Tuesday, 26th October 2021

ಬಲೆಗೆ ಬಿದ್ದಿದ್ದ ಗರುಡ ರಕ್ಷಣೆ

ತುಮಕೂರು: ನಗರದ ಡಿಸಿ ಕಚೇರಿ ಒಳಗೆ ಇರುವ ಹಳ್ಳಿ ಮರದಲ್ಲಿ ಮೂರುದಿನಗಳಿಂದ ಬಲೆಗೆ ಸಿಲುಕಿ ನರಳುತ್ತಿದ ಗರುಡ ಪಕ್ಷಿ ಯನ್ನು ಕಂಡು ಪಶುವೈದ್ಯ ಡಾಕ್ಟರ್ ವೆಂಕಟೇಶ್ ಬಾಬುರೆಡ್ಡಿ ಅವರು ವಾರಂಗಲ್ ವನ್ಯಜೀವಿ ಜಾಗೃತ ಸಂಸ್ಥೆಯ ದಿಲೀಪ ಗೆ ಕರೆ ಮಾಡಿ ವಿಷಯ ತಿಳಿಸಿದರು.

ದಿಲೀಪ್ ಮತ್ತು ಗುರುಕಿರಣ್ ಗಿರೀಶ್ ಸ್ಥಳಕ್ಕೆ ಬಂದು ಪರಿಶೀಲಿಸಿ 40 ಅಡಿ ಎತ್ತರದಲ್ಲಿ ಬಲೆಗೆ ಸಿಲುಕಿದ ಪಕ್ಷಿಯನ್ನು ಉರಗ ತಜ್ಞರಾದ ದಿಲೀಪ್ ಅಗ್ನಿಶಾಮಕ ಸಿಬ್ಬಂದಿಗಳಿಗೆ ಕರೆ ಮಾಡುತ್ತಾರೆ ಅಗ್ನಿಶಾಮಕ ದಳ ಅವರು ಸ್ಥಳಕ್ಕೆ ಬಂದು ಬಲೆಗೆ ಸಿಲುಕಿದ್ದ ಪಕ್ಷಿಯನ್ನು ರೆಸ್ಕ್ಯೂ ಮಾಡಲು ಕೈಜೋಡಿಸುತ್ತಾರೆ.

ಸತತ ಎರಡು ಗಂಟೆಗಳ ಕಾಲ ಕಾರ್ಯಾಚರಣೆ ಮಾಡಿ ಪಕ್ಷಿಯನ್ನು ರಕ್ಷಣೆ ರಕ್ಷಣೆ ಮಾಡಿ ಅದಕ್ಕೆ ಚಿಕಿತ್ಸೆ ನೀಡಿ ಕಾಡಿಗೆ ರವಾನಿಸಿದರು. ತುಮಕೂರು ಸುತ್ತಮುತ್ತ ಹಾವು ರೋಡ್ ಆಕ್ಸಿಡೆಂಟ್ ನಾಯಿ ಕೋತಿ ಪಕ್ಷಿ ಇಂತಹ ವನ್ಯಜೀವಿಗಳು ತೊಂದರೆಯಲ್ಲಿದ್ದಾಗ ಈ ಸಂಸ್ಥೆಗೆ ಕರೆ ಮಾಡಬಹುದು ಕರೆ ಮಾಡಬೇಕಾದ ಸಂಖ್ಯೆ 9916790692.

Leave a Reply

Your email address will not be published. Required fields are marked *