Friday, 2nd December 2022

ರಮೇಶ್ ಕುಮಾರ್ ಓರ್ವ ರಿಂಗ್ ಮಾಸ್ಟರ್: ಡಾ.ಸುಧಾಕರ್ ವಾಗ್ದಾಳಿ

ಚಿಕ್ಕಬಳ್ಳಾಪುರ: ಅಧ್ಯಕ್ಷ ಗೋಪಾಲಗೌಡ ಕೇವಲ ಹೆಸರಿಗೆ ಮಾತ್ರ, ಬ್ಯಾಂಕ್ ನಲ್ಲಿ ಮಾಜಿ ಸ್ಪೀಕರ್, ಶಾಸಕ ರಮೇಶ್ ಕುಮಾರ್ ಅವರದ್ದೇ ದರ್ಬಾರ್. ಕೋಲಾರ, ಚಿಕ್ಕಬಳ್ಳಾಪುರ ಡಿಸಿಸಿ ಬ್ಯಾಂಕ್ ನಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ನಡೆದಿದೆ ಎಂದು ಆರೋಗ್ಯ ಸಚಿವ ಡಾ.ಸುಧಾಕರ್ ವಾಗ್ದಾಳಿ ನಡೆಸಿದರು.

ರಮೇಶ್ ಕುಮಾರ್ ಓರ್ವ ರಿಂಗ್ ಮಾಸ್ಟರ್, ಬ್ಯಾಂಕ್ ನಲ್ಲಿ ನಡೆದ ಭ್ರಷ್ಟಾಚಾರ, ಅವ್ಯವಹಾರದ ಬಗ್ಗೆ ತನಿಖೆ ನಡೆದರೆ ರಮೇಶ್ ಕುಮಾರ್ ಸೇರಿದಂತೆ ಆಡಳಿತ ಮಂಡಳಿಯ ಕೆಲವರು ಜೈಲಿಗೆ ಹೋಗುತ್ತಾರೆ. ಹೀಗಾಗಿ, ಬ್ಯಾಂಕ್ ನಲ್ಲಿ ತನಿಖೆ ನಡೆಯದಂತೆ ಹೈಕೋರ್ಟ್ ನಿಂದ ತಡೆಯಾಜ್ಞೆ ತಂದಿದ್ದಾರೆ ಎಂದು ಕಿಡಿಕಾರಿದರು.

ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲಾ ಸಹಕಾರ ಬ್ಯಾಂಕ್ ಹಾಗೂ ಕೋಲಾರ-ಚಿಕ್ಕಬಳ್ಳಾಪುರ ಹಾಲು ಉತ್ಪಾದಕರ ಸಹಕಾರ ಮಹಾ ಮಂಡಳಿ ವಿಭಜನೆಗೆ ಹಲವರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಆದರೆ ಯಾರು ಎಷ್ಟೇ ತಡೆದರೂ ಎರಡು ಸಂಸ್ಥೆಗಳನ್ನು ವಿಭಜನೆ ಮಾಡಿಯೇ ಸಿದ್ಧ ಎಂದು ಗುಡುಗಿದರು.