Tuesday, 27th July 2021

ರಾಮೇಶ್ವರದಲ್ಲಿ ಶ್ರೀಲಂಕಾ ಸಿಗ್ನಲ್ !

ಸಂದೇಶ್ ಶರ್ಮಾ

ದೀರ್ಘ ಕಾಲದ ಕೋವಿಡ್19 ಬಿಕ್ಕಟ್ಟಿನ ನಂತರ ಮೈ- ಮನಸ್ಸು ಬಿಚ್ಚಿ ಸ್ವಚ್ಛಂದವಾಗಿ ಪ್ರವಾಸ ಹೋಗಿದ್ದು ತಮಿಳುನಾಡಿನ ಮಧುರೈ ಹಾಗೂ ರಾಮೇಶ್ವರಕ್ಕೆ.

ಮಧುರೈನಲ್ಲಿರುವ ಮೀನಾಕ್ಷಿ ಸುಂದರಂ ದೇವಳಕ್ಕೆ ಹೋದರೆ ಅಂದು ತಮಿಳರ ತೈಪೂಸಂ ಹಬ್ಬ. ಈ ಹಬ್ಬವನ್ನು ಪೊಂಗಲ್ ನಂತರ ಬರುವ ಮೊದಲ ಪುಷ್ಯ ನಕ್ಷತ್ರದ ಹುಣ್ಣಿಮೆಯಂದು ಆಚರಿಸುತ್ತಾರೆ. ಅಂದು ಮೀನಾಕ್ಷಿಯ ಉತ್ಸವ ಮೂರ್ತಿಗೆ ಪೂಜೆ ಸಲ್ಲಿಸುತ್ತಾರೆ. ಸ್ಥಳೀಯ ಜಾನಪದ ನೃತ್ಯ, ಕಲೆ ಅನಾವರಣಗೊಳ್ಳುತ್ತದೆ. ನಾವು ಬರುವ ದಿನವೇ ಈ ಹಬ್ಬವಿದ್ದುದ್ದು ಯೋಗಾ
ಯೋಗ. ನಂತರ ತಿರುಮಲೈ ನಾಯಕರ ಅರಮನೆಗೆ ಭೇಟಿ ಕೊಟ್ಟು ಆ ವಿಸ್ತಾರವಾದ ಅರಮನೆಯ ಇತಿಹಾಸ ತಿಳಿದು, ಅಲ್ಲಿನ ಒಂದೊಂದು ಕಂಬಗಳ ಉದ್ದ-ಅಗಲ ನೋಡಿ ಆಶ್ಚರ್ಯವೂ ಆಯಿತು.

ಅದೊಂದು ಅದ್ಭುತವಾದ ಅರಮನೆ! ಸಂಜೆ ಹೊತ್ತಿಗೆ ಅಲ್ಲಿನ ಕಡೈ ಇಡ್ಲಿ,ಜಿಗರ್ ತಾಂಡ, ಅಕ್ಕಿ ಶ್ಯಾವಿಗೆ, ಮೆದು ವಡ ಮತ್ತು ಮಧುರೈ ಶೈಲಿಯ ರಾತ್ರಿ ಊಟ ಮಾಡಿ ರೈಲಿನಲ್ಲಿ ರಾಮನಾಥಪುರಂ(ರಾಂನಾಡ್ ಸ್ಥಳಿಯರ ಭಾಷೆ) ಗೆ ಹೊರಟೆವು.
ರಾಮೇಶ್ವರಂನಲ್ಲಿ ಸ್ನಾನವೇ ಪ್ರಖ್ಯಾತ. ಇಲ್ಲಿನ ಅಗ್ನಿ ತೀರ್ಥದಲ್ಲಿ ಮಿಂದು 21 ಬಾವಿಯ ನೀರನ್ನು ತಲೆಯ ಮೇಲೆ ಪ್ರೊಕ್ಷಣೆ ಮಾಡುವ ಪುರಾತನ ಪದ್ಧತಿ ಇದೆ.

ಆದರೆ ಕೋವಿಡ್ ಕಾರಣದಿಂದ ಈಗ ರದ್ದಾಗಿದೆ. ರಾವಣನ ವಧೆಯ ನಂತರ ರಾಮನು ಬ್ರಹ್ಮ ಹತ್ಯಾ ದೋಷ ನಿವಾರಣೆಗೆ ಸ್ಥಾಪಿಸಿದ ಲಿಂಗವೇ ರಾಮೇಶ್ವರ ಲಿಂಗ. ದ್ವಾದಶ ಜ್ಯೋತಿರ್ಲಿಂಗಗಳಲ್ಲಿ ಇದೂ ಒಂದು. ದೇಗುಲ ದರ್ಶನದ ನಂತರ ಅಲ್ಲಿನ ಪುರಾಣ ಪ್ರಸಿದ್ಧ ಸ್ಥಳಗಳಾದ ರಾಮ ಪಾದಂ, ಲಕ್ಷಣ ತೀರ್ಥಂ, ವಿಭೀಷಣನ ಪಟ್ಟಾಭಿಷೇಕ ನಡೆದ ಸ್ಥಳ, ರಾಮ ಸೇತು ಮೊದಲಾದ ಕಡೆ ಭೇಟಿ ಇತ್ತು ರಾಮಾಯಣ ಪುನರ್ ಮನನ ಮಾಡಿಕೊಂಡು, ಮಾಜಿ ರಾಷ್ಟ್ರಪತಿ ಎಪಿಜೆ ಅಬ್ದುಲ್ ಕಲಾಂ ಅವರು ಹುಟ್ಟಿದ ಮನೆಗೆ ಭೇಟಿ ನೀಡಿ (ಇದೀಗ ಮ್ಯೂಸಿಯಂ) ಧನುಷ್ ಕೋಡಿ ಘೋಸ್ಟ್ ಟೌನ್‌ಗೆ ಬಂದು 1964
ಸುನಾಮಿಗೆ ತನ್ನತನ ಕಳೆದುಕೊಂಡು ಪಾಳು ಬಿದ್ದಿರುವ ರೈಲ್ವೇ ನಿಲ್ದಾಣ, ಅಂಚೆ ಕಚೇರಿಯನ್ನು ನೋಡಿ ಮತ್ತೆ ಗತವೈಭವಕ್ಕೆ ಮರಳಲಿ ಎಂದು ಹಾರೈಸಿ, ಅಲ್ಲಿಂದ 5 ಕಿಮೀ ದೂರದಲ್ಲಿರುವ ಭಾರತದ ತುದಿ ಬಿಂದುವಿಗೆ ಬಂದೆವು.

ಆಶ್ಚರ್ಯ  ಎಂದರೆ ಇಲ್ಲಿಂದ ಶ್ರೀಲಂಕಾದ ಮೊಬೈಲ್ ಸಿಗ್ನಲ್ ಸಿಗುತ್ತದೆ! ಇಲ್ಲಿಗೆ ಶ್ರೀಲಂಕಾ 17 ಕಿಮೀ ದೂರವಷ್ಟೇ. ಈ ಸಮುದ್ರದಲ್ಲಿ ಆಟ ಆಡಿದ್ದು ಬಹಳ ಮುದನೀಡಿzಗಿದೆ. ಇಲ್ಲಿ ಅಲೆಗಳು ಭಾರಿ ಗಾತ್ರದಲ್ಲಿ ಬರುವುದಿಲ್ಲ ಸುಮಾರು ದೂರ ಹೂದರೂ ಸಹ ದೂಡ್ಡ ಅಲೆಗಳ ಭಯವಿಲ್ಲ. ಇಲ್ಲಿಂದ ಶ್ರೀಲಂಕಾದ ತಲೈಮನಾರ್‌ನ 6,5 ನೇ ದ್ವೀಪಕ್ಕೆ ಇಲ್ಲಿಂದ ಈಜುತ್ತಾ ಹೋಗಬಹುದು.

Leave a Reply

Your email address will not be published. Required fields are marked *