Wednesday, 11th December 2024

ಯಶಸ್ಸಿನ ಹಾದಿಯಲ್ಲಿ ಸಾಗಿದ ಯಶಾ

ಯೋಗರಾಜ್ ಭಟ್ಟರ ಗರಡಿಗೆ ಬಂದ ನವ ನಟಿ ಯಶಾ, ತಮ್ಮ ಮೊದಲ ಸಿನಿಮಾ ತೆರೆಕಾಣುವ ಮುನ್ನವೇ ಚಿತ್ರರಂಗದಲ್ಲಿ ಯಶಸ್ಸಿನ ಪಯಣ ಆರಂಭಿಸಿದ್ದಾರೆ.

ಬೆಂಗಳೂರಿನ ಬೆಡಗಿ ಯಶಾ, ಸಾಲು ಸಾಲು ಚಿತ್ರಗಳಲ್ಲಿ ಬ್ಯುಸಿಯಾಗಿದ್ದಾರೆ. ಯೋಗರಾಜ್ ಭಟ್ ಅಂಡ್ ಟೀಂ, ನಿರ್ಮಿಸಿ
, ನಿರ್ದೇಶಿಸುತ್ತಿರುವ ಪದವಿ ಪೂರ್ವ ಚಿತ್ರದಲ್ಲಿ ಯಶಾ ನಾಯಕಿಯಾಗಿ ನಟಿಸುತ್ತಿದ್ದಾರೆ. ಪದವಿ ಪೂರ್ವ ಕಾಲೇಜು ಕಥೆಯ ಚಿತ್ರ. ಅದಕ್ಕಾಗಿ ಚಿತ್ರತಂಡ ನವ ನಟ, ನಟಿಯರನ್ನು ಹುಡುಕುತ್ತಿತ್ತು. ಆಗ ಸಿಕ್ಕಿದ ನಟಯೇ ಯಶಾ. ಅಂತು ಪದವಿ ಪೂರ್ವಕ್ಕೆ ನಾಯಕಿಯಾಗಿ ಎಂಟ್ರಿಕೊಟ್ಟರು. ಈ ಚಿತ್ರದಲ್ಲಿ ಯಶಾ ರಾಜಿ ಎಂಬ ಪಾತ್ರದಲ್ಲಿ ಬಣ್ಣಹಚ್ಚುತ್ತಿದ್ದಾರೆ.

ಇದರಲ್ಲಿ ಯಶಾ ಕಾಲೇಜು ಹುಡುಗಿಯಾಗಿ ಕಾಣಿಸಿಕೊಂಡಿದ್ದಾರೆ. ಆಧುನಿಕತೆಗೆ ಮಾರು ಹೋಗದೆ, ಅಪ್ಪಟ ಸಂಪ್ರದಾಯಸ್ಥ ಕುಟುಂಬದ ಮುಗ್ಧ ಹುಡುಗಿಯಾಗಿ ಬಣ್ಣಹಚ್ಚಿದ್ದಾರೆ.

ಈಗಾಗಲೇ ಚಿತ್ರದ ಮೊದಲ ಶೆಡ್ಯೂಲ್ ಚಿತ್ರೀಕರಣ ಮುಗಿದಿದೆ. ಕರೋನಾ ಮುಗಿದ ಬಳಿಕ ಎರಡನೇ ಶೆಡ್ಯೂಲ್ ಚಿತ್ರೀಕರಣ ಆರಂಭಿಸಲಿದೆ ಚಿತ್ರತಂಡ. ಚಿತ್ರೀಕರಣ ಮುಗಿಸಿ ನನ್ನ ಮೊದಲ ಚಿತ್ರವನ್ನು ತೆರೆಯಲ್ಲಿ ಕಣ್ತುಂಬಿಕೊಳ್ಳಬೇಕು ಎಂದು ಯಶಾ
ಕಾದುಕುಳಿತಿದ್ದಾರೆ.

ಶಿವಪ್ಪನ ಜತೆಯಾದ ರಾಜಿ
ಯಶಾ ಮೊದಲ ಚಿತ್ರದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾಗಲೇ ಸ್ಟಾರ್ ನಟರ ಚಿತ್ರದಲ್ಲಿ ಅಭಿನಯಿಸುವ ಅವಕಾಶ ಸಿಕ್ಕಿತು. ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಹಾಗೂ ಡಾಲಿ ಧನಂಜಯ ಮುಖ್ಯ ಪಾತ್ರದಲ್ಲಿ ನಟಿಸುತ್ತಿರುವ ಶಿವಪ್ಪ ಚಿತ್ರದಲ್ಲಿ ಅಭಿನಯಿಸುವ ಅವಕಾಶ ಯಶಾಗೆ ಒಲಿಯಿತು. ಹಾಗಾಗಿ ಸಂತಸದಿಂದಲೇ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರದಲ್ಲಿಯೂ ಕೂಡ ಯಶಾ ಕಾಲೇಜು ಹುಡುಗಿಯಾಗಿ ಬಣ್ಣಹಚ್ಚಿದ್ದಾರೆ.

ಮೊದಲ ಚಿತ್ರದಲ್ಲಿ ಮುಗ್ಧ ಹುಡುಗಿಯಾಗಿ ಕಾಣಿಸಿಕೊಂಡಿದ್ದರೆ, ಶಿವಪ್ಪ ಚಿತ್ರದಲ್ಲಿ ಮಾರ್ಡನ್ ಗರ್ಲ್ ಆಗಿ ಗಮನ ಸೆಳೆಯು ತ್ತಾರೆ. ನನಗೆ ಶಿವಪ್ಪ ಚಿತ್ರದಲ್ಲಿ ನಟಿಸಲು ಅವಕಾಶ ಸಿಕ್ಕಿದ್ದು, ನನ್ನ ಅದೃಷ್ಟ, ಅದು ಶಿವಣ್ಣ ಅವರೊಂದಿಗೆ ನಾನು ನಟಿಸು ತ್ತಿದ್ದೇನೆ ಎಂದರೆ ಅದು ನನಗೆ ಹೆಮ್ಮೆ. ಶಿವಣ್ಣ ಅವರಿಂದ ಸಾಕಷ್ಟು ಕಲಿತೆ. ಅವರ ಸರಳತೆ, ನಟನೆಗೆ ಅವರು ಮಾಡಿಕೊಳ್ಳುವ ಸಿದ್ಧತೆ ಎಲ್ಲವೂ ನನ್ನಂತಹ ನವ ಕಲಾವಿದರಿಗೆ ಮಾದರಿಯೇ ಸರಿ. ಎನ್ನುತ್ತಾರೆ ಯಶಾ.

ಬಹದ್ಧೂರ್ ಗಂಡಿಗೆ ಜತೆಯಾದ ಬೆಡಗಿ
ಇದರ ಜತೆಗೆ ಈಗಾಗಲೇ ಸೆಟ್ಟೇರಿರುವ ಬಹದ್ಧೂರ್ ಗಂಡು ಚಿತ್ರದಲ್ಲಿಯೂ ಯಶಾ ನಟಿಸುತ್ತಿದ್ದಾರೆ. ಇಲ್ಲಿಯೂ ಗ್ಲಾಮರ್ ಗೊಂಬೆ ಯಾಗಿ ಯಶಾ ಕಂಗೊಳಿಸುತ್ತಾರೆ. ಇದರ ಜತೆಗೆ ಪ್ರಸಿದ್ಧ ನಿದೇಶಕರು ನಿರ್ದೇಶಿಸುತ್ತಿರುವ ಸಿನಿಮಾಗಳಲ್ಲಿಯೂ ಕೂಡ ಯಶಾ
ನಟಿಸಲು ಸಿದ್ಧತೆ ಮಾಡಿಕೊಂಡಿದ್ದಾರೆ. ಕರೋನಾ ಮುಗಿದ ಬಳಿಕ ಸಾಲು ಸಾಲು ಚಿತ್ರಗಳಲ್ಲಿ ಯಶಾ ಬ್ಯುಸಿಯಾಗಲಿದ್ದಾರೆ.