Tuesday, 27th July 2021

ಭ್ರಷ್ಟರ ಲಗಾಮ್‌ ಹಿಡಿಯಲು ರೆಡಿಯಾದ ರಿಯಲ್‌ ಸ್ಟಾರ್‌

ರಿಯಲ್ ಸ್ಟಾರ್ ಉಪೇಂದ್ರ ಲಾಕ್‌ಡೌನ್ ಬಳಿಕ ಮತ್ತೆ ನಟನೆಗೆ ಮರಳಿದ್ದಾರೆ. ಕಬ್ಜ ಸಿನಿಮಾದಲ್ಲೂ ಬ್ಯುಸಿಯಾಗಿ ರುವ ಉಪ್ಪಿ. ಅದರ ಜತೆಗೆ ಭ್ರಷ್ಟರ ಲಗಾಮ್ ಹಿಡಿದು ಹೆಡಮುರಿ ಕಟ್ಟಲು ಸಜ್ಜಾಗಿದ್ದಾರೆ.

ಹೌದು ಉಪ್ಪಿ ಅಭಿನಯಿಸುತ್ತಿರುವ ಲಗಾಮ್ ಚಿತ್ರದ ಚಿತ್ರೀಕರಣ ಭರದಿಂದ ಸಾಗಿದೆ, ಬೆಂಗಳೂರಿನ ಸುತ್ತಮುತ್ತ ಚಿತ್ರೀಕರಣ ನಡೆಸುತ್ತಿರುವ ಚಿತ್ರತಂಡ, ಸದ್ಯ ಸಾಹಸ ದೃಶ್ಯಗಳನ್ನು ಸೆರೆಹಿಡಿಯುತ್ತಿದೆ. ಭ್ರಷ್ಟರ ಭೇಟಿಗೆ ತೆರಳುವ ಉಪ್ಪಿ, ಅಲ್ಲಿ ಅಡ್ಡ ಬರುವ ಖಳರನ್ನು ಹೆಡೆಮುರಿ ಕಟ್ಟುತ್ತಾರೆ. ಇದಕ್ಕಾಗಿ ಬಹಳ ತಯಾರಿ ಯನ್ನು ನಡೆಸಿದ್ದಾರೆ. ರವಿವರ್ಮ ಸಾಹಸ ನಿರ್ದೇಶನದಲ್ಲಿ ಅದ್ಭುತ ಸಾಹಸ ದೃಶ್ಯಗಳು ಮೂಡಿಬರುತ್ತಿವೆ. ನಿರ್ದೇಶಕ ಕೆ.ಮಾದೇಶ್ ಹಾಗೂ ಉಪೇಂದ್ರ ಕಾಂಬಿ ನೇಷನ್ ನಲ್ಲಿ ಲಗಾಮ್ ಸಿದ್ಧವಾಗುತ್ತಿದೆ. ಇಂದು ರಾಷ್ಟ್ರಾದ್ಯಂತ ಕಾಡುತ್ತಿರುವ ಭ್ರಷ್ಟ ವ್ಯವಸ್ಥೆಯ ಕುರಿತು ಚಿತ್ರದ ಕಥೆ ಹೆಣೆಯಲಾಗಿದೆ. ಈ ಚಿತ್ರ ರಾಷ್ಟ್ರಮಟ್ಟದಲ್ಲಿ ಗಮನ ಸೆಳೆಯುವುದು ಖಚಿತ.

ಹಾಗಾಗಿ ಐದು ಭಾಷೆಗಳಲ್ಲಿ ಚಿತ್ರವನ್ನು ತೆರೆಗೆ ತರಲು ಚಿಂತನೆ ನಡೆದಿದೆ ಎನ್ನುತ್ತಾರೆ ನಿರ್ದೇಶಕ ಮಾದೇಶ್. ಒಟ್ಟು 75 ದಿನಗಳ ಕಾಲ ಚಿತ್ರೀಕರಣ ನಡೆಸ ಲಿದ್ದೇವೆ. ಹರಿಪ್ರಿಯಾ- ಉಪೇಂದ್ರ ಕಾಂಬಿನೇಷನ್‌ನ ಸನ್ನಿವೇಶ ಗಳನ್ನು ಆದಷ್ಟು ಬೇಗ ಚಿತ್ರೀಕರಿಸಿಕೊಳ್ಳಲಿದ್ದೇವೆ ಎನ್ನುತ್ತಾರೆ ನಿರ್ದೇಶಕರು. ಈ ಚಿತ್ರದಲ್ಲಿ ಉಪೇಂದ್ರ ತನಿಖಾ ಪತ್ರಕರ್ತನಾಗಿ ನಟಿಸುತ್ತಿದ್ದಾರೆ. ಅನ್ಯಾಯದ ವಿರುದ್ದ ಸಮರ ಸಾರಿ, ಭ್ರಷ್ಟರ ಬೆನ್ನತ್ತಿ ಅವರನ್ನು ಮಟ್ಟ ಹಾಕುವ ಪಾತ್ರ ಉಪ್ಪಿಯದ್ದು, ಹಾಗಾಗಿ ಹಿಂದೆಂದು ನೋಡದ ಉಪೇಂದ್ರ ಅವರನ್ನು ಈ ಚಿತ್ರದಲ್ಲಿ ಕಣ್ತುಂಬಿಕೊಳ್ಳಬಹುದು ಎಂದು ಸಂತಸ ಹಂಚಿಕೊಳ್ಳುತ್ತಾರೆ ರಿಯಲ್ ಸ್ಟಾರ್.

ಉಪೇಂದ್ರ ಅವರ ಜತೆ ನಟಿಸುತ್ತಿರುವುದು ನನಗೆ ಸಂತಸ ತಂದಿದೆ. ಹಿಂದಿನಿಂದಲೂ ಉಪೇಂದ್ರ ಅವರ ಜತೆ ನಟಿಸಬೇಕೆಂಬ ಆಸೆ ನನಗಿತ್ತು. ಈ ಚಿತ್ರದ ಮೂಲಕ ಆ ಆಸೆ ಈಡೇರಿದೆ ಎಂದು ಸಂತಸ ಹಂಚಿ ಕೊಂಡರು ಹರಿಪ್ರಿಯಾ. ಮತ್ತೆ ನಿರ್ದೇಶನಕ್ಕೆ ಉಪ್ಪಿ ಉಪೇಂದ್ರ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿ ಯಾಗಿದ್ದಾರೆ, ಈ ನಡುವೆಯೇ ನಿರ್ದೇಶನಕ್ಕೂ ಮರಳುವ ಸೂಚನೆ ನೀಡಿದ್ದಾರೆ. ಸದ್ಯ ಒಳ್ಳೆಯ ಕಥೆ ಸಿಕ್ಕಿದೆ. ಆ ಕಥೆ ನನಗೆ ನಿರ್ದೇಶನಕ್ಕೆ ಸ್ಫೂರ್ತಿ ನೀಡಿದೆ.

ಇದುವರೆಗೂ ನೋಡಿರದ ಚಿತ್ರವನ್ನು ಪ್ರೇಕ್ಷಕರ ಮುಂದೆ ತರಲಿದ್ದೇನೆ. ಹೊಸ ಚಿತ್ರ ಯಾವಾಗ ಸೆಟ್ಟೇರಲಿದೆ ಎಂದು ಈಗಲೇ ಹೇಳಲಾಗುವುದಿಲ್ಲ. ಈಗ ನಾನು ಒಪ್ಪಿಕೊಂಡಿರುವ ಚಿತ್ರಗಳಲ್ಲಿ ಬ್ಯುಸಿಯಾಗಿದ್ದೇನೆ. ಈ ಚಿತ್ರಗಳು ಮುಗಿದ ಬಳಿಕ ನಿರ್ದೇಶನಕ್ಕೆ ಧುಮುಕುತ್ತೇನೆ ಎಂದರು ರಿಯಲ್ ಸ್ಟಾರ್.

Leave a Reply

Your email address will not be published. Required fields are marked *