Tuesday, 18th January 2022

ಭಾರತ – ದಕ್ಷಿಣ ಆಫ್ರಿಕಾ ಎರಡನೇ ಟೆಸ್ಟ್: ನಾಲ್ಕನೇ ದಿನ ವರುಣನ ಅಡ್ಡಿ

#Johannesburg
ಜೋಹಾನ್ಸ್‌ಬರ್ಗ್‌: ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಎರಡನೇ ಟೆಸ್ಟ್ ಪಂದ್ಯದ ನಾಲ್ಕನೇ ದಿನ ಸಣ್ಣಗೆ ಮಳೆ ಸುರಿಯುತ್ತಿದ್ದು, ಪಂದ್ಯ ಆರಂಭಕ್ಕೆ ವಿಳಂಬವಾಗುತ್ತಿದೆ.
ಮೂರನೇ ದಿನ ಭಾರತ ಆತಿಥೇಯರ ಮುಂದೆ 240 ರನ್‌ಗಳ ಸವಾಲನ್ನು ಹಾಕಿತ್ತು. ಈ ದಿನ ಪಂದ್ಯದ ನಿರ್ಣಾಯಕ ದಿನವಾಗಿದೆ. ದಕ್ಷಿಣ ಆಫ್ರಿಕಾ ಗೆಲುವಿಗೆ 122 ರನ್‌ಗಳ ಅವಶ್ಯಕತೆಯಿದ್ದು, ಎರಡು ದಿನಗಳು ಮತ್ತು ಎಂಟು ವಿಕೆಟ್‌ಗಳಿವೆ.

ಮೂರನೇ ದಿನದಾಟದ ಅಂತ್ಯಕ್ಕೆ ದಕ್ಷಿಣ ಆಫ್ರಿಕಾ ಎರಡು ವಿಕೆಟ್ ನಷ್ಟಕ್ಕೆ 118 ರನ್ ಗಳಿಸಿದೆ. ಆತಿಥೇಯ ತಂಡದ ನಾಯಕ ಡೀನ್ ಎಲ್ಗರ್ ಭಾರತಕ್ಕೆ ಕಂಟಕವಾಗಿದ್ದಾರೆ. ಎಲ್ಗರ್ 46 ರನ್ ಗಳಿಸಿ ಅಜೇಯರಾಗಿ ಮರಳಿದರು.