Sunday, 25th September 2022

ರಾಷ್ಟ್ರಧ್ವಜವನ್ನು ಆರ್ ಎಸ್ ಎಸ್ ನವರು ಒಪ್ಪಲ್ಲ

ಮಧುಗಿರಿ : ದೇಶದ ಹಿತ ಹಾಗೂ ರಾಷ್ಟ್ರವನ್ನು ಆರ್ ಎಸ್ ಎಸ್ ನವರು ಎಂದಿಗೂ ಒಪ್ಪಲ್ಲ ಎಂದು ಮಾಜಿ ಶಾಸಕ ಕೆ.ಎನ್.ರಾಜಣ್ಣ ಟೀಕಿಸಿದರು.

ತಾಲೂಕಿನ ದೊಡ್ಡೇರಿಯಿಂದ ಪಟ್ಟಣದ ಮಾಲೀಮರಿಯಪ್ಪ ರಂಗ ಮಂದಿರದವರೆಗೂ ೭೫ ನೇ ಅಮೃತ ಮಹೋತ್ಸವದ ಅಂಗವಾಗಿ ನಡೆದ ೧೮ ಕಿ.ಮೀ ಪಾದಯಾತ್ರೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ದೇಶಕ್ಕೆ ಸ್ವತಂತ್ರ ತಂದು ಕೊಡಲು ಕಾಂಗ್ರೆಸ್‌ನ ಕೊಡುಗೆ ಏನೂ ಎಂಬುದನ್ನು ಇಂದಿನ ಪೀಳಿಗೆಗೆ ಮನವರಿಗೆ ಮಾಡಿಕೊಡಲು ಕಾಂಗ್ರೆಸ್ ಈ ಪಾದಯಾತ್ರೆಯನ್ನು ಮಾಡುತ್ತಿದೆ. ಸ್ವತಂತ್ರಕ್ಕಾಗಿ ನಡೆದ ತ್ಯಾಗ ಬಲಿದಾನದಲ್ಲಿ ಹೆಚ್ಚು ನಷ್ಟವನ್ನು ಅನುಭವಿಸಿದ್ದು ಕಾಂಗ್ರೆಸ್ ಇದನ್ನು ಯುವಕರು ಅರ್ಥ ಮಾಡಿ ಕೊಳ್ಳಬೇಕು. ಸ್ವತಂತ್ರ ಬಂದು ೭೫ ವರ್ಷ ವಾದರೂ ತಳ ಸಮುದಾಯಗಳಿಗೆ ನ್ಯಾಯ ಯುತವಾದ ಸಮಾನತೆ ಸಿಕ್ಕಿಲ್ಲ ಹಿಂದಿನ ಸ್ವತಂತ್ರ ಹೋರಾಟದಲ್ಲಿ ಭಾಗವಹಿಸಲ್ಲ ಎಂದವರು ಈಗ ದೇಶವನ್ನು ಆಳುತ್ತಿದ್ದಾರೆ.

ರಾಷ್ಟ್ರಧ್ವಜ ಹಾರಿಸದ ಆರ್.ಎಸ್.ಎಸ್ – ದೇಶದ ಇತಿಹಾಸದಲ್ಲಿ ಆರ್ ಎಸ್ ಎಸ್ ಎಂದಿಗೂ ತನ್ನ ಕಚೇರಿಯಲ್ಲಿ ರಾಷ್ಟ್ರಧ್ವ ಜವನ್ನು ಹಾರಿಸಿಲ್ಲ. ಇಂದು ಮಾತ್ರ ಅಮೃತ ಮಹೋತ್ಸವ ಎಂಬ ನೆಪಕ್ಕಾಗಿ ಹಾರಿಸಿದ್ದು ದೇಶದ ಭಾವೈಕ್ಯತೆಗೆ ಮಾರವಾಗಿದ್ದು ರಾಷ್ಟ್ರ ಧ್ವಜಕ್ಕೆ ಅವಮಾನ ಮಾಡುತ್ತಿದ್ದಾರೆ . ಎಂದು ಆರೋಪಿಸಿದರು.

ರಸ್ತೆಯಲ್ಲಿ ಗುಂಡಿಗಳು ಇರಲಿಲ್ಲ : ನಾನು ಶಾಸಕನಾಗಿದ್ದ ಅವಧಿಯಲ್ಲಿ ಎಲ್ಲೂ ರಸ್ತೆಯಲ್ಲಿ ಗುಂಡಿಗಳು ಇರಲಿಲ್ಲ. ಇಂದು ಗುಂಡಿಗಳು ಇಲ್ಲದ ರಸ್ತೆಗಳಿಲ್ಲ ತಾಲೂಕಿನ ಕಚೇರಿಯಲ್ಲಿ ಆದಾಯ ಪ್ರಮಾಣ ಪತ್ರ ಮನೆ ಇತರೆ ಮಾಶಾಸನಗಳಿಗಾಗಿ ಜನರು ಅಲೆದಾಡುತ್ತಿದ್ದು ನನ್ನ ಅವಧಿಯಲ್ಲಿ ಈ ಸಮಸ್ಯೆ ಇರಲಿಲ್ಲ.

ಶ್ರಮಿಕರ ನೋವಿಗೆ ಸ್ಪಂದನೆಯಿಲ್ಲ : ದಿನ ಬಳಕೆ ವಸ್ತಗಳು ಬಡವರಿಗೆ ಸಿಗುತ್ತಿಲ್ಲ. ಇಂತಹ ಸರಕಾರಗಳು ನಿಮಗೆ ಬೇಕಾ ಎಂದು ಪ್ರಶ್ನಿಸಿದ ರಾಜಣ್ಣ ಜನಪರವಾದ ಜನಪ್ರತಿನಿಧಿಗಳನ್ನು ಜನತೆಯೇ ಆರಿಸಿಕೊಳ್ಳಬೇಕು. ಹಿಂದು – ಮುಸ್ಲಿಂ ಇಲ್ಲದೆ ದೇಶವಿಲ್ಲ. ಮತಕ್ಕಾಗಿ ಧರ್ಮವನ್ನು ಟೀಕಿಸುವವರ ಬಗ್ಗೆ ಎಚ್ಚರದಿಂದ ಇರಬೇಕು ಎಂದು ಪರೋಕ್ಷವಾಗಿ ಬಿಜೆಪಿ ಸರ್ಕಾರದ ಆಡಳಿತವನ್ನು ಟೀಕಿಸಿದರು .

೨೦೨೩ ಚುನಾವಣೆಯೇ ಕೊನೆ : ನನ್ನ ೫೦ ವರ್ಷ ರಾಜಕೀಯ ಶಕ್ತಿಯನ್ನು ನಂಬಿದವರ ಉದ್ಧಾರಕ್ಕಾಗಿ ಬಳಸಿದ್ದು ಸ್ವಾರ್ಥ ಸಾಧನೆ ಮಾಡಿಲ್ಲ. ನನ್ನ ಬೆಳವಣಿಗೆಗೆ ಕಾರಣರಾದವರ ಋಣ ನನ್ನ ಮೇಲಿದ್ದು, ಅವರಿಗೆ ಸಾಧ್ಯವಾದಷ್ಟು ಸಹಾಯ ಮಾಡಿ ದ್ದೇನೆ. ಉಳಿದಂತೆ ಮತ್ತಷ್ಟೂ ಅಭಿವೃದ್ಧಿ ಪರ್ವಕ್ಕೆ ಇದೊಂದು ಬಾರಿ ಮಾತ್ರ ಚುನಾವಣೆಯಲ್ಲಿ ನಿಲ್ಲಲಿದ್ದು ಆಶೀರ್ವಾದ ಮಾಡಿ ಮುಂದೆ ನೀವು ಯಾರನ್ನು ಬೇಕಾದರೂ ಆಯ್ಕೆ ಮಾಡಿಕೊಳ್ಳಿ. ಸಿದ್ದರಾಮಯ್ಯ ನವರ ಅಮೃತ ಮಹೋತ್ಸವ ಕ್ಕೆ ಇಷ್ಟೊಂದು ಜನರ ನೀರಿಕ್ಷೆ ನಮಗೆ ಇರಲಿಲ್ಲ ಆದರೂ ನಮ್ಮ ಜಿಲ್ಲೆ ಹಾಗೂ ಇತರೆ ಜಿಲ್ಲೆಗಳಿಂದ ಜನರು ಭಾಗವಹಿಸಿ ಸಹಕಾರ ನೀಡಿದ ಎಲ್ಲರಿಗೂ ಧನ್ಯವಾದಗಳನ್ನು ತಿಳಿಸಿದರು .

ವಿಧಾನ ಪರಿಷ ಸದಸ್ಯ ರಾಜೇಂದ್ರ ರಾಜಣ್ಣ ಮಾತನಾಡಿ, ಕಳೆದ ೭ ವರ್ಷದಿಂದ ಕೋಮು ಗಲಭೆ ಸೃಷ್ಟಿಸಿ ಆಡಳಿತ ನಡೆಸು ತ್ತಿರುವ ಬಿಜೆಪಿ ಬಡವರ ರಕ್ತ ಹೀರುತ್ತಿದೆ. ಉದ್ಯೋಗವಿಲ್ಲದೆ ಯುವಕರು ಬೀದಿಯಲ್ಲಿದ್ದು, ರೈತರು ಕಂಗಾಲಾಗಿದ್ದಾರೆ ಕೃತಕ ಪರಿಸ್ಥಿತಿಯಲ್ಲಿ ಇಂದು ದೇಶದ ಬಗ್ಗೆ ಬದುಕುತ್ತಿದ್ದಾರೆ. ಇವೆಲ್ಲ ದೃಷ್ಟಿಕೋನದಿಂದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಸಿದ್ದರಾಮಯ್ಯನವರ ನೇತೃತ್ವದಲ್ಲಿ ಈ ಪಾದಯಾತ್ರೆ ನಡೆಯುತ್ತಿದೆ .

ದೇಶದ ಸಂವಿಧಾನ ಬದಲಾವಣೆಗೆ ಮುಂದಾಗಿರುವ ಈ ಸರಕಾರದ ವಿರುದ್ಧ ಜನ ಹೋರಾಟ ಮಾಡಬೇಕು. ಮುಂದೆ ೦೬ ತಿಂಗಳಿನಲ್ಲಿ ವಿಧಾನಸಭೆ ಚುನಾವಣೆಯಿದ್ದು ಕೆ.ಎನ್.ರಾಜಣ್ಣನವರ ಕೊಡುಗೆಯನ್ನು ಜನರು ಸ್ಮರಿಸಬೇಕು, ಅವರ ಕೊನೆಯ ಆಶಯದಂತೆ ಮುಂದೆ ಮಧುಗಿರಿಗೆ ಜಿಲ್ಲಾ ಕೇಂದ್ರ, ಎತ್ತಿನಹೊಳೆ ಯುವಕರಿಗೆ ಉದ್ಯೋಗ ನೀಡಲು ಮುಂದಾಗಲಿದ್ದು, ಹಿಂದಿನ ತಪ್ಪುಗಳನ್ನು ಮತ್ತೆ ಮಾಡದಂತೆ ಎಲ್ಲರೂ ಆಶೀರ್ವಾದ ಮಾಡಬೇಕು ಎಂದರು.

ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ಜಿ.ಜೆ.ರಾಜಣ್ಣ, ಎಸ್.ಡಿ.ಕೃಷ್ಣಪ್ಪ, ಬಿ.ನಾಗೇಶ್ ಬಾಬ, ಎನ್.ಗಂಗಣ್ಣ, ಇಂದಿರಾ ದೇನಾನಾಯಕ್, ಪಿ.ಟಿ.ಗೋವಿಂದಯ್ಯ, ಆದಿನಾರಾಯಣರೆಡ್ಡಿ, ಸುವರ್ಣಮ್ಮ, ನಂಜು0ಡರಾಜ, ಎಂ.ಎಸ್.ಮಲ್ಲಿಕಾ ರ್ಜುನಯ್ಯ, ಗೋವಿಂದರಾಜು, ಮಹ್ಮದ್ ಅಯೂಬ್, ಎಂ.ಎಸ್.ಚ0ದ್ರಶೇಖರ್, ಲಾಲಪೇಟೆ ಮಂಜುನಾಥ್, ಉಮೇಶ್, ಶ್ರೀಧರ್ ಗ್ರಾ.ಪಂ.ಅಧ್ಯಕ್ಷರಾದ ನರಸಿಂಹರೆಡ್ಡಿ, ವೀರಣ್ಣ ಹಾಗೂ ಸಹಸ್ರಾರು ಕಾರ್ಯಕರ್ತರು ಭಾಗವಹಿಸಿದ್ದರು.