Saturday, 16th October 2021

ಮತಾಂತರದ ವಿರುದ್ದ ಕಠಿಣ ಕ್ರಮ ಏಕಿಲ್ಲ ?

ಅಭಿಮತ

ಆದರ್ಶ್ ಶೆಟ್ಟಿ ಉಪ್ಪಿನಂಗಡಿ

adarsh.shetty207@gmail.com

ದೇಶದ ಸಾಮಾಜಿಕ ಪಿಡುಗುಗಳಲ್ಲಿ ಒಂದಾದ ಮತಾಂತರ ಪ್ರಕ್ರಿಯೆ ನಿತ್ಯ ನಿರಂತರವಾಗಿ ಮುಂದುವರಿದಿದೆ. ಕೆಲ ವರ್ಷಗಳ ಹಿಂದೆ ಮತಾಂತರದ ವಿರುದ್ಧ ಬಹುದೊಡ್ಡ ಹೋರಾಟ ನಡೆದು, ರಾಜ್ಯವ್ಯಾಪಿ ಇಂತಹ ಪ್ರಾರ್ಥನಾ ಮಂದಿರಗಳು ಪುಡಿಯಾಗಿ ರಾಷ್ಟ್ರವ್ಯಾಪಿ ಸಂಚಲನ ಉಂಟಾಗಿ ಬಂದ್, ಕರ್ಫ್ಯೂ, ಲಾಠಿ ಚಾರ್ಜ್ ಸೇರಿದಂತೆ ಹಲವರ ಬಂಧನಗಳು ನಡೆದು ಬಹುದೊಡ್ಡ ಗಲಾಟೆಯೇ ನಡೆದು ಹೋಗಿತ್ತು. ಆದರೂ ಈ ಮತಾಂತರ ಎಂಬುವುದಕ್ಕೆ ತಾರ್ಕಿಕ ಅಂತ್ಯವಿಲ್ಲದೆ ದೇಶವ್ಯಾಪಿ ಅನಽಕೃತ ಪ್ರಾರ್ಥನಾ ಮಂದಿರ, ಆರಾಧನಾ ಕೇಂದ್ರಗಳಲ್ಲಿ ಸದ್ದಿಲ್ಲದೆ ಬಹು ದೊಡ್ಡ ಮಟ್ಟದಲ್ಲಿ ನಡೆಯುತ್ತಿದೆ.

ಮತಾಂತರ ಎಂಬುದು ವಿವಿಧ ಸ್ವರೂಪಗಳಲ್ಲಿ ನಡೆದುಹೋಗುತ್ತದೆ. ಅನ್ಯಧರ್ಮದ ಆಚರಣೆ, ಪದ್ಧತಿ, ದೈವ ದೇವರುಗಳನ್ನು ನಿಂದಿಸುವ ಮೂಲಕ, ಹಣ ಅಂತಸ್ತಿನ ಆಮಿಷ ಒಡ್ಡುವ ಮೂಲಕ ವಿವಿಧ ತಮ್ಮ ಧರ್ಮದ ಮೂಢನಂಬಿಕೆಗಳನ್ನು ಅಮಾಯಕರ ತಲೆಗೆ ವರ್ಣರಂಜಿತವಾಗಿ ತುಂಬಿಸಿ ಮರುಳು ಮಾಡಿ ಸ್ವ ಧರ್ಮಕ್ಕೆ ಕರೆತರುವ ಕೆಲ ಕ್ರೈಸ್ತ ಮಿಷನರಿಗಳು ಒಂದೆಡೆಯಾದರೆ, ಶೋಷಣೆ, ಅಸ್ಪೃಶ್ಯತೆ, ಬಡತನ, ಸಮಾಜದಲ್ಲಿ ಕೀಳು ಮನೋಭಾವನೆಯಿಂದ, ತಾತ್ಸಾರ ದಿಂದ ಕಾಣುವ ಮಾನಸಿಕತೆ, ಕಿತ್ತು ತಿನ್ನುವ ಬಡತನ, ವಾಸಕ್ಕೆ ಸೂರಿಲ್ಲ, ಮೂಲಭೂತ ಸೌಕರ್ಯಗಳಿಲ್ಲ, ಗಂಡನ ವಿಪರೀತ ಕುಡಿತ ಸೇರಿದಂತೆ ಇನ್ನಿತರ ಕಷ್ಟ-ಕಾರ್ಪಣ್ಯಗಳಿಗೆ ಬೇಸತ್ತು ಅನ್ಯ ಧರ್ಮದ ಕಡೆಗೆ ವಾಲಿದ ನೂರಾರು ಬಡಕುಟುಂಬಗಳ ನಿದರ್ಶನಗಳು ನಮ್ಮ ಕಣ್ಣ ಮುಂದಿವೆ.

ಇದೀಗ ಎರಡು ವಿಚಾರಗಳಲ್ಲಿ ಮತ್ತೆ ಮತಾಂತರದ ಕಾವು ರಾಜ್ಯದಲ್ಲಿ ಬಿಸಿ ಏರತೊಡಗಿದೆ. ಇತ್ತೀಚೆಗೆ ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ನಕ್ರೆ ಎಂಬ ಗ್ರಾಮದ ಪ್ರಾರ್ಥನಾ ಮಂದಿರ ಒಂದರಲ್ಲಿ ಸಾಮೂಹಿಕ ಪ್ರಾರ್ಥನೆಯ ಹೆಸರಿನಲ್ಲಿ ದೊಡ್ಡಮಟ್ಟದಲ್ಲಿ ಮತಾಂತರ ಪ್ರಕ್ರಿಯೆ ನಡೆಯುತ್ತಿರುವುದು ಹಿಂಜಾವೇ ಸಂಘಟನೆಯ ದಾಳಿ ವೇಳೆ ಬೆಳಕಿಗೆ ಬಂದಿದೆ.

ವಿಧಾನಮಂಡಲ ಅಧಿವೇಶನದಲ್ಲೂ ಕೂಡ ಮತಾಂತರದ ಬಗ್ಗೆ ಹೊಸದುರ್ಗ ಶಾಸಕ ಗೂಳಿಹಟ್ಟಿ ಶೇಖರ್ ಪ್ರಸ್ತಾಪಿಸಿದ್ದು, ಕ್ರಿಶ್ಚಿಯನ್ ಮಿಷನರಿಗಳು ಅಮಾಯಕರನ್ನು ವಿವಿಧ ಆಮಿಷಗಳನ್ನೊಡ್ಡಿ ಮತಾಂತರ ಪ್ರಕ್ರಿಯೆ ನಡೆಸುತ್ತಿದ್ದು, ಹೊಸದುರ್ಗ ಕ್ಷೇತ್ರದಲ್ಲಿ ಸುಮಾರು 18 ರಿಂದ 20 ಸಾವಿರ ಮಂದಿಯನ್ನು ಮತಾಂತರ ನಡೆಸಲಾಗಿದ್ದು, ಇದರಲ್ಲಿ ನನ್ನ ತಾಯಿಯು ಕೂಡ ಮತಾಂತರಗೊಂಡಿದ್ದಾರೆ ಎಂಬ ಅಸಹಾಯಕತೆಯನ್ನು ಒಬ್ಬ ಜನಪ್ರತಿನಿಧಿ ವ್ಯಕ್ತಪಡಿಸುತ್ತಾ ರೆಂದರೆ ಇಂತಹದೊಂದು ಆತಂಕಕಾರಿ ವಿದ್ಯಮಾನ ಸಮಾಜದ ನೆತ್ತಿಯಮೇಲೆ ತೂಗುತ್ತಿರುವುದು ಸ್ಪಷ್ಟಗೊಂಡಿದೆ.

ಇದಕ್ಕೆ ಪ್ರತಿಕ್ರಿಯಿಸಿದ ಸರಕಾರದ ಪ್ರತಿನಿಽಗಳು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವ ಹೇಳಿಕೆಯನ್ನು ಸದನದಲ್ಲಿ ನೀಡಿದ್ದು ಬಿಟ್ಟರೆ ಇದಕ್ಕೊಂದು ಕಠಿಣ ಕಾನೂನಿಗೆ ಯಾವ ಶಾಸಕರು ಕೂಡ ಈ ಸಂದರ್ಭದಲ್ಲಿ ಆಗ್ರಹಿಸಿಲ್ಲ. ಒಬ್ಬ ವ್ಯಕ್ತಿ ಮತಾಂತರಗೊಂಡರೆ ಆತ ದೇಶಾಂತರಗೊಂಡಂತೆಯೇ ಸರಿ. ಆತ ಸಮಾಜದ ಮೊದಲ ಶತ್ರುವಾಗಿ ರೂಪುಗೊಳ್ಳುತ್ತಾನೆ ಎಂಬ ಅಂಶವನ್ನು ಜನಪ್ರತಿನಿಧಿಗಳು ಗಂಭೀರವಾಗಿ ಚಿಂತಿಸಬೇಕು.

Leave a Reply

Your email address will not be published. Required fields are marked *