Tuesday, 9th August 2022

೩ ಕೋಟಿ ೧೯ ಲಕ್ಷ ರೂ. ವೆಚ್ಚದ ರಸ್ತೆ ಕಾಮಗಾರಿಗೆ ಶಾಸಕರಿಂದ ಚಾಲನೆ

ಮಾನ್ವಿ : ರಾಯಚೂರು ಮುಖ್ಯರಸ್ತೆಯ ಚಿಮ್ಲಪೂರ ಕ್ರಾಸ್ ನಿಂದ ಗೋವಿನದೊಡ್ಡಿ-ಚಿಮ್ಲಪೂರ ಗ್ರಾಮದ ಮೂಲಕೆ, ಹರವಿ, ರಾಧಾಕೃಷ್ಣ ಕ್ಯಾಂಪ್‌ಗೆ ಸಂಪರ್ಕ ಕಲ್ಪಿಸುವ ೫.೫೦ ಕಿ.ಮೀ.ಉದ್ದ, ೧೦ಮೀಟರ್ ಅಗಲ ರಸ್ತೆಯನ್ನು ಅಂದಾಜು ೩ ಕೋಟಿ ೧೯ ಲಕ್ಷ ರೂ ವೆಚ್ಚದಲ್ಲಿ ಉತ್ತಮ ಗುಣಮಟ್ಟದ ರಸ್ತೆ ಡಾಂಬರೀಕರಣ ಗೊಳಿಸಲಾಗುತ್ತಿದ್ದು ಸಾರ್ವಜನಿಕರಿಗೆ ಈ ರಸ್ತೆಯಿಂದ ತಮ್ಮ ಗ್ರಾಮ ಸಂಚಾರಕ್ಕೆ ಹಾಗೂ ರೈತರಿಗೆ ತಮ್ಮ ಜಮೀನುಗಳಿಗೆ ತೆರಳಲು ಅನುಕೂಲವಾಗಲಿದೆ ಎಂದು ಶಾಸಕ ರಾಜಾ ವೆಂಕಟಪ್ಪ ನಾಯಕ ತಿಳಿಸಿದರು.

ತಾಲೂಕಿನ ಚಿಮ್ಲಪೂರ ಗ್ರಾಮದಲ್ಲಿ ಕರ್ನಾಟಕ ಗ್ರಾಮೀಣ ರಸ್ತೆ ಅಭಿವೃದ್ದಿ ಸಂಸ್ಥೆಯ ವಿಶೇಷ ಅಭಿವೃದ್ಧಿ ಯೋಜನೆ ಅಡಿಯಲ್ಲಿ ರಸ್ತೆ ಕಾಮಗಾರಿಗೆ ಭೂಮಿ ಪೂಜೆ ನೆರವೇರಿ ಸುವ ಮೂಲಕ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿ ಸರಕಾರವು ಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಸೌಲಭ್ಯ ನೀಡುತ್ತಿದ್ದು ಪಾಲಕರು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸು ವಂತೆ ತಿಳಿಸಿದರು.

ರಾಜ್ಯ ಜೆಡಿಎಸ್ ಯುವ ಘಟಕದ ಉಪಾಧ್ಯಕ್ಷರಾದ ರಾಜಾ ರಾಮಚಂದ್ರ ನಾಯಕ,ನಗರ ಘಟಕದ ಅಧ್ಯಕ್ಷ ಖಲೀಲ ಖುರೇಷಿ, ಯಲ್ಲನಗೌಡ, ಚಾಮರಸ ಪಾಟೀಲ್,ಬಿ.ಈರಣ್ಣ,ಕರಿಯಪ್ಪಗೌಡ,ತಿಮ್ಮನಗೌಡ, ದಾನಪ್ಪ ದೊರೆ,ಶೇಷಪ್ಪ ನಾಯಕ , ಅಮರಪ್ಪ, ಶರಣಬಸವ ಗೌಡ,ಜಟ್ಟಪ್ಪ ನಾಯಕ,ಚಂದ್ರು ನಾಯಕ,ಹನುಮಪ್ಪ ಗೌಡ,ಹನುಮಪ್ಪ, ಚಿದಾನಂದ ಸ್ವಾಮಿ,ಕೆ ಹನುಮಂತ್ರಾ ಯ ನಾಯಕ, ಗ್ರಾಮ ಪಂಚಾಯತ ಸದಸ್ಯರಾದ ತಿಮಪ್ಪ ಭೋವಿ, ವೆಂಕಟೇಶ ನಾಯಕ,ಶರಣಬಸವ, ಶರಣಯ್ಯ ಸ್ವಾಮಿ ಬ್ಯಾಗವಾಟ್,ಗೋಪಾಲ ನಾಯಕ ಹರವಿ,ಸೈಯದ್ ಹುಸೇನ್ ಸೇರಿದಂತೆ ಇನ್ನಿತರರು ಇದ್ದರು.