Thursday, 23rd March 2023

ಜನ್ಮದಿನದ ಸಂಭ್ರಮದಲ್ಲಿ ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ

Ramya- Sandalwood Queen
ಬೆಂಗಳೂರು: ಸ್ಯಾಂಡಲ್ ವುಡ್ ಕ್ವೀನ್ ರಮ್ಯಾಗೆ ಇಂದು ಜನ್ಮದಿನದ ಸಂಭ್ರಮ. ಚಿತ್ರರಂಗದಿಂದ ದೂರವಿದ್ದರೂ ಅಭಿಮಾನಿ ಗಳು, ಸ್ಯಾಂಡಲ್ ವುಡ್ ಕಲಾವಿದರು ಮರೆತಿಲ್ಲ.
ಬರ್ತ್ ಡೇಗೆ ಸಾಮಾಜಿಕ ಜಾಲತಾಣದಲ್ಲಿ ಸ್ಯಾಂಡಲ್ ವುಡ್ ಕಲಾವಿದರು, ಅಭಿಮಾನಿಗಳು ಶುಭಾಶಯ ಕೋರಿದ್ದಾರೆ. ಇವರಿ ಗೆಲ್ಲಾ ರಮ್ಯಾ ಧನ್ಯವಾದ ಸಲ್ಲಿಸಿದ್ದಾರೆ.

ತಮಗೀಗ 39 ವರ್ಷ ವಯಸ್ಸಾಯ್ತು ಎಂದೂ ಹೇಳಿಕೊಂಡಿದ್ದಾರೆ. ‘ನಿಮ್ಮ ಹಾರೈಕೆಗೆ ಧನ್ಯವಾದಗಳು. ಸದ್ಯಕ್ಕೆ ಅಟ್ಲಾಂಟಿಕ್ ಸಾಗರ ಪ್ರದೇಶದಲ್ಲೆಲ್ಲೋ ಇದ್ದೇನೆ. ತುಂಬಾ ಸುಸ್ತಾಗಿದೆ, ಹಾಗಿದ್ದರೂ 39 ನೇ ವಯಸ್ಸನ್ನು ಸಂಭ್ರಮದಿಂದ ಬರಮಾಡಿ ಕೊಳ್ಳುತ್ತಿದ್ದೇನೆ ಎಂದಿದ್ದಾರೆ.

error: Content is protected !!