Friday, 24th September 2021

ಬಿಜೆಪಿ ಮುಖಭಂಗ: ಮೇಯರ್‌ ಆಗಿ ಜೆಡಿಎಸ್‌ನ ರುಕ್ಮಿಣಿ ಮಾದೇಗೌಡ

ಮೈಸೂರು: ಜೆಡಿಎಸ್‌ ಪಾಲಿಕೆ ತೆಕ್ಕೆಗೆ ಮೇಯರ್‌ ಪಟ್ಟ ಲಭಿಸಿದ್ದು ಬಿಜೆಪಿ ಕನಸು ನುಚ್ಚುನೂರಾಗಿದೆ. ಮೈಸೂರು ಮಹಾನಗರ ಪಾಲಿಕೆ ಮೇಯರ್‌-ಉಪಮೇಯರ್‌ ಚುನಾವಣೆಯಲ್ಲಿ ಕಾಂಗ್ರೆಸ್-ಜೆಡಿಎಸ್‌ ಮೈತ್ರಿ ಸಾಧಿಸಿವೆ.

ಜೆಡಿಎಸ್‌ನ ರುಕ್ಮಿಣಿ ಮಾದೇಗೌಡ ಅವರು ಮೇಯರ್‌ ಆಗಿ, ಕಾಂಗ್ರೆಸ್‌ನ ಅನ್ವರ್‌ ಬೇಗ್‌ ಅವರಿಗೆ ಉಪಮೇಯರ್‌ ಸ್ಥಾನ ಲಭಿಸಿದೆ.

ಜೆಡಿಎಸ್‌ ಅಭ್ಯರ್ಥಿ ರುಕ್ಮಿಣಿ ಮಾದೇಗೌಡ ಅವರು 43 ಮತಗಳ ಮೂಲಕ ಮೇಯರ್‌ ಸ್ಥಾನ ಅಲಂಕರಿಸಿದರು. ಬಿಜೆಪಿ ಸುನಂದಾ ಪಾಲನೇತ್ರ ಅವರಿಗೆ 26 ಮತಗಳನ್ನಷ್ಟೇ ಪಡೆದರು.

Leave a Reply

Your email address will not be published. Required fields are marked *