ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Horoscope Today November 12th: ದಿನ ಭವಿಷ್ಯ; ಆಶ್ಲೇಷಾ ನಕ್ಷತ್ರದ ಅಧಿಪತಿ ಬುಧನಿಂದ ಈ ರಾಶಿಗೆ ಎಲ್ಲ ಕ್ಷೇತ್ರದಲ್ಲೂ ಯಶಸ್ಸು!

ನಿತ್ಯ ಭವಿಷ್ಯ ನವೆಂಬರ್‌ 12, 2025: ಇಂದು ವಿಶ್ವವಸು ನಾಮ ಸಂವತ್ಸರದ ದಕ್ಷಿಣಾಯನ ವರ್ಷ ಶರದೃತು ಕಾರ್ತಿಕ ಮಾಸೆ ಕೃಷ್ಣ ಪಕ್ಷ ಅಷ್ಟಮಿ ತಿಥಿ, ಆಶ್ಲೇಷಾ ನಕ್ಷತ್ರದ ನವೆಂಬರ್ 12 ನೇ ತಾರೀಖಿನ ಬುಧವಾರದ ದಿನದ ಭವಿಷ್ಯದ ಬಗ್ಗೆ ಖ್ಯಾತ ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ಅವರು ತಿಳಿಸಿದ ಇಂದಿನ ರಾಶಿ ಭವಿಷ್ಯ ಹೀಗಿದೆ.

ಬುಧವಾರದಂದು ನಿಮ್ಮ ರಾಶಿ ಭವಿಷ್ಯ ಹೇಗಿದೆ?

ದಿನ ಭವಿಷ್ಯ -

Profile
Pushpa Kumari Nov 12, 2025 6:00 AM

ಬೆಂಗಳೂರು: ಇಂದು ವಿಶ್ವವಸು ನಾಮ ಸಂವತ್ಸರದ ದಕ್ಷಿಣಾ ಯನ ಶರದೃತು ಕಾರ್ತಿಕ ಮಾಸೆ ಕೃಷ್ಣ ಪಕ್ಷದ ಅಷ್ಟಮಿ ತಿಥಿ, ಆಶ್ಲೇಷಾ ನಕ್ಷತ್ರದ ಈ ದಿನ ಮೇಷ, ವೃಷಭ, ಮಿಥುನ, ಕರ್ಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ ಮತ್ತು ಮೀನ ರಾಶಿ ಭವಿಷ್ಯದ ಬಗ್ಗೆ ಖ್ಯಾತ ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ಅವರು ತಿಳಿಸಿದಂತೆ ನಿಮ್ಮ ಭವಿಷ್ಯ ಹೇಗಿದೆ ಎಂದು ತಿಳಿಯಿರಿ.

ಮೇಷ ರಾಶಿ: ಆಶ್ಲೇಷಾ ನಕ್ಷತ್ರದ ಅಧಿಪತಿ ಬುಧ ಆಗಿದ್ದಾನೆ.‌ ಇದರಿಂದ ಎಲ್ಲ ರಾಶಿಗೂ ಪರಿಣಾಮ ಬೀರುವ ಸಾಧ್ಯತೆ ಇದೆ. ಮೇಷ ರಾಶಿಯವರಿಗೆ ಆಸ್ತಿ ಪಾಸ್ತಿ ವಿಚಾರವಾಗಿ ಹಾಗೂ ತಾಯಿಯ ಆರೋಗ್ಯದ ಬಗ್ಗೆ ಹೆಚ್ಚಿನ ಗಮನ ವಹಿಸಬೇಕಾಗುತ್ತದೆ‌. ಎಲ್ಲರೊಂದಿಗೆ ಹುಷಾರಾಗಿ ವ್ಯವಹಾರವನ್ನು ನೀವು ಮಾಡಬೇಕಾಗುತ್ತದೆ. ಟ್ಯಾಕ್ಸ್ ,ಕೋರ್ಟ್ ವ್ಯವಹಾರ ಇತ್ಯಾದಿ ಮಾಡುವವರು ಜಾಗೃತರಾಗಿ ಇರಬೇಕು.

ವೃಷಭ ರಾಶಿ: ಇಂದು ವೃಷಭ ರಾಶಿ ಅವರಿಗೆ ಅತ್ಯುತ್ತಮವಾದ ದಿನವಾಗಿದೆ. ಸೋಷಿಯಲ್ ಮೀಡಿಯಾ, ಟಿವಿ ಇತ್ಯಾದಿಯಲ್ಲಿ ಕೆಲಸ ಮಾಡುವವರಿಗೆ ಉತ್ತಮವಾದ ದಿನವಾಗಿದೆ. ಕಾರ್ಯ ಕ್ಷೇತ್ರದಲ್ಲಿ ಕೂಡ ಅತೀ ಹೆಚ್ಚಿನ ಯಶಸ್ಸು ನಿಮಗೆ ಸಿಗಲಿದೆ‌

‌ಮಿಥುನ ರಾಶಿ: ಮಿಥುನ ರಾಶಿಯಲ್ಲಿ ಇರುವವರು ಸಂಸಾರದ ಬಗ್ಗೆ ಹೆಚ್ಚಿನ ಒತ್ತು ನೀಡ ಬೇಕಾ ಗುತ್ತದೆ. ಕೆಲವೊಮ್ಮೆ ಅತೀ ಬೇಕಾದವರಿಂದಲೇ ನಿಮಗೆ ಅನುಮಾನಗಳು ಮೂಡಬಹುದು. ಹಾಗೆಯೇ ವೈಮನಸ್ಸು ಬರಬಹುದು.‌ ಆದರೆ ಬಹಳಷ್ಟು ವಿನಯತೆಯಿಂದ ನೀವು ಇದನ್ನೆಲ್ಲ ಸರಿಪಡಿಸಬೇಕಾಗುತ್ತದೆ.

ಕಟಕ ರಾಶಿ: ಕಟಕ ರಾಶಿ ಅವರಿಗೆ ಉತ್ತಮವಾದ ದಿನವಾಗಿದೆ. ನಿಮ್ಮ ಬುದ್ದಿ ಸ್ವಲ್ಪ ತಿಕ್ಷ್ಯವಾಗಿ ಇರುತ್ತದೆ. ಆದರೂ ಕೂಡ ಆಗುವಂತಹ ಕೆಟ್ಟ ಪರಿಣಾಮಗಳನ್ನು ನೀವು ತಡೆದು ನಿಲ್ಲಿಸಬೇಕಾಗುತ್ತದೆ

ಇದನ್ನು ಓದಿ: Vastu Tips: ಯಾವ ದಿಕ್ಕಿಗೆ ನಿಂತು ಅಡುಗೆ ಮಾಡಿದರೆ ಒಳ್ಳೆಯದು? ನಿಮ್ಮ ಗೊಂದಲಕ್ಕೆ ಇಲ್ಲಿದೆ ಉತ್ತರ

ಸಿಂಹ ರಾಶಿ: ಸಿಂಹ ರಾಶಿ ಅವರಿಗೆ ಕಷ್ಟಕರವಾದ ದಿನವಾಗಿದೆ. ಮುಖ್ಯವಾದ ಕೆಲಸ ಕಾರ್ಯಗಳು ಹಾಗೂ ಮೀಟೀಂಗ್ ಯಾವು ದರಲ್ಲೂ ಪಾಲ್ಗೊಳ್ಳಬೇಡಿ.‌ ಎಲ್ಲ ಕೆಲಸ ಕಾರ್ಯದಲ್ಲೂ ಕೂಡ ಜಾಗೃತರಾಗಿ ಇರಬೇಕು.

ಕನ್ಯಾ ರಾಶಿ: ಕನ್ಯಾ ರಾಶಿ ಅವರಿಗೆ ಅತ್ಯುತ್ತಮ ವಾದ ದಿನವಾಗಿದೆ. ಮನಸ್ಸಿಗೆ ನೆಮ್ಮದಿ ಇದ್ದು ಇಷ್ಟಾರ್ಥ ಸಿದ್ದಿ ಯಾಗಲಿದೆ. ಮಿತ್ರರಿಂದ ಮನಸ್ಸಿಗೆ ಅತೀ ಹೆಚ್ಚಿನ ಖುಷಿ ಸಿಗಲಿದೆ.

ತುಲಾ ರಾಶಿ: ತುಲಾ ರಾಶಿ ಅವರಿಗೆ ಕಾರ್ಯ ಕ್ಷೇತ್ರದ ಜವಾಬ್ದಾರಿ ಹೆಚ್ಚಾಗಿ ಇರುತ್ತದೆ. ಇತರರಿಂದ ನಿಮಗೆ ಟೀಕೆಗಳನ್ನು ಕೇಳುವ ಸಂಭವ ಬರಬಹುದು.‌ ಹಾಗಾಗಿ ಸರಿಯಾದ ರೀತಿಯಲ್ಲಿ ಕೆಲಸ ಕಾರ್ಯಗಳನ್ನು ನಿಭಾಯಿಸಬೇಕಾಗುತ್ತದೆ.

ವೃಶ್ಚಿಕ ರಾಶಿ: ವೃಶ್ಚಿಕ ರಾಶಿ ಅವರಿಗೆ ಭಾಗ್ಯೋದಯವಾದ ದಿನ ವಾಗಿದ್ದು ಮನಸ್ಸಿಗೆ ನೆಮ್ಮದಿ ಪ್ರಾಪ್ತಿ ಯಾಗಲಿದೆ. ಆದರೆ ಯಾವುದೇ ವಿಚಾರದಲ್ಲಿ ಹೆಚ್ಚು ಯೋಚಿಸಿ ಆತಂಕ ಪಡಬಾರದು.

ಧನಸ್ಸು ರಾಶಿ: ಧನಸ್ಸು ರಾಶಿ ಅವರಿಗೆ ಕ್ಲಿಷ್ಟಕರವಾದ ದಿನ ವಾಗಿದೆ. ಪ್ರೀತಿ ಪಾತ್ರರಿಂದ ಯಾವುದೇ ಸಹಕಾರ ಸಿಗುವುದಿಲ್ಲ.‌ ಆದರೆ ಎರಡು ದಿನಗಳ ಬಳಿಕ‌ ಎಲ್ಲವೂ ಬದಲಾಗಲಿದೆ.

ಮಕರ ರಾಶಿ: ಮಕರ ರಾಶಿ ಅವರಿಗೆ ಉತ್ತಮವಾದ ದಿನ ವಾಗಿದೆ. ಎಲ್ಲ ರೀತಿಯಿಂದಲೂ ಸಹಕಾರ ಸೌಹಾರ್ದ ಪ್ರಾಪ್ತಿಯಾಗುತ್ತದೆ.‌ ದಾಂಪತ್ಯದಲ್ಲಿ ನೆಮ್ಮದಿ ಜೊತೆಗೆ ಮಿತ್ರತ್ವದಲ್ಲಿ ಸಂತೋಷ ಸಿಗುತ್ತದೆ

ಕುಂಭರಾಶಿ: ಕುಂಭ ರಾಶಿ ಅವರಿಗೆ ಉತ್ತಮವಾದ ದಿನವಾಗಿದೆ. ಸಾಮಾಜಿಕ ವಿಚಾರದಲ್ಲಿ ನೆಮ್ಮದಿ ಜಯ ಸಿಗುತ್ತದೆ. ನಿಮ್ಮ ವಿರೋಧಿ ಯಾರೇ ಇದ್ದರೂ ನಿಮಗೆ ಜಯ ದೊರಕಲಿದೆ. ಆರೋಗ್ಯದಲ್ಲೂ ಸುಧಾರಣೆ ಕಂಡು ಬರುತ್ತದೆ.

ಮೀನ ರಾಶಿ: ಮೀನ ರಾಶಿ ಅವರಿಗೆ ಸ್ವಲ್ಪ ಕ್ಷಿಷ್ಟಕರವಾದ ದಿನವಾಗಿದೆ. ನಿಮ್ಮ ಬುದ್ದಿ ಶಕ್ತಿಯನ್ನು ಸರಿಯಾದ ರೀತಿಯಲ್ಲಿ ಉಪಯೋಗಿಸಿಕೊಂಡು ಮುನ್ನಡದರೆ ಯಾವುದೇ ತೊಂದರೆ ಆಗುವುದಿಲ್ಲ