Tuesday, 7th December 2021

ರಾಮ್ ರಹೀಮ್ ಸಿಂಗ್ ಗೆ ಜೀವಾವಧಿ ಶಿಕ್ಷೆ: ಸಿಬಿಐ ವಿಶೇಷ ಕೋರ್ಟ್

ಪಂಚಕುಲ: ಡೇರಾ ಸಚ್ಚಾ ಸೌಧ ಮುಖ್ಯಸ್ಥನಾಗಿದ್ದ ರಾಮ್ ರಹೀಮ್ ಸಿಂಗ್ ಗೆ ಸಿಬಿಐ ವಿಶೇಷ ಕೋರ್ಟ್ ಸೋಮವಾರ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ. ಕೊಲೆ ಆರೋಪದಲ್ಲಿ ರಾಮ್ ರಹೀಮ್ ಸಿಂಗ್ ಬಂಧನಕ್ಕೊಳಗಾಗಿದ್ದರು.

ಡೇರಾ ಸಚ್ಚಾ ಸೌಧ ಅನುಯಾಯಿ ರಂಜಿತ್ ಸಿಂಗ್ ಅವರನ್ನು 2002 ರ ಜುಲೈ 10 ರಂದು ಹತ್ಯೆ ಮಾಡಲಾಗಿತ್ತು. ಪ್ರಕರಣ ಕುರಿತು ಸಿಬಿಐ ವಿಶೇಷ ಕೋರ್ಟ್ ರಾಮ್ ರಹೀಮ್ ಸಿಂಗ್ ದೋಷಿ ಎಂದು ತೀರ್ಪು ನೀಡಿತ್ತು. ರಾಮ್ ರಹೀಮ್ ಸಿಂಗ್ ಮಾತ್ರವಲ್ಲದ್ದೆ ಇತರ ಐವರು ಆರೋಪಿ ಗಳಿಗೂ ಕೋರ್ಟ್ ಜೀವಾವಧಿ ಶಿಕ್ಷೆ ವಿಧಿಸಿದೆ. ರಾಮ್ರ ಹೀಮ್ ಗೆ 31 ಲಕ್ಷ ರೂಪಾಯಿ ದಂಡವನ್ನು ಕೋರ್ಟ್ ವಿಧಿಸಿದೆ.

2003 ರ ಡಿಸೆಂಬರ್ 3 ರಂದು ಸಿಬಿಐ ಕೋರ್ಟ್ ಎಫ್ ಐ ಆರ್ ದಾಖಲು ಮಾಡಿಕೊಂಡಿತ್ತು. ಈಗಾಗಲೇ ರಾಮ್ ರಹೀಮ್ ಇಬ್ಬರು ಭಕ್ತೆಯರ ಮೇಲೆ ಆಶ್ರಮದಲ್ಲಿ ಅತ್ಯಾಚಾರ ನಡೆಸಿದ ಆರೋಪದಲ್ಲಿ 20 ವರ್ಷಗಳ ಜೈಲು ಶಿಕ್ಷೆಗೆ ಗುರಿಯಾಗಿದ್ದಾನೆ. 2017 ರಲ್ಲಿ ಸಿಬಿಐ ಕೋರ್ಟ್ ಶಿಕ್ಷೆ ವಿಧಿಸಿತ್ತು.