Sunday, 27th November 2022

ನಟಿ ರಾಗಿಣಿಗೆ ಇಂದು ಬಿಡುಗಡೆ

ಬೆಂಗಳೂರು : ಸ್ಯಾಂಡಲ್​ವುಡ್​ ಡ್ರಗ್ಸ್ ಪ್ರಕರಣದಲ್ಲಿ ಜೈಲು ಸೇರಿದ್ದ ನಟಿ ರಾಗಿಣಿ ಇಂದು ಸಂಜೆ ಪರಪ್ಪನ ಅಗ್ರಹಾರದಿಂದ ಹೊರ ಬರಲಿದ್ದಾರೆ. ನಟಿ ರಾಗಿಣಿಗೆ ನೀಡುವ ಜಾಮೀನಿಗೆ ಸಂಬಂಧಪಟ್ಟಂತೆ ಸುಪ್ರಿಂಕೋರ್ಟ್‌ ನೀಡಿದ್ದ ಷರತ್ತುಗಳನ್ನು ಪೂರೈಸಲು ಬೇಕಾಗಿದ್ದ ಅಗತ್ಯೆಗಳನ್ನು ಮಾಡಿಕೊಳ್ಳುವುದಕ್ಕೆ ಸಾಕಷ್ಟು ಸಮುಯವನ್ನು ತೆಗೆದುಕೊಂಡಿದ್ದರು.

ಆದರೆ ಅವರ ಜಾಮೀನಿಗೆ ಸಂಬಂಧಪಟ್ಟಂತೆ, ಎಲ್ಲಾ ಅಗತ್ಯ ಪೂರೈಕೆ ಮಾಡಿದ ಬಳಿಕ, ಜಾಮೀನು ಮುಚ್ಚಳಿಕೆ ಒಪ್ಪಿ ಕೋರ್ಟ್​ ಆದೇಶ ಹೊರಡಿಸಿದೆ. ಹೀಗಾಗಿ, ಸಂಜೆ ಐದರ ಹೊತ್ತಿಗೆ ತುಪ್ಪದ ಬೆಡಗಿ ರಾಗಿಣಿ, ಜೈಲಿನಿಂದ ಹೊರ ಬರಲಿದ್ದಾರೆ ಎನ್ನಲಾಗಿದೆ.