Wednesday, 8th February 2023

ರ‍್ಯಾಪಿಡ್‌ ರಸ್ತೆ ಉದ್ಘಾಟಿಸಿದ ಸಿಎಂ ಬೊಮ್ಮಾಯಿ

ಬೆಂಗಳೂರು : ಬಿಬಿಎಂಪಿ ವತಿಯಿಂದ ಸಿ.ವಿ.ರಾಮನ್ ವಿಧಾನಸಭಾ ಕ್ಷೇತ್ರದ ವ್ಯಾಪ್ತಿ ಯಲ್ಲಿ ಪ್ರಾಯೋಗಿಕವಾಗಿ ನಿರ್ಮಿಸಿರುವ ರ‍್ಯಾಪಿಡ್‌ ರಸ್ತೆಯನ್ನು ಸಿಎಂ ಬಸವರಾಜ ಬೊಮ್ಮಾಯಿ ಅವರು ಉದ್ಘಾಟಿಸಿದ್ದಾರೆ.

ರ‍್ಯಾಪಿಡ್‌ ರಸ್ತೆ ಉದ್ಘಾಟಿಸಿ ಮಾತನಾಡಿದ ಸಿಎಂ ಬೊಮ್ಮಾಯಿ, ವೈಟ್ ಟಾಪಿಂಗ್ ರಸ್ತೆಗಾಗಿ ಬಹಳಷ್ಟು ಟ್ರಾಫಿಕ್ ಆಗುತ್ತಿತ್ತು.

ರಿಪೇರಿ ಇದ್ದಾಗಲೂ ಕೆಲಸ ಮಾಡುವುದು ದೊಡ್ಡ ಸವಾಲಾಗಿತ್ತು. ಹೊಸ ಟೆಕ್ನಾಲಜಿ ಮೂಲಕ ರ್‍ಯಾಪಿಡ್ ರೋಡ್ ಮಾಡಲಾ ಗಿದೆ. ಪ್ರಾಯೋಗಿಕವಾಗಿ 300 ಮೀಟರ್ ರಸ್ತೆ ರೆಡಿಯಾಗಿದೆ. 20 ಟನ್ ಮೇಲೆ ಇರುವ ವಾಹನಗಳನ್ನ ಸಂಚಾರ ಮಾಡಲು ಅವಕಾಶ ಇದೆ ಎಂದು ಹೇಳಿದ್ದಾರೆ.

ದೇಶದಲ್ಲಿ ಇದೇ ಮೊದಲು ಬಾರಿಗೆ ನಮ್ಮ ಬೆಂಗಳೂರಿನಲ್ಲಿ ರ್‍ಯಾಪಿಡ್ ರಸ್ತೆ ಪರಿಚಯ ವಾಗಿದೆ. ಹಳೆ ಮದ್ರಾಸ್ ರಸ್ತೆಯ ಬಿನ್ನಮಂಗಲ ವೃತ್ತದಿಂದ ಸುಮಾರು 500 ಮೀಟರ್ ತನಕ ಪ್ರಾಯೋಗಿಕವಾಗಿ ರಸ್ತೆಯನ್ನು ನಿರ್ಮಿಸಲಾಗಿದೆ.

error: Content is protected !!