ಬೆಂಗಳೂರು: ನಾನು ಯಾರ ಬಗ್ಗೆಯಾದರೂ ಅಪಪ್ರಚಾರ ಮಾಡಿದ್ದರೆ ಆತ್ಮಹತ್ಯೆ ಮಾಡಿಕೊಳ್ಳಲು ಸಿದ್ಧನಿದ್ದೇನೆ ಎಂದು ವಸತಿ ಸಚಿವ ವಿ.ಸೋಮಣ್ಣ ತಿಳಿಸಿದರು.
ಹಾಸನದಲ್ಲಿ ಪಿಡಿಒಗಳಿಗೆ ಸಂಬಂಧಿಸಿದಂತೆ ಸೋಮಣ್ಣ ಮಾಡಿದ ಆರೋಪ ತೀವ್ರ ವಿವಾದಕ್ಕೆ ಎಡೆ ಮಾಡಿಕೊಟ್ಟ ಹಿನ್ನೆಲೆ ಯಲ್ಲಿ ತುರ್ತು ಪತ್ರಿಕಾಗೋಷ್ಠಿ ನಡೆಸಿದ ಸೋಮಣ್ಣ ಈ ಸ್ಪಷ್ಟನೆ ನೀಡಿದರು. ಬಡವರಿಗಾಗಿ ಶಾಸಕರು ನೀಡಿರುವ ಸಲಹೆಯನ್ನು ಸ್ವೀಕರಿಸಬೇಕು. ಸಲಹೆಗಳನ್ನು ನಾನು ಕಾರ್ಯ ರೂಪಕ್ಕೆ ತರಬೇಕು. ಇಲ್ಲವೆಂದರೆ ಕೆಲಸಕ್ಕೆ ಬಾರದ ವ್ಯಕ್ತಿಯಾಗಿ ಬಿಡುತ್ತೇನೆ ಎಂದರು.
ಈಗಲೂ ಹೇಳಿರುವ ಹೇಳಿಕೆಗೆ ಈಗಲೂ ಬದ್ಧ. ಯಾವ ಪಿಡಿಒಗಳು ಸರಿಯಾಗಿ ಕೆಲಸ ಮಾಡುವುದಿಲ್ಲವೋ ಅವರನ್ನು ಕುರಿತು ಹೇಳಿದ್ದೇನೆ. ಗೌರವದಿಂದ ಕೆಲಸ ಮಾಡುವ ಪಿಡಿಒಗಳಿಗೆ ನೋವಾಗಿದ್ದರೆ ವಿಷಾದ ವ್ಯಕ್ತಪಡಿಸುತ್ತೇನೆ ಎಂದು ಹೇಳಿದರು.
ಚಿತ್ರದುರ್ಗ ಜಿಲ್ಲೆಯ ಕಣಗನೂರು ಪಂಚಾಯ್ತಿಯಲ್ಲಿ 180 ಮಂದಿ ಅರ್ಹ ಫಲಾನುಭವಿಗಳಿದ್ದರು. ಹಾಗೆಯೇ ಬೀದರ್‍ನಲ್ಲೂ ಅನರ್ಹ ಫಲಾನುಭವಿಗಳಿಗೆ ಮನೆಗಳ ಹಂಚಿಕೆಯಾಗುತ್ತಿದೆ. ಎಲ್ಲವೂ ಪಾರದರ್ಶಕವಾಗಿ ರುವಂತೆ ವ್ಯವಸ್ಥೆ ತರಲಾಗುವುದು ಎಂದರು.
ನಾನು ಮನೆ ಹಂಚಿಕೆಗಳ ವಿಚಾರದಲ್ಲಿ ತಪ್ಪು ಮಾಡಬೇಡಿ ಎಂದಷ್ಟೇ ಹೇಳಿದ್ದೇನೆ ಎಂದರು. ಬಹಳಷ್ಟು ಮಂದಿ ಪಿಡಿಒಗಳಲ್ಲಿ ಪಾರದರ್ಶಕತೆ ಇರುವುದಿಲ್ಲ. ಹೀಗಾಗಿ ಆ ಹೇಳಿಕೆಯನ್ನು ನೀಡಿದ್ದೇ ಹೊರತು ಎಲ್ಲರನ್ನು ಕುರಿತು ಹೇಳಿಲ್ಲ ಎಂದು ಸ್ಪಷ್ಟಪಡಿಸಿ ದರು. ಅರ್ಹ ಫಲಾನುಭವಿಗಳನ್ನು ಇಲಾಖೆ ವತಿಯಿಂದ ಆಯ್ಕೆ ಮಾಡಿದ್ದೇವೆ. 8 ಲಕ್ಷಕ್ಕೂ ಹೆಚ್ಚು ಫಲಾನುಭವಿಗಳ ಪೈಕಿ ಅರ್ಹ ಫಲಾನುಭವಿಗಳನ್ನು ಆಯ್ಕೆ ಮಾಡಲಾಗಿದೆ ಎಂದರು.