Tuesday, 9th August 2022

ಮಾಧ್ಯಮಗಳು ಕಿಡಿಗೇಡಿಗಳ ಕೈಗೆ ಸಿಗುವ ಅಸ್ತ್ರವಾಗಬಾರದು: ಪತ್ರಕರ್ತ ರವಿ ಹೆಗಡೆ

ರಾಯಚೂರು: ಮಾಧ್ಯಮಗಳು ಅತ್ಯಂತ ವಿಶ್ವಾಸಾರ್ಹತೆ ಕಾಪಾಡಿಕೊಂಡು ಕೆಲಸ ಮಾಡಬೇಕು. ಮಾಧ್ಯಮಗಳು ಕಿಡಿಗೇಡಿಗಳ ಕೈಗೆ ಸಿಗುವ ಅಸ್ತ್ರವಾಗ ಬಾರದು ಎಂದು ಹಿರಿಯ ಪತ್ರಕರ್ತ ರವಿ ಹೆಗಡೆ ಹೇಳಿದರು.

ಗಸಗೂರ ಪಟ್ಟಣದಲ್ಲಿ ನೂತನ ಪತ್ರಿಕ ಭವನ ಲೋಕಾರ್ಪಣೆ ಮಾಡಿ ಮಾತನಾಡಿದರು. ಮಾಧ್ಯಮಗಳು ಹೇಳಿದ್ದೆ ಸತ್ಯ ಎನ್ನುವ ಹಾಗೆ ಬಿಂಬಿಸಿದ್ರೆ ಜನ ಪಾಠ ಕಲಿಸ್ತಾರೆ. ಟಿವಿ ಚಾನೆಲಗಳ ಟಿಆರಪಿ ಇತ್ತೀಚೆಗೆ ಕಡಿಮೆಯಾಗುತ್ತಿದೆ ಎಂದು ಅಬಿಪ್ರಾಯಪಟ್ಟರು. ಕೋವಿಡ ಸಂದರ್ಭದಲ್ಲಿ ಜನ ಹೆಚ್ಷು ಸಿನೀಮಾ ನೋಡಲು ಒಲವು ತೋರಿಸಲು ಆರಂಭಿಸಿದ್ದಾರೆ. ಬೆರೆ ಭಾಷೆಯ ಸಿನೇಮಾಗಳು ಕನ್ನಡಕ್ಕೆ ಡಬ್ ಆಗುತ್ತಿದೆ. ಇಲ್ಲಿ ಸಿನೆಮಾ ರಂಗ ಮಾರ್ಕೆಟ್ ಕಳೆದುಕೊಳ್ಳಯತ್ತಿದೆ. ಹಾಗೆ ನಾವು ತೊರಿಸಿದ್ದೆ ಸುದ್ದಿ ಎಂಬ ಅಹಂಕಾರಕ್ಕೆ ಹೊದ್ರೆ ಜನ ಒಳ್ಳೆದನ್ನ ನೊಡಲು ಆರಂಭಿಸ್ತಾರೆ. ಸಾಮಾಜಿಕ ಜಾಲ ತಾಣಗಳಲ್ಲಿ ಬಂದಷ್ಟು ಸುದ್ದಿ ಯಾವ ಪತ್ರಿಕೆ ಚಾನೆಲಗಳಲ್ಲಿ ಬರಲ್ಲ ಎಂದು ಹೇಳಿದರು.

ಯುಟ್ಯೂಬ್ ಭೂಮಿ ಮೇಲಿರುವ ಅತ್ಯಂತ ದೊಡ್ಡ ಚಾನೆಲ. ಆದ್ರೆ ಅದರ ಜತೆಗೆ ಅಪಾಯವೂ ಹೆಚ್ಚಾಗುತ್ತಿದೆ. ಸುಳ್ಳು ಸುದ್ದಿ ಹರಡುವ ಆತಂಕ ಎದುರಿಸು ವಂತಾಗಿದೆ ಎಂದು ಹೇಳಿದರು.

ಓಟಿಟಿ ಅನ್ನೊದು ಹೊಸ ಮಾಧ್ಯಮ ಸೃಷ್ಟಿಯಾಗುತ್ತದೆ. ನ್ಯೂಸ್ ಆನ್ ಡಿಮ್ಯಾಂಡ ರೀತಿಯಲ್ಲಿ ಜನ ಬಯಸಿದ್ದು ನೋಡುವ ಸಮಯ ಬರಲಿದೆ ಎಂದು ಹೇಳಿದರು.
ರಾಜ್ಯ ಕಾರ್ಯನಿರತ ಪತ್ರಕರ್ಯರ ಸಂಘದ ರಾಜ್ಯ ಅಧ್ಯಕ್ಷ ಶಿವಾನಂದ ತಗಡೂರ ಮಾತನಾಡಿದರು. ಸಂಸದ ಅಮರೇಶ್ವರ ನಾಯಕ, ಮಾಜಿ ಶಾಸಕ ಮಾನಪ್ಪ ವಜ್ಜಲ್, ಜಿಲ್ಲಾಧ್ಯಕ್ಷ ಗುರುನಾಥ, ಪತ್ರಕರ್ತರಾದ ಶಿವಮೂರ್ತಿ ಹಿರೇಮಠ, ಶಿವರಾಜ ಕೆಂಭಾವಿ, ರಮೇಶ ಗೌಡೂರು ಸೇರಿದಂತೆ ಹಲವರು ಕಾರ್ಯ ಕ್ರಮದಲ್ಲಿ ಉಪಸ್ಥಿತರಿದ್ದರು.