Friday, 7th May 2021

ನಾಲ್ಕಕ್ಕೇ ಔಟಾದ ಆರ್‌ಸಿಬಿಗೆ ಡಬಲ್‌ ಶಾಕ್‌ ?

ಬೆಂಗಳೂರು: ಸತತ ನಾಲ್ಕು ಗೆಲುವನ್ನು ದಾಖಲಿಸಿದ್ದ ಆರ್​ಸಿಬಿ ಭಾನುವಾರ ಚೆನ್ನೈ ಸೂಪರ್ ಕಿಂಗ್ಸ್ ಎದುರು ಸೋಲುಂಡ ಬೆನ್ನಲ್ಲೇ ಮತ್ತೊಂದು ಶಾಕ್​ ಎದುರಾಗಿದೆ. ಸಾಗರೋತ್ತರ ಆಟಗಾರರಲ್ಲಿ ಇಬ್ಬರು ಸ್ವದೇಶಕ್ಕೆ ಮರಳುವುದಾಗಿ ತಿಳಿಸಿದೆ.

ಆಸ್ಟ್ರೇಲಿಯಾ ಕ್ರಿಕೆಟಿಗರಾದ ಕೇನ್​ ರಿಚರ್ಡ್​ಸನ್ ಹಾಗೂ ಆಡಮ್​ ಜಂಪಾ ಐಪಿಎಲ್​ 2021ರ ಆಟವನ್ನು ಅರ್ಧದಲ್ಲೇ ಬಿಟ್ಟು ಆಸ್ಟ್ರೇಲಿಯಾಕ್ಕೆ ಮರಳಲಿದ್ದಾರೆ. ಆಸ್ಟ್ರೇಲಿಯಾದಲ್ಲಿ ಕರೊನಾ ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಿದೆ. ಆ ಹಿನ್ನೆಲೆಯಲ್ಲಿ ಖಾಸಗಿ ಕಾರಣಗಳಿಂದ ಆಟಗಾರರು ಮರಳುತ್ತಿರುವುದಾಗಿ ಫ್ರ್ಯಾಂಚೈಸಿ ತಿಳಿಸಿದೆ. ಭಾನುವಾರ ರಾಜಸ್ಥಾನ ರಾಯಲ್ಸ್ ತಂಡದ ಆಂಡ್ರ್ಯೂ ಟೈ ಕೂಡ ಇದೇ ರೀತಿ ಐಪಿಎಲ್​ ಬಿಟ್ಟು ಅವರ ದೇಶಕ್ಕೆ ವಾಪಾಸು ಹೋಗಿದ್ದರು.

ಇಬ್ಬರು ಆಟಗಾರರು ಮರಳುತ್ತಿರುವುದರಿಂದ ಆರ್​ಸಿಬಿ ಅಷ್ಟೊಂದು ದೊಡ್ಡ ಲಾಸ್​ ಏನು ಆಗುವುದಿಲ್ಲ. ಈ ಸಲದ ಐಪಿಎಲ್​ನಲ್ಲಿ ಆರ್​ಸಿಬಿ ಪರ ರಿಚರ್ಡ್​ಸನ್​ ಒಂದು ಮ್ಯಾಚ್​ ಆಡಿದ್ದರು.

Leave a Reply

Your email address will not be published. Required fields are marked *