ಗೋಕಾಕ: ಭ್ರಷ್ಟ ಜೆಡಿಎಸ್-ಕಾಂಗ್ರೆೆಸ್ ಮೈತ್ರಿಿ ಸರಕಾರವನ್ನು ಕೆಡವಿದ ಮಾಜಿ ಸಚಿವ ರಮೇಶ್ ಜಾರಕಿಹೊಳಿ ನಮ್ಮ ನಡುವಿನ ಸೂಪರ್ ಹೀರೊ ಎಂದು ಗೋಕಾಕ ಕ್ಷೇತ್ರ ಉಪಚುನಾವಣೆ ಉಸ್ತುವಾರಿ ಎ.ಎಸ್.ಪಾಟೀಲ ನಡಹಳ್ಳಿಿ ಹೇಳಿದರು. ‘ಬಿಜೆಪಿ ಹಾಗೂ ಕಾಂಗ್ರೆೆಸ್ ಕಾರ್ಯಕರ್ತರ ಮಿಲನ’ ಕಾರ್ಯಕ್ರಮದಲ್ಲಿ ಮಾತನಾಡಿ, ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿಿಯಾಗಲು ಜಾರಕಿಹೊಳಿ ಸಹೋದರರು ಬಹು ಮುಖ್ಯ ಪಾತ್ರವಹಿಸಿದ್ದಾರೆ. ಬಿಜೆಪಿ ಸರಕಾರ ರಚನೆಗೆ 2008ರಲ್ಲಿ ಬಾಲಚಂದ್ರ ಜಾರಕಿಹೊಳಿ ಕಾರಣವಾಗಿದ್ದರು. 2019ರಲ್ಲಿ ರಮೇಶ್ ಬಹು ದೊಡ್ಡ ಪಾತ್ರ ವಹಿಸಿದ್ದಾರೆ. ಇಡೀ ರಾಜ್ಯದ ಜನರು ಇಲ್ಲಿನ ಚುನಾವಣೆಯನ್ನು ಕುತೂಹಲದಿಂದ ನೋಡುತ್ತಿಿದ್ದಾರೆ. ಎಲ್ಲರ ಕಣ್ಣು ಗೋಕಾಕ ಮೇಲಿದೆ ಎಂದರು. ರಮೇಶ್ ಆಯ್ಕೆೆಯಾದರೆ ಉಪಮುಖ್ಯಮಂತ್ರಿಿ ಸ್ಥಾಾನ ಅಲಂಕರಿಸಲಿದ್ದಾರೆ ಎಂದು ಭವಿಷ್ಯ ನುಡಿದರು.