Tuesday, 31st January 2023

ಸದಾಶಿವಾನಂದ ಸ್ವಾಮೀಜಿ ಲಿಂಗೈಕ್ಯ

ಸದಾಶಿವಾನಂದ ಸ್ವಾಮೀಜಿ

ಬೈಲಹೊಂಗಲ: ಪಟ್ಟಣದ ಹೊಸೂರ ರಸ್ತೆೆಯಲ್ಲಿರುವ ಶಿವಾನಂದಮಠದ ಮಹಾದೇವ ಸರಸ್ವತಿ ಸ್ವಾಾಮೀಜಿ ಅವರ ಉತ್ತರಾಧಿಕಾರಿ ಸದಾಶಿವಾನಂದ ಸ್ವಾಾಮೀಜಿ (44) ಅನಾರೋಗ್ಯದಿಂದ ಮಂಗಳವಾರ ಲಿಂಗೈಕ್ಯರಾದರು. ಕಳೆದ ಹಲವು ದಿನಗಳಿಂದ ಕಿಡ್ನಿಿ ಸ್ಟೋೋನ್‌ನಿಂದ ಬಳಲುತ್ತಿಿದ್ದರು. ಅವರನ್ನು ಚಿಕಿತ್ಸೆೆಗಾಗಿ ಬೆಳಗಾವಿಯ ಖಾಸಗಿ ಆಸ್ಪತ್ರೆೆಗೆ ದಾಖಲಿಸಲಾಗಿತ್ತು. ಶಸ್ರ್ತಚಿಕಿತ್ಸೆೆ ಫಲಿಸದೆ ಕೊನೆಯುಸಿರೆಳೆದರು.

ಪಾರ್ಥಿವ ಶರೀರ ದರ್ಶನ, ಮೆರವಣಿಗೆ: ಸ್ವಾಾಮೀಜಿ ಸಾವಿನ ವಿಷಯ ತಿಳಿಯುತ್ತಿಿದ್ದಂತೆ ಬುಧವಾರ ಶ್ರೀಮಠ ಆವರಣದಲ್ಲಿ ಭಕ್ತರ ದಂಡು ಹರಿದು ಬಂದಿತು. ಶ್ರೀಮಠದಲ್ಲಿ ಸ್ವಾಾಮೀಜಿ ಅವರ ಅಂತಿಮ ದರ್ಶನಕ್ಕಾಾಗಿ ವ್ಯವಸ್ಥೆೆ ಮಾಡಲಾಗಿತ್ತು. ಭಕ್ತರು ಸಾಲು,ಸಾಲಾಗಿ ಬಂದು ದರ್ಶನ ಪಡೆದರು.ನಂತರ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಪಾರ್ಥಿವ ಶರೀರದ ಭವ್ಯ ಮೆರವಣಿಗೆ ಮೂಲಕ ಮರಳಿ ಶ್ರೀಮಠಕ್ಕೆೆ ಆಗಮಿಸಿ ಸಕಲ ವಿಧಿ-ವಿಧಾನಗಳ ಮೂಲಕ ಅಂತ್ಯಕ್ರಿಿಯೆ ಜರುಗಿತು.

 

ಶಾಖಾ ಮೂರುಸಾವಿರಮಠದ ಪ್ರಭುನೀಲಕಂಠ ಸ್ವಾಾಮೀಜಿ, ಕಾದರವಳ್ಳಿಿ ಅದೃಶ್ಯಾಾನಂದ ಸ್ವಾಾಮಿಜಿ, ಗದಗ ಶಾಂತಮ್ಮತಾಯಿ, ಶಿಶುವಿನಹಳ್ಳಿಿಯ ನಿಜಗುಣಾನಂದ ಸ್ವಾಾಮೀಜಿ, ಹರಳಗಟ್ಟಿಿ ವಿದ್ಯಾಾನಂದ ಸ್ವಾಾಮಿಜಿ, ನಿರ್ವಾಣಹಟ್ಟಿಿ ಶಿವಾನಂದ ಸರಸ್ವತಿ ಸ್ವಾಾಮೀಜಿ, ತಾವಲಗೇರಿ ಚಂದ್ರಶೇಖರ ಸ್ವಾಾಮೀಜಿ, ಕೆಳಗೇರಿ ಯೋಗಾನಂದ ಸ್ವಾಾಮಿಜಿ, ರಾಯರ ಹೆಬ್ಬಳ್ಳಿಿ ಮಹೇಶಾನಂದ ಸ್ವಾಾಮೀಜಿ, ಗಣಿಕೊಪ್ಪ ಸದಾಶಿವ ಸ್ವಾಾಮೀಜಿ, ಮಾಟೋಳ್ಳಿಿಯ ಚನ್ನಬಸವದೇವರು, ಬನಹಟ್ಟಿಿ ಮಲ್ಲೇಶ ಶರಣರು, ಆಸಂಗಿ ನರಸಿಂಹ ಸ್ವಾಾಮೀಜಿ, ಬದಾಮಿ ಸಿದ್ರಾಾಮ ಶಾಸ್ರ್ತಿಿಗಳು, ಹುಲ್ಲೂರು ನಿಜಗುಣ ಸ್ವಾಾಮೀಜಿ ಹಾಗೂ ವಿವಿಧ ಮಠಾಧೀಶರು, ಸಹಸ್ರಾಾರು ಸದ್ಭಕ್ತರು ಇದ್ದರು.

error: Content is protected !!