ಬೆಳಗಾವಿ: ರಮೇಶ್ ಜಾರಕಿಹೊಳಿ ರಾಜ್ಯಕ್ಕೆೆ, ಮಾಧ್ಯಮಗಳಿಗೆ ಹೀರೋ ಇರಬಹುದು. ಆದರೆ ನಮ್ಮ ಮುಂದೆ ಆತ ಬಿಗ್ ಝೀರೋ ಎಂದು ಶಾಸಕ ಸತೀಶ್ ಜಾರಕಿಹೊಳಿ ಲೇವಡಿ ಮಾಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿ, ಸತೀಶ್ ಬಂಡವಾಳ ಬಯಲು ಮಾಡುತ್ತೇನೆ ಎಂದು ಹೇಳಿದ್ದ ಅನರ್ಹ ಶಾಸಕ ರಮೇಶ್ ಜಾರಕಿಹೊಳಿಗೆ ತಿರುಗೇಟು ನೀಡಿದರು. ನನ್ನ ಬಂಡವಾಳ ಬಯಲು ಮಾಡುವುದಿರಲಿ, ಪ್ರವಾಹ ಪರಿಹಾರ ವಿಚಾರದಲ್ಲಿ ನಡೆಸಿರುವ ಭ್ರಷ್ಟಾಾಚಾರದ ಬಗ್ಗೆೆ ಮಾತನಾಡಲಿ. 1200 ಟ್ರ್ಯಾಾಕ್ಟರ್ಗಳ ಬಾಡಿಗೆ ಬಗ್ಗೆೆ ಹೇಳಲಿ. ಶಾಸಕರಾದವರು ಮೊದಲು ಅದಕ್ಕೆೆ ಉತ್ತರ ಕೊಡಲಿ. ನಮ್ಮ ಬಂಡವಾಳ ಏನೂ ಇಲ್ಲ, ಇದ್ದರೆ ಅದಕ್ಕೆೆ ನಾನು ಉತ್ತರ ಕೊಡುತ್ತೇನೆ ಎಂದು ತಿರುಗೇಟು ನೀಡಿದರು.
ಸತೀಶ್ ಷಂ… ಎಂಬ ರಮೇಶ್ ಹೇಳಿಕೆಗೆ ಸತೀಶ್ ಜಾರಕಿಹೊಳಿ ಪ್ರತಿಕ್ರಿಿಯಿಸಿ, ರಮೇಶ್ ಹೇಳಿಕೆಗೆ ಉತ್ತರ ಕೊಡುವುದಿಲ್ಲ. ಅವನು ಬದ್ಧತೆ ಇಲ್ಲದ ರಾಜಕಾರಣಿ. ರಮೇಶ್ ಈ ರೀತಿ ಮಾತನಾಡುವುದು ಹೊಸದೇನಲ್ಲ. ಆತ ರಾಜ್ಯಕ್ಕೆೆ ಮತ್ತು ಮಾಧ್ಯಮಗಳಿಗೆ ಹೀರೋ ಇರಬಹುದು. ಆದರೆ ನಮ್ಮ ಮುಂದೆ ರಮೇಶ್ ಬಿಗ್ ಝೀರೋ ಎಂದು ವ್ಯಂಗ್ಯ ಮಾಡಿದರು.
ಗೋಕಾಕ ಉಪಚುನಾವಣೆ ಹೋರಾಟ ಸಹೋದರರ ನಡುವೆ ಅಲ್ಲ. ಬಿಜೆಪಿ ಮತ್ತು ಕಾಂಗ್ರೆೆಸ್ ಪಕ್ಷಗಳ ನಡುವೆ. ಇದನ್ನು ವೈಯಕ್ತಿಿಕ ಚುನಾವಣೆ ಎನ್ನಲು ಸಾಧ್ಯವಿಲ್ಲ. ಬಾಲಚಂದ್ರ ಮತ್ತು ಸಿಎಂ ಬಿಎಸ್ವೈ ಸೇರಿದಂತೆ ಇಡೀ ಮಂತ್ರಿಿ ಮಂಡಲ ಗೋಕಾಕನಲ್ಲಿ ಚುನಾವಣಾ ಪ್ರಚಾರಕ್ಕೆೆ ಬರುತ್ತದೆ. ನಮ್ಮ ಕಡೆಯಿಂದಲೂ ಕಾಂಗ್ರೆೆಸ್ ನಾಯಕರು ಪ್ರಚಾರಕ್ಕೆೆ ಬರುತ್ತಾಾರೆ. ಅದರಲ್ಲಿ ಸಿದ್ದರಾಮಯ್ಯ ಸ್ಟಾಾರ್ ಪ್ರಚಾರಕ. ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆೆಸ್ಗೆ ಹಿನ್ನಡೆಯಾಗಿತ್ತು. ಆದರೆ ಈಗ ಒಂದು ಹಂತದಲ್ಲಿ ಕ್ಷೇತ್ರದ ಜನರ ಮನ ಗೆಲ್ಲುವಲ್ಲಿ ಯಶಸ್ವಿಿಯಾಗಿದ್ದೇವೆ ಎಂದು ವಿಶ್ವಾಾಸ ವ್ಯಕ್ತಪಡಿಸಿದರು.