Thursday, 3rd December 2020

ಹತ್ತು ಲಕ್ಷ ಫಾಲೋವರ್ಸ್ ಹೊಂದಿದ ಆರ್‌.ಬಿ.ಐ

ನವದೆಹಲಿ: ಹಣಕಾಸಿನ ವ್ಯವಹಾರ, ಹಾಗೂ ಇನ್ನಿತರ ಕೆಲಸಗಳಿಗೆ ಬೇರೆಲ್ಲ ಬ್ಯಾಂಕುಗಳಿಗೆ ಸೂಚನೆ, ನಿರ್ದೇಶನ ನೀಡುವ ಆರ್‌.ಬಿ.ಐ ಸಾಮಾಜಿಕ ಜಾಲತಾಣದಲ್ಲಿ ವ್ಯಸ್ತರಾಗುವುದೆಂದರೆ….

ಭಾರತೀಯ ರಿಸರ್ವ್ ಬ್ಯಾಂಕ್ ಗೆ ಟ್ವಿಟ್ಟರ್ ನಲ್ಲಿ ಹತ್ತು ಲಕ್ಷ ಫಾಲೋವರ್ಸ್ ಗಳಿದ್ದಾರೆ. ಆರ್ ಬಿಐ ಹಿರಿಯ ಅಧಿಕಾರಿಗಳ ಪ್ರಕಾರ, ಜಾಗತಿಕ ಮಟ್ಟದಲ್ಲಿ ಯಾವುದೇ ಕೇಂದ್ರ ಬ್ಯಾಂಕ್ ಗೂ ಇಲ್ಲದಷ್ಟು ಫಾಲೋವರ್ಸ್ ಗಳು ಟ್ವಿಟ್ಟರ್ ನಲ್ಲಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾಗಿ ಇದೆ.

“ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾಗೆ ಟ್ವಿಟ್ಟರ್ ನಲ್ಲಿ ಇಂದು ಒಂದು ಮಿಲಿಯನ್ ಫಾಲೋವರ್ಸ್ ಆಗಿದ್ದಾರೆ. ಆರ್ ಬಿಐನಲ್ಲಿನ ನನ್ನ ಎಲ್ಲ ಸಹೋದ್ಯೋಗಿಗಳಿಗೆ ಅಭಿನಂದನೆ ಹೇಳುತ್ತೇನೆ,” ಎಂದು ಆರ್ ಬಿಐ ಗವರ್ನರ್ ಶಕ್ತಿಕಾಂತ ದಾಸ್ ಭಾನುವಾರ ಟ್ವೀಟ್ ಮಾಡಿದ್ದಾರೆ.

ಯು.ಎಸ್. ಫೆಡರಲ್ ರಿಸರ್ವ್ ಗೆ ಟ್ವಿಟ್ಟರ್ ನಲ್ಲಿ 6,77,000 ಅನುಯಾಯಿಗಳಿದ್ದಾರೆ. ಯುರೋಪಿಯನ್ ಸೆಂಟ್ರಲ್ ಬ್ಯಾಂಕ್ ಗೆ 5.9 ಲಕ್ಷ ಫಾಲೋವರ್ಸ್, ಬ್ರೆಜಿಲ್ ಕೇಂದ್ರ ಬ್ಯಾಂಕ್ 3.8 ಲಕ್ಷ ಹಾಗೂ ಬ್ಯಾಂಕ್ ಆಫ್ ಇಂಗ್ಲೆಂಡ್ ಗೆ 3.17ಲಕ್ಷ ಫಾಲೋವರ್ಸ್ ಇದ್ದಾರೆ.

 

Leave a Reply

Your email address will not be published. Required fields are marked *