Tuesday, 21st March 2023

ಭೀಮಾತೀರದ ಶೂಟೌಟ್: ರೌಡಿ ಶೀಟರ್ ಬೈರಗೊಂಡ ಕಾರು ಚಾಲಕ ನಿಧನ

ವಿಜಯಪುರ: ಕನ್ನಾಳ ಕ್ರಾಸ್‌ ನಲ್ಲಿ ವಿಜಯಪುರ-ಸೊಲ್ಲಾಪುರ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದ ಭೀಮಾ ತೀರದ ಶೂಟೌಟ್ ಪ್ರಕರಣದಲ್ಲಿ ಗುಂಡೇಟಿನಿಂದ ಹಾಗೂ ಟಿಪ್ಪರ್ ಡಿಕ್ಕಿ ಹೊಡೆದು ಕಾಲು ಮುರಿದುಹೋಗಿದ್ದ ಕಾಂಗ್ರೆಸ್ ಮುಖಂಡ, ರೌಡಿ ಶೀಟರ್ ಮಹಾದೇವ ಸಾಹುಕಾರ ಬೈರಗೊಂಡ ಅವರ ಕಾರು ಚಾಲಕ ಲಕ್ಷ್ಮಣ ದಿಂಡೋರೆ(26)ಮಂಗಳವಾರ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.

ಮೂರು ಗುಂಡೇಟಿನಿಂದ ತೀವ್ರವಾಗಿ ಗಾಯಗೊಂಡಿರುವ ಮಹಾದೇವ ಸಾಹುಕಾರ ಬೈರಗೊಂಡ ಜೀವಪಾಯದಿಂದ ಪಾರಾ ಗಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ. ಶೂಟೌಟ್ ನಡೆದ ಸ್ಥಳಕ್ಕೆ ಬೆಳಗಾವಿಯಿಂದ ಎಫ್‌ಎಸ್‌ಎಲ್ ಮೂವರ ತಂಡ ಮಂಗಳವಾರ ಭೇಟಿ ನೀಡಿ ಸಾಕ್ಷಧಾರಗಳನ್ನು ಸಂಗ್ರಹಿಸಿದೆ.

ಸ್ಥಳದಲ್ಲಿ ಪೆಟ್ರೋಲ್ ಬಾಂಬ್, ನಂಬರ್ ಇಲ್ಲದ ಏಳು ಬೈಕುಗಳು ಪತ್ತೆಯಾಗಿವೆ. ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅನುಪಮ್ ಅಗರವಾಲ್ ಭೇಟಿ ನೀಡಿ ಪರಿಶೀಲಿಸುತ್ತಿದ್ದಾರೆ. ಶೂಟೌಟ್ ಪ್ರಕರಣದಲ್ಲಿ ಸೋಮವಾರ ಮಹಾದೇವ ಬೈರಗೊಂಡ ರ ಮ್ಯಾನೇಜರ್ ಬಾಬುರಾಯ ಸ್ಥಳದಲ್ಲೇ ಸಾವನಪ್ಪಿದ್ದರು.

 

error: Content is protected !!