Tuesday, 17th May 2022

ಸಾಧನೆಗೆ ದೇಹವೇಕೆ, ಆತ್ಮಸ್ಥೈರ್ಯವಿದ್ದರೆ ಸಾಕು…

ಯಶೋಗಾಥೆ

ಪ್ರೊ. ಶ್ರೀನಿವಾಸಮೂರ್ತಿ ಎನ್.ಸುಂಡ್ರಹಳ್ಳಿ 

ಈ ಬಾರಿ ದೇಶದ ಇಬ್ಬರು ಕ್ರೀಡಾಪಟುಗಳಿಗೆ ರಾಜೀವ್‌ಗಾಂಧಿ ಖೇಲ್ ರತ್ನ ಪ್ರಶಸ್ತಿಿ ದೊರೆತಿದೆ. ಕುಸ್ತಿಿಪಟು ಭಜರಂಗ್ ಪೂನಿಯಾ ಮತ್ತು ಪ್ಯಾಾರಾ ಅಥ್ಲೀಟ್ ದೀಪಾ ಮಲ್ಲಿಕ್. ಈ ವಿಷಯದಲ್ಲಿ ಸ್ಫೂರ್ತಿಯ ಸೆಲೆಯುಕ್ಕುವುದು ದೀಪಾ ಮಲ್ಲಿಕ್ ವಿಷಯದಲ್ಲಿ. ಈಕೆಗೆ ಎದೆಯಿಂದ ಕೆಳ ಭಾಗ ಸ್ವಾಾಧೀನವೇ ಇಲ್ಲ. ಆದರೂ ಯಮುನಾ ನದಿ ಪ್ರವಾಹಕ್ಕೆೆ ವಿರುದ್ಧವಾಗಿ 1 ಕಿ.ಮೀ. ಈಜಿ ಲಿಮ್ಕಾಾ ಬುಕ್‌ನಲ್ಲಿ ದಾಖಲೆ ನಿರ್ಮಿಸಿದ್ದಾಾಳೆ. ನಡೆಯಲು ಸಾಧ್ಯವೇ ಇಲ್ಲ, ಆದರೂ ವಿಶ್ವ ಪ್ಯಾಾರಾಲಿಂಪಿಕ್ ಕ್ರೀಡಾಕೂಟದಲ್ಲಿ ಭಾಗವಹಿಸಿ ಬೆಳ್ಳಿಿ ಪದಕ ಪಡೆದಿದ್ದಾಾಳೆ. ಬೈಕ್ ಏರಿ ಗುಡ್ಡುಗಾಡು ಪ್ರದೇಶವನ್ನು ಸುತ್ತಾಾಡಿ ಬರುತ್ತಾಾಳೆ. ಒಬ್ಬ ಚಾಲಕನನ್ನು ಜತೆಟ್ಟುಕೊಂಡು ದೆಹಲಿಯಿಂದ ಲೇಹ್‌ವರೆಗೆ ಮತ್ತು ಸುತ್ತಮುತ್ತಲಿನ 3000 ಕಿ.ಮೀ. ದೂರ ಹಾಗೂ ಮದ್ರಾಾಸ್‌ನಿಂದ ದೆಹಲಿಯವರೆಗೆ 3278 ಕಿ.ಮೀ. ದೂರವನ್ನು ಪ್ರಯಾಣಿಸಿದ್ದಾಾಳೆ. ಈ ರೀತಿ ಸಾಹಸಗೈದ ‘ಜಗತ್ತಿಿನ ಪ್ರಥಮ ವಿಶೇಷ ಚೇತನ ಹೆಣ್ಣು’ ಎಂಬ ದಾಖಲೆ ಕೂಡ ಈಕೆಯ ಹೆಸರಿನಲ್ಲಿದೆ. ಅರ್ಜುನ ಪ್ರಶಸ್ತಿಿ ಮತ್ತು ಪದ್ಮಶ್ರೀ ಪ್ರಶಸ್ತಿಿ ಸೇರಿದಂತೆ ನೂರಾರು ಪ್ರಶಸ್ತಿಿಗಳು ಈಕೆಯನ್ನು ಹುಡುಕಿಕೊಂಡು ಬಂದಿವೆ. ಈಕೆಯ ಸಾಹಸ ಯಾತ್ರೆೆ ಎಂತಹುದೇ ಜಡತ್ವವನ್ನೂ ಬಡಿದೆಬ್ಬಿಿಸುವಷ್ಟು ಸ್ಫೂರ್ತಿಯನ್ನು ತುಂಬಿಕೊಂಡಿದೆ.

‘ಬೈಕ್ ಕೊಡಿಸಿದವರನ್ನು ಮದುವೆಯಾಗುತ್ತೇನೆ ಎಂದಿದ್ದಳು’ ಹೌದು ದೀಪಾ ಮಲ್ಲಿಕ್ ಮದುವೆಗೂ ಮುಂಚೆ ನಮ್ಮ ನಿಮ್ಮಂತೆಯೇ ಇದ್ದವಳು. ಸುರದ್ರೂಪಿ ಹೆಣ್ಣು ಮಗಳು. ಗಂಡನದು ದೇಶ ಕಾಯುವ ಪವಿತ್ರ ಕೆಲಸ. ಇವರಿಬ್ಬರೂ ಪ್ರೀತಿಸಿ ಮದುವೆಯಾದದ್ದೇ ಒಂದು ರೋಚಕ ಕತೆ. ಕಾಲೇಜು ದಿನಗಳಲ್ಲಿ ಈಕೆಗೆ ಬೈಕ್ ಓಡಿಸುವ ವಿಪರೀತ ಹುಚ್ಚು. ತರಗತಿಯಲ್ಲಿದ್ದುದಕ್ಕಿಿಂತ ಬೈಕ್ ಓಡಿಸಿಕೊಂಡು ಹೊರಗೆ ಅಲೆದದ್ದೇ ಹೆಚ್ಚು. ಅದೊಂದು ದಿನ ತನಗೆ ಪರಿಚಯವಾಗಿದ್ದ ಹುಡುಗನೊಂದಿಗೆ ಮಾತಡುತ್ತಾಾ, ನನಗೆ ಯಾರಾದರೂ ಒಂದು ಬೈಕ್ ಕೊಡಿಸಿದರೆ ಅವನನ್ನು ಮದುವೆಯಾಗಿಬಿಡುತ್ತೇನೆ ಎಂದಿದ್ದಳು ದೀಪಾ. ಈ ಮೊದಲೇ ಅವಳನ್ನು ಒಳಗೊಳಗೆ ಪ್ರೀತಿಸುತ್ತಿಿದ್ದ ಆತ, ಎರಡು ದಿನಗಳ ನಂತರ ಕವಾಸಕಿ ಬಜಾಜ್ 100 ಸಿ.ಸಿ. ಬೈಕ್‌ನ್ನು ತಂದು ಮುಂದೆ ನಿಲ್ಲಿಸಿ ಮಂಡಿಯೂರಿ, ಈಗ ಹೇಳು ಅಂದು ಹೇಳಿದಂತೆ ನನ್ನನ್ನು ಮದುವೆಯಾಗುತ್ತೀಯಾ ಎಂದಿದ್ದ. ಬೇರೆ ಕಾರಣಗಳೇ ಇರಲಿಲ್ಲ, ಮನೆಯವರೊಟ್ಟಿಿಗೆ ಮಾತನಾಡಿ ಅವನು ಕಟ್ಟುವ ತಾಳಿಗೆ ಕೊರಳೊಡ್ಡಿಿದ್ದಳು… ಆ ಹುಡುಗನೇ ಕರ್ನಲ್ ವಿಕ್ರಂಸಿಂಗ್. ಇವರ ಒಲವಿನ ದಾಂಪತ್ಯಕ್ಕೆೆ ಕುರುಹಾಗಿ ಅಂಬಿಕಾ ಮತ್ತು ದೇವಿಕಾ ಎಂಬ ಇಬ್ಬರು ಹೆಣ್ಣು ಮಕ್ಕಳು ಜನಿಸಿದ್ದರು. ಎಲ್ಲವೂ ಇದೆ, ಇನ್ನೇನೂ ಬೇಕಿಲ್ಲ ಎಂದು ಖುಷಿ ಖುಷಿಯಾಗಿದ್ದ ದಿನಗಳು ಅವು. ಪಾಕಿಸ್ತಾಾನ ಮತ್ತು ಭಾರತದ ನಡುವೆ ಕಾರ್ಗಿಲ್ ಯುದ್ಧ ಆರಂಭವಾಗುವ ಎಲ್ಲ ಲಕ್ಷಣಗಳು ಕಾಣಿಸಿದ್ದವು. ಹಾಗಾಗಿ ಗಂಡ ಗಡಿಯಲ್ಲಿ ಸಕ್ರಿಿಯವಾಗಿದ್ದ. ಈ ನಡುವೆ ಡಾಕ್ಟರ್ ಬಾಯಿಂದ ಕಹಿ ಸತ್ಯವೊಂದನ್ನು ಕೇಳಲ್ಪಟ್ಟಳು.

‘ಡಾಕ್ಟರ್ ಹೇಳಿದ ಸತ್ಯಕ್ಕೆೆ ಎದೆ ಹೊಡೆದಿತ್ತು’ ಅವು 1999 ರ ದಿನಗಳು, ಭಾರತ ಪಾಕಿಸ್ತಾಾನದ ನಡುವೆ ಯುದ್ಧ ಶುರುವಾಗಿತ್ತು. ಗಂಡನಾದ ವಿಕ್ರಂ ತಾಯ್ನಾಾಡಿನ ರಕ್ಷಣೆಗೆ ನಿಂತಿದ್ದ. ಇಲ್ಲಿ ದೀಪಾಳಿಗೆ ತಡೆಯಲಾರದ ಬೆನ್ನು ನೋವು. ಒಂದೈದು ನಿಮಿಷಗಳೂ ನಿಲ್ಲಲಾರಲಾಗದಷ್ಟು ಬಾಧಿಸುತ್ತಿಿತ್ತು. ದೆಹಲಿಯ ಮಿಲಿಟರಿ ಆಸ್ಪತ್ರೆೆಯಲ್ಲಿ ಚೆಕಪ್ ಮಾಡಿಸಿಕೊಂಡ ದೀಪಾಳಿಗೆ ಕುಸಿದು ಬೀಳುವಂತ ಕಹಿ ಸತ್ಯವನ್ನು ವೈದ್ಯರು ಹೇಳಿದ್ದರು. ‘ನಿನ್ನ ಬೆನ್ನು ಹುರಿಯ ಮೇಲೆ ಗೆಡ್ಡೆೆಯಿದೆ, ತೀರಾ ದೊಡ್ಡದಿರುವ ಕಾರಣ ಮೇಜರ್ ಆಪರೇಷನ್ ಆಗಲೇಬೇಕು. ಈ ಸಂದರ್ಭ ಬೆನ್ನು ಹುರಿಗೆ ಬಲವಾದ ಪೆಟ್ಟು ಬೀಳಬಹುದು. ಮೆದುಳು ಸಂಪರ್ಕವಿರುವ ಕೆಲವು ನರವ್ಯೂೆಹಗಳು ನಿಸ್ತೇಜಗೊಳ್ಳಬಹುದು ಅಥವಾ ಗೊಳ್ಳದೆಯೂ ಇರಬಹುದು. ಪ್ರಾಾಣಕ್ಕೂ ಎರವಾಗಬಹುದು. ಆದರೆ ಶಸ್ತ್ರ ಚಿಕಿತ್ಸೆೆಯ ನಂತರ ದೇಹದ ಒಂದು ಭಾಗವಂತೂ ನಿಷ್ಕ್ರಿಿಯಗೊಳ್ಳುವುದು ನಿಶ್ಚಿಿತ. ಶಸ್ತ್ರ ಚಿಕಿತ್ಸೆೆಗೆ ಆದಷ್ಟೂ ಬೇಗ ತೀರ್ಮಾನಿಸಿ ತಡ ಮಾಡುವಂತಿಲ್ಲ. ಈ ಎಲ್ಲ ಮಾತುಗಳನ್ನು ಕೇಳಿಸಿಕೊಂಡ ದೀಪಾಳಿಗೆ ದಿಕ್ಕು ತೋಚದಾಗಿತ್ತು. ಭಾರವಾದ ಹೆಜ್ಜೆೆಗಳೊಂದಿಗೆ ಮನೆಗೆ ಬಂದ ದೀಪಾ ಅಪ್ಪ, ಅಮ್ಮ, ಪುಟ್ಟ ಮಕ್ಕಳು ಎಲ್ಲರಿಂದ ವಿಷಯ ಮುಚ್ಚಿಿಟ್ಟು ಒಂದು ವಾರಗಳ ಕಾಲ ತನ್ನೆೆಲ್ಲ ನೋವನ್ನು ಮರೆತು ಸಮಾಧಾನವಾಗುವಷ್ಟು ಸುತ್ತಾಾಡಿದಳು. ಇಷ್ಟವಾದ ಜಾಗಗಳಿಗೆ ಒಬ್ಬಳೇ ಬೈಕ್ ಏರಿ ಹೋಗಿ ಬಂದಳು. ಮಕ್ಕಳೊಟ್ಟಿಿಗೆ ಪಾರ್ಕ್, ಮೈದಾನ ಎಂದು ಸುತ್ತಾಾಡಿ ಅವರೊಂದಿಗೆ ತಾನೂ ಮಗುವಾಗಿ ಕುಣಿದಾಡಿದಳು. ಆ ನಂತರ ತನ್ನ ಪ್ರೀತಿಯ ಗಂಡ ಕರ್ನಲ್ ವಿಕ್‌ರ್‌‌ಂ ಸಿಂಗ್‌ಗೆ ಡಾಕ್ಟರ್ ಹೇಳಿದ್ದ ಎಲ್ಲವನ್ನೂ ವಿವರಿಸಿ ಒಂದು ಸುದೀರ್ಘ ಪತ್ರ ಬರೆದು ಪೋಸ್‌ಟ್‌ ಮಾಡಿದಳು. ಒಂದು ವೇಳೆ ತಾನು ಸತ್ತರೆ ತಮ್ಮ ಮಕ್ಕಳಾದ ಅಂಬಿಕಾ ಮತ್ತು ದೇವಿಕಾರನ್ನು ಸಾಕುವ ಬಗೆ ಹೇಗೆ ಎಂದು ಬರೆಯುವುದನ್ನು ಮಾತ್ರ ಮರೆಯಲಿಲ್ಲ. ಅದೇ ವೇಳೆಗೆ ಕಾರ್ಗಿಲ್ ಯುದ್ಧ ಶುರುವಾಗಿಬಿಟ್ಟಿಿತ್ತು. ಈಕೆಯೆಡೆಗೆ ಗಮನ ಕೊಡುವಷ್ಟು ಪುರುಸೊತ್ತು ಕರ್ನಲ್‌ಗೆ ಇಲ್ಲವಾಗಿತ್ತು. ಏಕೆಂದರೆ ತಾಯ್ನಾಾಡಿನ ರಕ್ಷಣೆಯ ಪ್ರಶ್ನೆೆ ಅದಾಗಿತ್ತು ನೋಡಿ.

ನಾನೇದರೂ ಸತ್ತರೇ…ಈಗ ಒಬ್ಬಳೇ ಆಸ್ಪತ್ರೆೆಗೆ ಹೊರಟು ನಿಂತ ದೀಪಾ ತಾಯಿಗೆ ಚೆಕಪ್‌ಗೆ ಹೋಗಿ ಬರುತ್ತೇನೆ ಎಂದಷ್ಟೇ ಹೇಳಿದ್ದಳು. ಡಾಕ್ಟರ್ ಕೋಣೆಯನ್ನು ಪ್ರವೇಶಿಸುತ್ತಿಿದ್ದಂತೆಯೇ ಅವರು ‘ನಿನ್ನ ಜತೆಗೆ ಯಾರು ಬಂದಿದ್ದಾಾರೆ’ ಎಂದು ಕೇಳಿದರು. ‘ಅಮ್ಮ ನನ್ನ ಮಕ್ಕಳನ್ನು ನೋಡಿಕೊಂಡು ಊರಲ್ಲಿದ್ದಾಾರೆ, ಅಪ್ಪ ಕೆಲಸದ ನಿಮಿತ್ತ ವಿದೇಶದಲ್ಲಿದ್ದಾಾರೆ, ಗಂಡ ಯುದ್ಧ ಭೂಮಿಯಲ್ಲಿದ್ದಾಾರೆ, ಈಗ ನನ್ನೊೊಂದಿಗೆ ನನ್ನ ಆತ್ಮವಿಶ್ವಾಾಸ ಹಾಗೂ ನಾನು ನಂಬಿರುವ ದೇವರು ಬಂದಿದ್ದಾಾನೆ, ಇಲ್ಲಿ ನೀವು ಜತೆಯಾಗಿದ್ದೀರಿ. ಈ ಮೂವರು ಬಿಟ್ಟರೆ ಸದ್ಯಕ್ಕೆೆ ನನ್ನೊೊಂದಿಗೆ ಇನ್ಯಾಾರೂ ಇಲ್ಲ. ನೀವು ನಿಶ್ಚಿಿಂತೆಯಿಂದ ಆಪರೇಷನ್ ಮಾಡಿ, ಆದರೆ ಅದಕ್ಕೂ ಮುಂಚೆ ಕೊನೆಯದಾಗಿ ನನ್ನ ಗಂಡನೊಂದಿಗೆ ಮಾತನಾಡಲು ಅವಕಾಶ ಮಾಡಿಕೊಡಿ ಪ್ಲೀಸ್’ ಎಂದಳು. ಡಾಕ್ಟರ್ ಶಾಕ್ ಹೊಡೆದಂತೆ ನಿಂತುಬಿಟ್ಟರು. ಈಕೆಯ ಮಾತುಗಳನ್ನು ಕೇಳಿದ ಡಾಕ್ಟರ್‌ಗೆ ಯಾರೋ ಕರುಳಿಡಿದು ಕಿವುಚಿದಂತಾಗಿತ್ತು. ಆಸ್ಪತ್ರೆೆಯಿಂದಲೇ ಸ್ಯಾಾಟಲೈಟ್ ಫೋನ್ ಮೂಲಕ ಸಂಪರ್ಕ ಕಲ್ಪಿಿಸಿಕೊಟ್ಟರು. ವಿಕ್ರಂ ಸಿಂಗ್ ಸಂಪರ್ಕಕ್ಕೆೆ ಬಂದದ್ದೇ ತಡ ‘ಪತ್ರದಲ್ಲಿ ಎಲ್ಲವನ್ನೂ ವಿವರಿಸಿದ್ದೇನೆ. ವಿಕ್ರಂ, ನೀನು ಯುದ್ಧದಲ್ಲಿ ಗೆಲ್ಲಬೇಕು, ಅದನ್ನು ನೋಡಲು ನಾನು ಇರ್ತೀನೊ ಇಲ್ಲವೋ ಆ ದೇವರಿಗೇ ಗೊತ್ತು. ಒಮ್ಮೆೆ ನಾನೇನಾದರೂ ಸತ್ತರೆ’ ಎನ್ನುವಷ್ಟರಲ್ಲಿ ಮಾತು ತಡೆದ ವಿಕ್ರಂ ‘ದೀಪಾ ಆಪರೇಷನ್ ಯಶಸ್ವಿಿಯಾಗಲಿ, ಆಗುತ್ತದೆ ಆ ಬಗ್ಗೆೆ ಚಿಂತೆ ಬೇಡ. ಡಾಕ್ಟರ್ ಹೇಳಿದಂತೆ ನಿನ್ನ ದೇಹವೇನಾದರೂ ನಿಷ್ಕ್ರಿಿಯವಾದರೆ ನನ್ನ ತೋಳುಗಳು ಗಟ್ಟಿಿಯಾಗಿವೆ. ಯೋಚಿಸಬೇಡ, ತಾಯಿ ತನ್ನ ಮಗುವನ್ನು ಎತ್ತಿಿ ಸಾಕುವಷ್ಟೇ ಕಕ್ಕುಲಾತಿಯಿಂದ ನಿನ್ನನ್ನು ಎತ್ತಿಿ ತಿರುಗಾಡಿ ಸಾಕುತ್ತೇನೆ. ಆದರೆ, ಸಾಯ್ತೀನಿ ಅಂತ ಮಾತ್ರ ಹೇಳಬೇಡ’ ಅನ್ನುವಷ್ಟರಲ್ಲಿ ಗದ್ಗದಿತನಾದ.

ಆಪರೇಷನ್ ಮುಗಿಯಿತು. ಈಕೆ ಜೀವಂತ ಶವವಾಗಿ ಬೆಡ್ ಮೇಲೆ ಮಲಗಿಬಿಟ್ಟಳು. ಎಚ್ಚರವಾಗಲು ಒಂದು ವಾರಕ್ಕಿಿಂತ ಜಾಸ್ತಿಿಯೇ ಬೇಕಾಯಿತು. ಆ ಕಡೆಗೆ ಯುದ್ಧದಲ್ಲಿ ಭಾರತ ಗೆಲುವಿನ ಕೇಕೆ ಹಾಕಿತ್ತು. ವಿಕ್ರಂ ಗೆಲುವಿನ ನಗೆಯೊಂದಿಗೆ ಊರಿಗೆ ಬರುವಷ್ಟರಲ್ಲಿ ಈಕೆಗೆ ಹಿಂದಿಂದೆ ಮೂರು ಮೇಜರ್ ಆಪರೇಷನ್‌ಗಳಾಗಿದ್ದವು. ಬೆನ್ನು ಮೂಳೆಯ ಹಲವು ಭಾಗ ಕತ್ತರಿಸಿ ಹಾಕಲಾಗಿತ್ತು. ದುರಂತವೆಂದರೆ ವೈದ್ಯರ ಮಾತಿನಂತೆ ದೀಪಾಳಿಗೆ ಎದೆಯಿಂದ ಕೆಳ ಭಾಗ ಸಂಪೂರ್ಣ ನಿಷ್ಕ್ರಿಿಯವಾಗಿತ್ತು. ಆಗ ಆಕೆಯ ವಯಸ್ಸು ಕೇವಲ 30 ವರ್ಷ ಅಷ್ಟೆೆ. ಗಂಡ ತನ್ನ ಹೆಂಡತಿಯನ್ನು ನೋಡಿಕೊಳ್ಳಲೆಂದೇ ವಿಆರ್‌ಎಸ್ ಪಡೆದುಕೊಂಡು ತನ್ನ ಸಂಸಾರವನ್ನು ಮಹಾರಾಷ್ಟ್ರದ ಅಹಮದ್ ನಗರಕ್ಕೆೆ ಸ್ಥಳಾಂತರಿಸಿದ. ಅಂದು ಫೋನಿನಲ್ಲಿ ತನ್ನ ಹೆಂಡತಿಗೆ ಕೊಟ್ಟ ಮಾತಿನಂತೆ ಅಕ್ಷರಶಃ ತಾಯಿಯಂತೆ ಅವಳ ಸೇವೆಗೆ ನಿಂತುಬಿಟ್ಟ. ಇವನ ಪ್ರೀತಿ ಹಾರೈಕೆಯಿಂದ ಚೇತರಿಸಿಕೊಂಡಳಾದರೂ ಸೊಂಟದಿಂದ ಕೆಳ ಭಾಗದ ದೇಹ ಸಂಪೂರ್ಣ ನಿಷ್ಕ್ರಿಿಯಗೊಂಡುಬಿಟ್ಟಿಿತ್ತು.

‘ಸಾಧನೆಗೆ ಮನಸ್ಸು ಅಣಿಗೊಂಡಿತ್ತು’ ಒಂದು ಕಾಲಕ್ಕೆೆ ಚಿಗರೆಯಂತೆ ಓಡಾಡಿಕೊಂಡು ಬೈಕ್ ಸವಾರಿ ಮಾಡುತ್ತಾಾ ಸುತ್ತುತ್ತಿಿದ್ದ ದೀಪಾ ವ್ಹೀಲ್ ಚೇರ್‌ಗೆ ಮೊರೆ ಹೋಗಬೇಕಾಯಿತು. ಪ್ರತಿಯೊಂದಕ್ಕೂ ಇನ್ನೊೊಬ್ಬರ ಆಸರೆ ಪಡೆಯಬೇಕಾದ ಸ್ಥಿಿತಿ. ಒಮ್ಮೊೊಮ್ಮೆೆ ತಾನಿದ್ದ ಹಿಂದಿನ ದಿನಗಳನ್ನು ನೆನೆದು ಬಿಕ್ಕಳಿಸುತ್ತಿಿದ್ದಳು. ಆಗಲೇ ಆಕೆಯ ಮನಸ್ಸಿಿನಲ್ಲಿ ನನಗೆ ಕೈಗಳು ಗಟ್ಟಿಿಯಾಗಿವೆ ನಾನೇಕೆ ವಿಚೇತನರಿಗಾಗಿರುವ ಬೈಕ್‌ನ್ನು ಓಡಿಸಬಾರದು? ನಾನೇಕೆ ಕೈಗಳಿಂದಲೇ ನಿಯಂತ್ರಿಿಸಬಲ್ಲ ಕಾರು ಓಡಿಸಬಾರದು ಎಂಬೆಲ್ಲ ಪ್ರಶ್ನೆೆಗಳು ಗರಿಗೆದರಿದವು.
ಆಗ ದಾನಿಯೊಬ್ಬರ ಸಹಾಯದಿಂದ ಕೈಗಳಿಂದಲೇ ನಿಯಂತ್ರಿಿಸಬಲ್ಲ ಕಾರೊಂದನ್ನು ಪಡೆದಳು. ಅಲ್ಲದೆ ಇದೇ ದಾನಿ ನಾಲ್ಕು ಚಕ್ರಗಳ ಬೈಕ್‌ಗೆ ಪ್ರಾಾಯೋಜಕರಾದರು. ಇವುಗಳ ಮೂಲಕವೇ ಆಕೆ ದೆಹಲಿಯಿಂದ ಲೇಹ್‌ಗೆ ಪಯಣಿಸಿದ್ದು ಮತ್ತು ಗುಡ್ಡು ಗಾಡು ಪ್ರದೇಶಗಳಲ್ಲಿ ಸುತ್ತಿಿ ಬಂದದ್ದು.

ಮಗಳನ್ನು ಈಜು ತರಬೇತಿಗೆಂದು ಕರೆದೊಯ್ದರೆ ಆಕೆ ನೀರಿಗಿಳಿಯಲು ಹೆದರಿಕೊಳ್ಳುತ್ತಿಿದ್ದಳು. ಆ ಸಂದರ್ಭ ಆಕೆಗೆ ಧೈರ್ಯ ತುಂಬಲು ಅವರಿವರ ಸಹಾಯದಿಂದ ನೀರಿಗಿಳಿದ ದೀಪಾಳಿಗೆ ಕಾಲುಗಳಿಲ್ಲದೆಯೂ ಕೈಗಳಿಂದಲೇ ಈಜಬಹುದು ಅನ್ನಿಿಸಿತ್ತು. ಅಂದಿನಿಂದ ಮಗಳೊಟ್ಟಿಿಗೆ ಈಕೆಯೂ ತರಬೇತಿ ಪಡೆದಳು. ನಿಷ್ಕ್ರಿಿಯಗೊಂಡಿದ್ದ ಅರ್ಧ ದೇಹವನ್ನು ಜತೆಗಿಟ್ಟುಕೊಂಡು ಯಮುನಾ ನದಿಯ ಪ್ರವಾಹಕ್ಕೆೆದುರಾಗಿ ಒಂದು ಕಿ.ಮೀ. ಈಜಿ ‘ಲಿಮ್ಕಾಾ ಬುಕ್’ನಲ್ಲಿ ದಾಖಲೆ ನಿರ್ಮಿಸಿಬಿಟ್ಟಳು.

‘ಚಿನ್ನವನ್ನು ಭೇಟೆಯಾಡಿಬಿಟ್ಟಳು’ ಇಷ್ಟೊೊತ್ತಿಿಗಾಗಲೇ ದೀಪಾಳ ವಯಸ್ಸು ಕೇವಲ 34 ವರ್ಷಗಳಾಗಿತ್ತು. ಪ್ಯಾಾರಾಲಿಂಪಿಕ್‌ನಲ್ಲಿ ಭಾಗವಹಿಸುವ ಆಸೆಯಾಯಿತು. ವ್ಹೀಲ್ ಚೇರ್‌ನಲ್ಲಿ ಕುಳಿತು ಶಾಟ್‌ಪುಟ್, ಡಿಸ್ಕಸ್ ಮತ್ತು ಜಾವೆಲಿನ್ ಥ್ರೋೋ ಆಟಗಳನ್ನು ಅಭ್ಯಾಾಸ ಮಾಡಿದಳು. ಅಭ್ಯಾಾಸ ಸಂದರ್ಭ ಈಕೆ ಪಟ್ಟ ಯಮಯಾತನೆ ಅಷ್ಟಿಿಷ್ಟಲ್ಲ. ಮಹಾರಾಷ್ಟ್ರವನ್ನು ಪ್ರತಿನಿಧಿಸಿ ಶಾಟ್ ಪುಟ್ ಎಸೆತದಲ್ಲಿ ನಾಲ್ಕನೇ ಸ್ಥಾಾನ ಪಡೆದಳು. ವಿಶೇಷವೆಂದರೆ ಎಲ್ಲಿಯೂ ತರಬೇತಿ ಪಡೆದಿರಲಿಲ್ಲ. ಆ ನಂತರ ತರಬೇತಿ ಪಡೆದು 2011ರಲ್ಲಿ ನಡೆದ ವಿಶ್ವ ಪ್ಯಾಾರಾಲಿಂಪಿಕ್ ಕೂಟದಲ್ಲಿ ಶಾಟ್‌ಪುಟ್ ಎಸೆತದಲ್ಲಿ ಬೆಳ್ಳಿಿ ಪದಕ ಪಡೆದ ದೀಪಾ, ಅದೇ ವರ್ಷ ಮಲೇಷಿಯಾ ಕ್ರೀಡಾ ಕೂಟದಲ್ಲಿ ಭಾಗವಹಿಸಿ ಡಿಸ್ಕಸ್ ಮತ್ತು ಜಾವೆಲಿನ್ ಥ್ರೋೋ ವಿಭಾಗದಲ್ಲಿ ಚಿನ್ನದ ಪದಕ, 2016ರಲ್ಲಿ ಬ್ರೆೆಜಿಲ್‌ನಲ್ಲಿ ನಡೆದ ರಿಯೋ ಪ್ಯಾಾರಾಲಿಂಪಿಕ್‌ನಲ್ಲಿ ಶಾಟ್‌ಪುಟ್‌ನಲ್ಲಿ ಬೆಳ್ಳಿಿ ಪದಕ ಪಡೆದು ಭಾರತದ ಕೀರ್ತಿ ಪತಾಕೆಯನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹಾರಿಸಿದಳು. 2018 ರ ಏಷ್ಯನ್ ಪ್ಯಾಾರಾ ಗೇಮ್‌ಸ್‌‌ನಲ್ಲಿ ಡಿಸ್ಕಸ್ ಥ್ರೋೋ ಮತ್ತು ಜಾವೆಲಿನ್ ಥ್ರೋೋನಲ್ಲಿ ಪದಕಗಳನ್ನು ಪಡೆದಳು. ಇದರೊಂದಿಗೆ 2010, 2014 ಮತ್ತು 2018 ರ ಮೂರೂ ಏಷ್ಯನ್ ಪ್ಯಾಾರಾ ಗೇಮ್‌ಸ್‌‌ನಲ್ಲಿ ಸತತವಾಗಿ ಪದಕಗಳನ್ನು ಪಡೆದ ಭಾರತದ ಏಕೈಕ ಕ್ರೀಡಾಪಟು ದೀಪಾ ಮಲ್ಲಿಕ್. ಈಕೆಯ ಸಾಧನೆಯನ್ನು ಪರಿಗಣಿಸಿದ ಭಾರತ ಸರಕಾರ ಆಕೆಗೆ 2012ರಲ್ಲಿ ಅರ್ಜುನ ಪ್ರಶಸ್ತಿಿ, 2014ರಲ್ಲಿ ಪ್ರೆೆಸಿಡೆಂಟ್ ರೋಲ್ ಮಾಡೆಲ್ ಪ್ರಶಸ್ತಿಿ, 2017ರಲ್ಲಿ ಪದ್ಮಶ್ರೀ ಹಾಗೂ 2019ರಲ್ಲಿ ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿಿ ನೀಡಿ ಗೌರವಿಸಿದೆ.
ಅರ್ಧ ದೇಹವೇ ನಿಷ್ಕ್ರಿಿಯವಾಗಿದ್ದರೂ ತನ್ನ ಬದುಕನ್ನು ಕ್ರಿಿಯಾತ್ಮಕವಾಗಿರುವಂತೆ ಮಾಡಿಕೊಂಡವಳು ದೀಪಾ ಮಲ್ಲಿಕ್. ಎಲ್ಲ ಸರಿಯಿದ್ದು, ಸಣ್ಣ ಪುಟ್ಟ ಕಷ್ಟಗಳಿಗೂ ಬದುಕಿನಿಂದ ವಿಮುಖವಾಗುವವರಿಗೆ ದೀಪಾ ಮಲ್ಲಿಕ್‌ರಂತಹ ಹೆಣ್ಣು ಮಗಳು ಮಾದರಿಯಾಗದೇ ಉಳಿಯುವುದಿಲ್ಲ.