಿವೃದ್ಧಿಿಯತ್ತ ಸ್ಪರ್ಶ ಮಕ್ಕಳ ಆರೈಕೆ ಮತ್ತು ಅಭಿವೃದ್ಧಿಿಯನ್ನು ಉತ್ತೇಜಿಸುವ ರಕ್ಷಣಾತ್ಮಕ ವಾತಾವರಣದ ಕಡೆಗೆ ಸ್ಪರ್ಶ ಟ್ರಸ್ಟ್ ಕಾರ್ಯನಿರ್ವಹಿಸುತ್ತಿಿದೆ.
ಮಕ್ಕಳನ್ನು ಪೋಷಕರಿಂದ ಕರೆತರುವುದು ದೊಡ್ಡ ಸವಾಲಾಗಿದೆ. ಏಕೆಂದರೆ ಬಹುತೇಕ ಅಸಹಾಕ ತಂದೆ-ತಾಯಂದಿರು ಮಕ್ಕಳ ಆದಾಯದ ಮೇಲೆ ಅವಲಂಬಿತರಾಗಿರುತ್ತಾಾರೆ. ಹಾಗಾಗಿ, ಅವರನ್ನು ಕಳುಹಿಸಲು ಪೋಷಕರು ನಿರಾಕರಿಸುತ್ತಾಾರೆ. ಅವರಲ್ಲಿ ಮಕ್ಕಳ ಭವಿಷ್ಯದ ಜವಾಬ್ದಾಾರಿ ಬಗ್ಗೆೆ ಅರಿವು ಮೂಡಿಸಿ ಅವರ ಮನವೊಲಿಸುವಲ್ಲಿ ನಾವು ಪ್ರಯತ್ನಿಿಸುತ್ತೇವೆ.
– ಆರ್. ಗೋಪಿನಾಥ್, ಸ್ಪರ್ಶ ಸಂಸ್ಥೆೆಯ ಸಂಸ್ಥಾಾಪಕ.