Wednesday, 8th February 2023

ರಾಜೀವ್ ಗಾಂಧಿ 30ನೇ ವರ್ಷದ ಪುಣ್ಯತಿಥಿ: ಗಣ್ಯರಿಂದ ಗೌರವ ನಮನ

ನವದೆಹಲಿ: ದಿವಂಗತ ಮಾಜಿ ಪ್ರಧಾನಿ ರಾಜೀವ್ ಗಾಂಧಿಯವರ 30ನೇ ವರ್ಷದ ಪುಣ್ಯತಿಥಿ, ಈ ಹಿನ್ನೆಲೆಯಲ್ಲಿ ಗಣ್ಯರು ಸ್ಮಾರಕಕ್ಕೆ ತೆರಳಿ ಗೌರವ ನಮನ ಸಲ್ಲಿಸಿ ದ್ದಾರೆ.

ಪುಣ್ಯತಿಥಿಯ ಸಂದರ್ಭದಲ್ಲಿ ಅವರ ಮಕ್ಕಳಾದ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ವಾದ್ರಾ, ಹಲವು ರಾಜಕೀಯ ನಾಯಕರು, ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ, ಕಾಂಗ್ರೆಸ್ ಮುಖಂಡರು ರಾಜೀವ್ ಗಾಂಧಿಯವರನ್ನು ಸ್ಮರಿಸಿ ದ್ದಾರೆ.

ಮೇ 21, 1991ರಲ್ಲಿ ತಮಿಳು ನಾಡಿನ ಶ್ರೀಪೆರಂಬದೂರಿನಲ್ಲಿ ಚುನಾವಣಾ ರ್ಯಾಲಿಯಲ್ಲಿ ರಾಜೀವ್ ಗಾಂಧಿಯವರು ಭಾಗವಹಿಸಿದ್ದ ಸಂದರ್ಭದಲ್ಲಿ ಎಲ್ ಟಿಟಿಇ ಕಾರ್ಯಕರ್ತರ ಆತ್ಮಹತ್ಯಾ ದಾಳಿಗೆ ಬರ್ಬರವಾಗಿ ಹತ್ಯೆಗೀಡಾಗಿದ್ದರು.

ರಾಹುಲ್ ಗಾಂಧೀ ಶುಕ್ರವಾರ ಬೆಳಿಗ್ಗೆ ಸ್ಮಾರಕಕ್ಕೆ ತೆರಳಿ ಪುಷ್ಪ ನಮನ ಸಲ್ಲಿಸಿದರು.

error: Content is protected !!