Wednesday, 1st December 2021

ಆರ್ ಎಸ್‌ಎಸ್ ಆನೆ ಇದ್ದಂತೆ, ತನ್ನ ದಾರಿ ಕಡೆ ಹೋಗುತ್ತಿರುತ್ತದೆ: ಸಿ.ಟಿ. ರವಿ

ಚಿಕ್ಕಮಗಳೂರು : ಆರ್ ಎಸ್‌ಎಸ್ ಆನೆ ಇದ್ದಂತೆ, ಅದರ ಪಾಡಿಗೆ ತನ್ನ ದಾರಿ ಕಡೆ ಹೋಗುತ್ತಿರುತ್ತದೆ. ಮಧ್ಯೆ ಯಾರು, ಏನು ಮಾತನಾಡುತ್ತಾರೆಂದು ತಲೆಕೆಡಿಸಿಕೊಳ್ಳುವುದಿಲ್ಲ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಅವರು ಜೆಡಿಎಸ್ ನಾಯಕ ಎಚ್.ಡಿ. ಕುಮಾರಸ್ವಾಮಿಗೆ ಟಾಂಗ್ ನೀಡಿದ್ದಾರೆ.

ಆರ್ ಎಸ್‌ಎಸ್ ದೇಶ ಭಕ್ತ ಸಂಘಟನೆ, ಹಿಂದೂಗಳಲ್ಲಿ ಒಗ್ಗಟ್ಟು, ರಾಷ್ಟ್ರೀಯತೆ ಅದಿರುವ ಕಾರಣಕ್ಕೆ ಇದೆ. ಇಲ್ಲದಿದ್ದರೆ ಜಾತಿ, ಪ್ರಾದೇಶಿಕ ಆಧಾರದ ಕಿತ್ತಾಟ ಮೂರನೇಯವರಿಗೆ ಲಾಭ ಆಗುತ್ತಿತ್ತು ಎಂದರು.

ದೇಶದ ಮೇಲೆ ಅಕ್ರಮಣ ಮಾಡಿದ ಸಾಮರ್ಥ್ಯಕ್ಕಿಂತ ನಮ್ಮ ಒಡಕಿನ ಲಾಭದಲ್ಲಿ ಅಕ್ರಮಣ ಮಾಡಿದರು. ಬದುಕಿರುವವರೆಗೆ ಹೇಗಾದರೂ ಮತ ಬಂದರೆ ಸಾಕು ಅನ್ನುವಂತಹ ಮನೋಭಾವ ಇರುವವರಿಗೆ ಅರ್ಥ ಆಗುವುದಿಲ್ಲ ಎಂದರು.