Friday, 7th May 2021

ಬಜಾಜ್ ಆಟೋ ಅಧ್ಯಕ್ಷ ಸ್ಥಾನಕ್ಕೆ ರಾಹುಲ್ ಬಜಾಜ್ ರಾಜೀನಾಮೆ

ನವದೆಹಲಿ: ದ್ವಿಚಕ್ರ ವಾಹನಗಳ ತಯಾರಕ ಬಜಾಜ್ ಆಟೋ ಅಧ್ಯಕ್ಷ ರಾಹುಲ್ ಬಜಾಜ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಈ ಮೂಲಕ ಕಂಪನಿಯ ಕಾರ್ಯನಿರ್ವಾಹಕ ನಿರ್ದೇಶಕ ನೀರಜ್ ಬಜಾಜ್ ಮೇ 1ರಿಂದ ಜಾರಿಗೆ ಬರುವಂತೆ ಬಜಾಜ್ ಆಟೋ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಲಿದ್ದಾರೆ.

ರಾಹುಲ್ ಬಜಾಜ್ ಬದಲಿಗೆ, ಕಂಪನಿಯ ಕಾರ್ಯನಿರ್ವಾಹಕ ನಿರ್ದೇಶಕ ನೀರಜ್ ಬಜಾಜ್ 2021ರ ಮೇ 1ರಿಂದ ಬಜಾಜ್ ಆಟೋ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಲಿದ್ದಾರೆ.

ಕಳೆದ ಐದು ದಶಕಗಳಲ್ಲಿ ರಾಹುಲ್ ಬಜಾಜ್ ಕಂಪನಿಯ ಮತ್ತು ಬಜಾಜ್ ಗ್ರೂಪ್‌ನ ಯಶಸ್ಸಿಗೆ ಅಪಾರ ಕೊಡುಗೆ ನೀಡಿದ್ದಾರೆ ಎಂದು ಕಂಪನಿ ತಿಳಿಸಿದೆ.

ಮಾರ್ಚ್ ತ್ರೈಮಾಸಿಕದಲ್ಲಿ ಬಜಾಜ್ ಆಟೋ ನಿವ್ವಳ ಲಾಭ ಸುಮಾರು ಶೇಕಡಾ 2ರಷ್ಟು ಏರಿಕೆಯಾಗಿ 1,332 ಕೋಟಿ ರೂಪಾಯಿಗೆ ತಲುಪಿದೆ. ಕಳೆದ ವರ್ಷದ ಇದೇ ತ್ರೈಮಾಸಿಕದಲ್ಲಿ 1,310 ಕೋಟಿ ರೂಪಾಯಿ ದಾಖಲಾ ಗಿದ್ದು. ಕಂಪನಿಯ ಆದಾಯವು ವರ್ಷದಿಂದ ವರ್ಷಕ್ಕೆ ಹಿಂದಿನ 6,815.8 ಕೋಟಿಗೆ ಹೋಲಿಸಿದರೆ ಶೇಕಡಾ 26ರಷ್ಟು ಹೆಚ್ಚಳವಾಗಿ, 8,596 ಕೋಟಿಗೆ ತಲುಪಿದೆ.

Leave a Reply

Your email address will not be published. Required fields are marked *