Tuesday, 7th December 2021

ಆಮ್ ಆದ್ಮಿ ಪಕ್ಷಕ್ಕೆ ರಾಜ್ ದೀಪ ನಾಯ್ಕ್ ಸೇರ್ಪಡೆ

ಪಣಜಿ: ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ರವರ ಉಪಸ್ಥಿತಿಯಲ್ಲಿ ನಟ ಹಾಗೂ ನಿರ್ದೇಶಕ ರಾಜ್ ದೀಪ ನಾಯ್ಕ್ ರವರು ದೆಹಲಿಯಲ್ಲಿ ಆಮ್ ಆದ್ಮಿ ಪಕ್ಷಕ್ಕೆ ಸೇರ್ಪಡೆಯಾದರು.

ಗೋವಾದಲ್ಲಿ ಹೆಚ್ಚುತ್ತಿರುವ ನಿರುದ್ಯೋಗ ಸಮಸ್ಯೆ, ಕರೋನಾ ಮಹಾಮಾರಿಯ ಸಂಕಷ್ಟ ಪರಿಸ್ಥಿತಿ ಯಲ್ಲಿ ರಾಜ್ಯದಲ್ಲಿ ಸಂಕಷ್ಟದಲ್ಲಿರುವ ಜನತೆಗೆ ಕೇವಲ ಆಮ್ ಆದ್ಮಿ ಪಕ್ಷ ಮಾತ್ರ ಸಹಾಯ ಮಾಡಲು ಮುಂದೆ ಬಂದಿದೆ ಎಂದು ನಾಯ್ಕ್ ಹೇಳಿದರು.

ಅರವಿಂದ ಕೇಜ್ರಿವಾಲ್ ರವರ ಆಮ್ ಆದ್ಮಿ ಪಕ್ಷಕ್ಕೆ ಸೇರಲು ಆನಂದವಾಗುತ್ತಿದೆ. ಕಳೆದ ಎರಡು ವರ್ಷಗಳ ಕಾಲ ಕರೋನಾ ಮಹಾಮಾರಿಯ ಹಿನ್ನೆಲೆ ಯಲ್ಲಿ ಜನತೆ ಹೆಚ್ಚಿನ ಆರ್ಥಿಕ ಸಂಕಷ್ಟ ಪರಿಸ್ಥಿತಿ ಎದುರಿಸುವಂತಾಗಿದೆ. ಗೋವಾದಲ್ಲಿ ಜನತೆ ಸಂಕಷ್ಟದಲ್ಲಿರುವ ಸಂದರ್ಭದಲ್ಲಿ ಸಹಾಯ ಮಾಡಿರುವ ಏಕೈಕ ಪಕ್ಷ ಆಮ್ ಆದ್ಮಿ ಪಕ್ಷವಾಗಿದೆ ಎಂದು ನಾಯ್ಕ್ ಹೇಳಿದರು.