ಸುರೇಶ ಗುದಗನವರ
ಅತಿ ಕಡಿಮೆ ವಿದ್ಯುತ್ ವ್ಯಯಿಸುವ ಸೆಮಿಕಂಡಕ್ಟರ್‌ಗಳನ್ನು ಅಭಿವೃದ್ಧಿಪಡಿಸಿದ ಸಾಧನೆಗಾಗಿ ಈ ಮಹಿಳೆಯು, ಭಾರತ
ಸರಕಾರ ಕೊಡ ಮಾಡುವ ನಾರಿಶಕ್ತಿ ಪುರಸ್ಕಾರವನ್ನು ಪಡೆದಿದ್ದಾರೆ ಮತ್ತು ಅವರ ಕೊಡುಗೆಯು ನಮ್ಮ ದೇಶದಲ್ಲಿ
ಹೈಸ್ಪೀಡ್ ಬ್ರಾಡ್‌ಬ್ಯಾಂಡ್ ಸೇವೆ ಕಲ್ಪಿಸುವಲ್ಲಿ ಉಪಯೋಗವಾಗಿದೆ.
ಸಾಫ್ಟ್ ವೇರ್ ಕ್ಷೇತ್ರದಲ್ಲಿ ನೀಡಿದ ಅಸಾಧರಣ ಕೊಡುಗೆಯನ್ನು ಪರಿಗಣಿಸಿದ ಕೇಂದ್ರ ಸರ್ಕಾರವು ಇಂಟೆಲ್ ಇಂಡಿಯಾ ಕಂಪನಿಯ ಮುಖ್ಯಸ್ಥೆ ನಿವೃತಿ ರೈ ಅವರಿಗೆ 2020ನೆಯ ಸಾಲಿನ ‘ನಾರಿಶಕ್ತಿ’ ಪುರಸ್ಕಾರವನ್ನು ನೀಡಿ ಗೌರವಿಸಿದೆ.
ಅವರು ಗ್ರಾಮೀಣ ಪ್ರದೇಶದಲ್ಲಿ ಅತ್ಯಂತ ಮಿತವ್ಯಯದಲ್ಲಿ ಹೈಸ್ಪೀಡ್ ಬ್ರಾಡ್‌ಬ್ಯಾಂಡ್ ಸೇವೆ ಕಲ್ಪಿಸುವ ವಿಧಾನ ಮತ್ತು ಅತೀ ಕಡಿಮೆ ವಿದ್ಯುತ್ ವ್ಯಯಿಸುವ ಸೆಮಿಕಂಡಕ್ಟರ್ ಅಭಿವೃದ್ಧಿ ಪಡಿಸಿದ್ದಾರೆ. ಉನ್ನತ ಕಾರ್ಯಕ್ಷಮತೆಯ ಕಂಪ್ಯೂಟರ್‌ಗಳ ಕ್ರಿಯಾ ತ್ಮಕತೆ ಮತ್ತು ದಕ್ಷತೆಯನ್ನು ಸುಧಾರಿಸಲು ರೈ ಅವರ ಕೆಲಸವು ಭಾರತೀಯ ಆರ್ಥಿಕತೆಗೆ ಸಹಾಯ ಮಾಡುವ ತಂತ್ರಜ್ಞಾನವು ಪ್ರಸಿದ್ಧಿ ಪಡೆದಿದೆ.
ನಿವೃತಿ ರೈ ಅವರು ಉತ್ತರ ಪ್ರದೇಶದ ಗೋರಖ್ ಪುರದಲ್ಲಿ 1969ರಲ್ಲಿ ಜನಿಸಿದರು. ತಂದೆ ಬುದ್ಧಿಸಾಗರ್ ರೈ ನೀರಾವರಿ ಇಲಾಖೆ ಯಲ್ಲಿ ಇಂಜನಿಯರ್. ಅವರ ಕುಟುಂಬದಲ್ಲಿ ಮೂರನೆಯ ಮಗಳಾಗಿ ಜನಿಸಿದ್ದರಿಂದ ಪಾಲಕರು ಚಿಂತಿತರಾಗಿದ್ದರು. ಹೆಣ್ಣು ಮಗುವನ್ನು ಸಾಕಿ, ಬೆಳೆಸುವ ಕಾಳಜಿಯಿಂದ ಹಟ್ಟಿದ್ದ ಚಿಂತೆ ಅದು. ನಿವೃತ್ತಿಗೆ ಉತ್ತಮ ಶಿಕ್ಷಣವನ್ನೇ ಕೊಡಿಸಿದರು. 1990ರಲ್ಲಿ ನಿವೃತಿ ಲಕ್ನೋ ವಿಶ್ವವಿದ್ಯಾಲಯದಿಂದ ಬಿ.ಎಸ್ಸಿ.ಯಲ್ಲಿ ಸಂಖ್ಯಾಶಾಸ್ತ್ರದಲ್ಲಿ ಪದವಿ ಪಡೆದರು. ಸಂಖ್ಯಾಶಾಸ್ತ್ರ ಮತ್ತು ಗಣಿತ ರೈ ಅವರಿಗೆ ನೆಚ್ಚಿನ ವಿಷಯಗಳಾಗಿದ್ದವು.
ಅಮೆರಿಕಕ್ಕೆ ಪಯಣ
ನಂತರ ದಿನಗಳಲ್ಲಿ ಅವರು ಸುನೀತ್ ತ್ಯಾಗಿ ಅವರನ್ನು ಮದುವೆಯಾಗಿ ಯು.ಎಸ್. ಗೆ ವಲಸೆ ಬಂದರು. 1993ರಲ್ಲಿ ಓರೆಗಾನ್ ಸ್ಟೇಟ್ ಯೂನಿವರ್ಸಿಟಿಯಿಂದ ಎಲೆಕ್ಟ್ರಿಕಲ್ ಮತ್ತು ಇಂಡಸ್ಟ್ರೀಯಲ್ ಇಂಜನಿಯರಿಂಗ್ ನಲ್ಲಿ ಎಂ.ಎಸ್. ಪದವಿ ಪಡೆದರು. ನಿವೃತಿಯವರು 1993ರಲ್ಲಿ ಸ್ನಾತಕೋತ್ತರ ಪದವಿ ಪಡೆದ ನಂತರ ಎರಡು ಉದ್ಯೋಗದ ಅವಕಾಶಗಳು ಆವರನ್ನರಿಸಿ ಬಂದವು.
ಅವರ ಪತಿ ಸುನೀತ್ ಇಂಟೆಲ್‌ನಲ್ಲಿ ಕೆಲಸ ಮಾಡುತ್ತಿದ್ದರಿಂದ ನಿವೃತಿ ಇಂಟೆಲ್‌ಗೆ ವಿನ್ಯಾಸ ಇಂಜನೀಯರ್ ಆಗಿ ಸೇರಿಕೊಂಡರು. ಇಂಟೆಲ್‌ನಲ್ಲಿ ಎರರ್ ಕರೆಕ್ಟಿಂಗ್ ಕೋಡ್‌ಗಳು ಎಂಬ ತಂತ್ರವನ್ನು ಬಳಸಿಕೊಂಡು ಕಡಿಮೆ ಶಕ್ತಿ ಉಪಯೋಗಿಸಿವ ಸೆಮಿ ಕಂಡಕ್ಟರ್ ಚಿಪ್ ಗಳನ್ನು ತಯಾರಿಸುವಲ್ಲಿ ರೈ ಅವರ ಕೆಲಸವು ಗಮನಾರ್ಹವಾಗಿದೆ.
ಮೊಬೈಲ್ ಸಾಧನೆಗಳಲ್ಲಿ ಇಂಟೆಲ್‌ನ ಸಂಶೋಧನೆ ಮತ್ತು ಅಭಿವೃದ್ಧಿಯನ್ನು ನಿರ್ವ ಹಿಸಲು ಅವರು 2005ರಲ್ಲಿ ಭಾರತಕ್ಕೆ ಮರಳಿದರು. 2006ರಲ್ಲಿ ಭಾರ ತದಲ್ಲಿ ಶಾಶ್ವತ ವೀಸಾ ಸ್ಥಾನಮಾನವನ್ನು ಪಡೆದ ಮೊದಲ ಭಾರತೀಯ ಅಮೆರಿಕನ್‌ರಲ್ಲಿ ಅವರು ಕೂಡ ಒಬ್ಬರು.
ಕರ್ನಾಟಕದೊಂದಿಗೆ ಸಂಬಂಧ
ಇತ್ತೀಚಿಗೆ ರೈ ಭಾರತದಲ್ಲಿ ರಸ್ತೆ ಸುರಕ್ಷತೆಯನ್ನು ಸುಧಾರಿಸಲು ಯಂತ್ರ ಕಲಿಕೆ ಮತ್ತು ಸಂಬಂಧಿತ ಕ್ಷೇತ್ರಗಳ ಬಳಕೆಯನ್ನು ಸಮರ್ಥಿಸಿಕೊಂಡಿದ್ದಾರೆ. ಅವರು ಅಪಘಾತಗಳ ಸಂಭವನೀಯತೆ ಹೆಚ್ಚಿಸಿರುವ ಗ್ರೆ ಸ್ಟಾಟ್ ಸೇರಿದಂತೆ ಟ್ರಾಫಿಕ್ ಮತ್ತು ರಸ್ತೆ ಸ್ಥಿತಿಯ ಮಾಹಿತಿಯ ಡೇಟಾ ಬೇಸ್‌ಗಳನ್ನು ನಿರ್ಮಿಸಲು ಇಂಟೆಲ್ ಮೂಲಕ ಕರ್ನಾಟಕ ಸರಕಾರದೊಂದಿಗೆ ಒಪ್ಪಂದವನ್ನು ಮಾಡಿಕೊಂಡರು.
ಬೆಂಗಳೂರಿ ನಲ್ಲಿ ನೆಲೆಸಿರುವ ಅವರು ಇಂಟೆಲ್‌ನ ಸಿಸ್ಟಮ್ ಆನ್ ಚಿಪ್‌ಗಾಗಿ ನವೀನ ಅನಲಾಗ್ ಮತ್ತು ಮಿಶ್ರ ಸಿಗ್ನಲ್ ಬೌದ್ಧಿಕ ಆಸ್ತಿ ಬ್ಲಾಕ್ ಮತ್ತು ವ್ಯವಸ್ಥೆಗಳನ್ನು ಅಭಿವೃದ್ಧಿಪಡಿಸಲು ಯುನೈಟೆಡ್ ಸ್ಟೇಟ್, ಕೋಸ್ಟರಿಕಾ, ಇಸ್ರೇಲ್, ಮಲೇಷ್ಯಾ, ಮತ್ತು ಭಾರತದಾದ್ಯಂತ ತಂಡಗಳನ್ನು ಮುನ್ನಡೆಸುತ್ತಿದ್ದಾರೆ. ಅಲ್ಲದೇ ಅವರು ಮೆಷಿನ್ ಲರ್ನಿಂಗ್ ಮತ್ತು ಕಂಪ್ಯೂಟರ್ ವಿಷನ್ ಸಾಪ್ಟ್ ಐಪಿ ಅಭಿವೃದ್ಧಿಪಡಿಸುವ ಭಾರತದಲ್ಲಿ ಎಮರ್ಜಿಂಗ್ ಟೆಕ್ನಾಲಜಿಸ್ ಗ್ರೂಪ್ ಅನ್ನು ಸಹ ನಿರ್ವಹಿಸುತ್ತಿದ್ದಾರೆ.
ಅವರು 2016ರಲ್ಲಿ ಇಂಟೆಲ್ ಕಂಪನಿಯ ದೇಶದ ಮುಖ್ಯಸ್ಥರಾಗಿ ಅಧಿಕಾರ ವಹಿಸಿಕೊಂಡರು. ಪ್ರಸ್ತುತ ಅವರ ಉದ್ಯೋಗವು ಇಂಟೆಲ್ ಗ್ರಾಹಕರು ಭಾರತ ಸರ್ಕಾರದೊಂದಿಗೆ ಸಂವಹನ ನಡೆಸುವುದು ಮತ್ತು ಎಆಯ್ ಮತ್ತು 5ಜಿನಂತಹ ಉದಯೋನ್ಮಖ ತಂತ್ರಜ್ಞಾನಗಳಲ್ಲಿ ಸರ್ಕಾರದ ನೀತಿಯನ್ನು ರೂಪಿಸಲು ಸಹಾಯ ಮಾಡುವುದು. ಇಂಟೆಲ್‌ನ 20ನೇ ವಾರ್ಷಿಕೋತ್ಸವ
ಸಂದರ್ಭದಲ್ಲಿ ಬೆಂಗಳೂರಿನಲ್ಲಿ 1100 ಕೋಟಿ ರೂಗಳ ವೆಚ್ಚದಲ್ಲಿ 6 ಲಕ್ಷ 20 ಸಾವಿರ ಚದರ ಅಡಿಯಲ್ಲಿ ವಿನ್ಯಾಸ ಕೇಂದ್ರವನ್ನು ತೆರೆಯಿತು. ಅವರು ಕೃತಕ ಬುದ್ಧಿಮತ್ತೆ ಐದನೇ ತಲೆಮಾರಿನ ಸೆಲ್ಯೂಲಾರ ನೆಟ್‌ವರ್ಕ್ ತಂತ್ರಜ್ಞಾನ, ಸಿಸ್ಟಂಗಾಗಿ ಸ್ವಾಯತ್ತ ವ್ಯವಸ್ಥೆಗಳಂತಹ ಉದಯೋನ್ಮುಖ ತಂತ್ರಜ್ಞಾನಗಳಲ್ಲಿ ಅಭಿವೃದ್ದಿ ಚಾಲನೆಯನ್ನು ಮುನ್ನಡೆಸುತ್ತಿದ್ದಾರೆ.
ಹಲವು ಪೇಟೆಂಡ್‌ಗಳು
ರೈ ಅವರು ಯುಎಸ್ ಮತ್ತು ಅಂತರಾಷ್ಟ್ರೀಯ ಹಲವು ಪೇಂಟೆಂಟ್‌ಗಳನ್ನು ಹೊಂದಿದ್ದಾರೆ. ಅಲ್ಲದೇ ಇಂಟಿಗ್ರೇಟೆಡ್ ಸರ್ಕ್ಯೂಟ್ ವಿನ್ಯಾಸ ವಿಧಾನಗಳು ಮತ್ತು ಕಾರ್ಯಾಚರಣೆಯ ಸಂಶೋಧನೆಯ ಕುರಿತು ಹಲವಾರು ತಾಂತ್ರಿಕ ಲೇಖನಗಳನ್ನು ಪ್ರಕಟಿಸಿ ದ್ದಾರೆ. ಅವರ ನೇತೃತ್ವದಲ್ಲಿ ಕಂಪನಿಯು 2 ಕಲ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಮತ್ತು 5 ಸಾವಿರ ಸರ್ಕಾರಿ ಅಧಿಕಾರಿಗಳಿಗೆ
ತರಬೇತಿಯನ್ನು ನೀಡಿದೆ.
ಫಾರ್ಚೂನ್ ಇಂಡಿಯಾದ 2019ರ ವ್ಯಾಪಾರದ ಅತ್ಯಂತ ಶಕ್ತಿಶಾಲಿ ಮಹಿಳೆಯರ ಪಟ್ಟಿಯಲ್ಲಿ ಅವರು 45 ರಿಂದ 19ನೇ ಸ್ಥಾನಕ್ಕೆ ಜಿಗಿದಿದ್ದಾರೆ. 21ನೇ ಶತಮಾನದ ಮಹಿಳೆಯರನ್ನು ಪ್ರತಿನಿಧಿಸುವ ಮತ್ತು ಭಾರತಕ್ಕೆ ಹೈಟೆಕ್ ಭವಿಷ್ಯವನ್ನು ಸಕ್ರಿಯ ಗೊಳಿಸಲು ಕೃತಕ ಬುದ್ದಿಮತ್ತೆಯನ್ನು ನಿರ್ಮಿಸಲು ವಿದ್ಯಾರ್ಥಿಗಳನ್ನು ಸಬಲೀಕರಣಗೊಳಿಸುವ ತಂತ್ರಜ್ಞಾನ ಕ್ಷೇತ್ರದಲ್ಲಿಯ ಶ್ರೇಷ್ಠತೆಗಾಗಿ ರಾಷ್ಟ್ರಪತಿ ರಾಮನಾಥ್ ಕೋವಿಂದ ಅವರಿಂದ ನಿವೃತಿ ರೈ ನಾರಿಶಕ್ತಿ ಪುರಸ್ಕಾರಕ್ಕೆ ಭಾಜನರಾದರು.
ಸಾಧನೆಗೆ ಪರಿಶ್ರಮ ಮುಖ್ಯ
ನಿವೃತ್ತಿ ರೈ ಅವರಿಗೆ ಇಬ್ಬರು ಮಕ್ಕಳು. ಆ ಜವಾಬ್ದಾರಿಯನ್ನು ನಿಭಾಯಿಸುತ್ತಲೇ, ತಂತ್ರಜ್ಞಾನ ಕ್ಷೇತ್ರದಲ್ಲಿ ಅವರು ಹೊಸ ಹೊಸ ವಿಷಯಗಳನ್ನು ಕಲಿಯುತ್ತಿದ್ದಾರೆ, ಹೊಸ ಪರಿಕಲ್ಪನೆ ಗಳನ್ನು ಹುಟ್ಟುಹಾಕಿ, ಕಾರ್ಯರೂಪಕ್ಕೆ ತರುತ್ತಿದ್ದಾರೆ. ತಂತ್ರಜ್ಞಾನ ಕ್ಷೇತ್ರದಲ್ಲೇ ಆಗಲಿ, ಬೇರಾವುದೇ ಕ್ಷೇತ್ರದ ಲ್ಲಾಗಲಿ, ಯಶಸ್ಸನ್ನು ಸಾಧಿಸಲು ಬಯಸುವ ಮಹಿಳೆಯರಿಗೆ ನಿವೃತ್ತಿ ರೈಯವರ
ಸಾಧನೆಯು ಒಂದು ಸೂರ್ತಿ. ರಿಸ್ಕ್ ತೆಗೆದುಕೊಂಡು ಮುಂದುವರಿದರೆ, ತಂತ್ರಜ್ಞಾನ ಕ್ಷೇತ್ರದಲ್ಲಿ ಮಹಿಳೆಯರೂ ಉನ್ನತ ಸಾಧನೆ ಮಾಡಬಹುದು ಎಂಬುದು ನಿವೃತ್ತಿಯವರ ಖಚಿತ ಅಭಿಪ್ರಾಯ.