Tuesday, 29th September 2020

ಡ್ರಗ್ಗಿಣಿಯ ಜಾಮೀನು ಅರ್ಜಿ ವಿಚಾರಣೆ ಮುಂದೂಡಿಕೆ

*ವೈಭವ್ ಜೈನ್ ನಿರೀಕ್ಷಣಾ ಜಾಮೀನು ಅರ್ಜಿ
*ರಾಗಿಣಿಗೆ ಇನ್ನೂ ಎರಡು ದಿನ ರಿಲೀವ್ ಇಲ್ಲ
*ರಾಗಿಣಿ ಜಾಮೀನು ಅರ್ಜಿ ವಿಚಾರಣೆ ಸೆ.16ಕ್ಕೆ ಮುಂದೂಡಿಕೆ

ಬೆಂಗಳೂರು: ಜಾಮೀನಿಗೆ ಆಕ್ಷೇಪಣೆ ಸಲ್ಲಿಸಲು ಕಾಲಾವಕಾಶ ಕೋರಿದ ಹಿನ್ನೆಲೆಯಲ್ಲಿ ಎನ್‍ಡಿಪಿಎಸ್‍ ವಿಶೇಷ ಕೋರ್ಟ್ ವಿಚಾರಣೆಯನ್ನ ಮುಂದೂಡಿದೆ.

ಜಾಮೀನು ಅರ್ಜಿ ವಿಚಾರಣೆ ಮುಂದೂಡಿರುವ ಕಾರಣ, ನಟಿಯರು ಇನ್ನೂ ಸಾಂತ್ವನ ಕೇಂದ್ರದಲ್ಲಿ ಎರಡು ದಿನ ಕಾಲ ಕಳೆಯಬೇಕಾಗಿದೆ.  ರಾಗಿಣಿ ಸಿಸಿಬಿ ಕಸ್ಟಡಿ ಸೋಮವಾರ ಅಂತ್ಯಗೊಂಡ ಹಿನ್ನೆಲೆಯಲ್ಲಿ ಮೆಡಿಕಲ್‍ ಚೆಕಪ್, ಕೊರೊನಾ ಟೆಸ್ಟ್ ಮಾಡಿಸಿ, ನ್ಯಾಯಾಧೀಶರ ಎದುರು ಹಾಜರುಪಡಿಸಲು ಸಿಸಿಬಿ ತಂಡ ಹಾಜರು ಪಡಿಸಲಿತ್ತು.

ಈ ನಿಟ್ಟಿನಲ್ಲಿ ನಟಿಯರನ್ನು ಕರೆದೊಯ್ಯಲು ಮಹಿಳಾ ಸಾಂತ್ವನ ಕೇಂದ್ರಕ್ಕೆ ಆಗಮಿಸಿದ್ದರು. ಇಬ್ಬರು ನಟಿಯರನ್ನು ಮಾತ್ರವಲ್ಲದೇ ನಿಯಾಸ್ ಅಹ್ಮದ್ ಗೆ ಮೆಡಿಕಲ್ ಚೆಕಪ್ ಮಾಡಿಸಲಾಯಿತು. ಜಾಮೀನಿಗೆ ಆಕ್ಷೇಪಣೆ ಹಾಕಲು ಕಾಲಾವಕಾಶ ಕೇಳಿದ ಹಿನ್ನೆಲೆಯಲ್ಲಿ ಎಲ್ಲಾ ಐವರು ಆರೋಪಿಗಳ ಅರ್ಜಿ ವಿಚಾರಣೆ ಮುಂದೂಡಲಾಗಿದೆ.

ನಟಿ ರಾಗಿಣಿ, ಶಿವಪ್ರಕಾಶ್, ವಿನಯ್ ಕುಮಾರ್, ವೈಭವ್ ಶೆಟ್ಟಿ ಮತ್ತು ರಾಹುಲ್ ಅವರ ಜಾಮೀನು ಅರ್ಜಿಯನ್ನು ಸೆ. 16 ಕ್ಕೆ ಮುಂದೂಡಿ ಎನ್ ಡಿಪಿಎಸ್ ನ್ಯಾಯಾಲಯ ಆದೇಶ ಹೊರಡಿಸಿದೆ.

Leave a Reply

Your email address will not be published. Required fields are marked *