Friday, 30th September 2022

ಕೋವಿಡ್ ಎಮರ್ಜೆನ್ಸಿ: ರಾಜಸ್ಥಾನ ರಾಯಲ್ಸ್‌’ನಿಂದ 7.5 ಕೋಟಿ ರೂ. ನೆರವು

ನವದೆಹಲಿ: ಐಪಿಎಲ್‌ನ ರಾಜಸ್ಥಾನ ರಾಯಲ್ಸ್ ತಂಡ‌ ಬರೋಬ್ಬರಿ 7.5 ಕೋಟಿ ರೂ.ಗಳ ಕೊಡುಗೆಯನ್ನ ಕೋವಿಡ್-19 ವಿರುದ್ಧದ ಹೋರಾಟಕ್ಕೆ ನೀಡುವ ಮೂಲಕ ಬೆಂಬಲ ಘೋಷಿಸಿದೆ.

ರಾಜಸ್ಥಾನ್ ರಾಯಲ್ಸ್ ಆಟಗಾರರು, ಮ್ಯಾನೇಜ್ ಮೆಂಟ್ ಮತ್ತು ಮಾಲೀಕರು ಎಲ್ಲರೂ ಈ ಉದ್ದೇಶಕ್ಕೆ ಕೊಡುಗೆ ನೀಡುತ್ತಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಇನ್ನು ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಫ್ರಾಂಚೈಸಿ ರಾಜಸ್ಥಾನ್ ರಾಯಲ್ಸ್ ಗುರುವಾರ ಕೋವಿಡ್-19 ಹೋರಾಟಕ್ಕೆ ಸಹಾಯ ಮಾಡಲು 7.5 ಕೋಟಿ ರೂ.ಗಳನ್ನ ಕೊಡುಗೆ ನೀಡುತ್ತಿದ್ದೇವೆ ಎಂದು ಘೋಷಿಸಿದೆ.

‘ಕೋವಿಡ್-19 ವೈರಸ್ ನ ಉಲ್ಬಣದಿಂದ ಪ್ರಭಾವಿತರಾದ ಭಾರತದ ಜನರಿಗೆ ತಕ್ಷಣದ ಬೆಂಬಲಕ್ಕೆ ಸಹಾಯ ಮಾಡಲು ಕೋವಿಡ್ ರಿಲೀಫ್ ಫಂಡ್‌ಗೆ 7.5 ಕೋಟಿ ರೂ.ಗಳ (1 ಮೀ.ಗಿಂತ ಹೆಚ್ಚು) ಕೊಡುಗೆಯನ್ನ ಘೋಷಿ ಸಲು ರಾಜಸ್ಥಾನ ರಾಯಲ್ಸ್ ಸಂತೋಷ ಪಡುತ್ತದೆ’ ಎಂದು ರಾಯಲ್ಸ್ ಅಧಿಕೃತ ಹೇಳಿಕೆಯಲ್ಲಿ ತಿಳಿಸಿದೆ.

ರಾಯಲ್ಸ್ ತಂಡದ ಲೋಕೋಪಕಾರಿ ಅಂಗವಾದ ರಾಜಸ್ಥಾನ್ ರಾಯಲ್ಸ್ ಫೌಂಡೇಶನ್ ಮತ್ತು ಬ್ರಿಟಿಷ್ ಏಷ್ಯನ್ ಟ್ರಸ್ಟ್ ಮೂಲಕ ಕೊಡುಗೆ ನೀಡಲಿದೆ.