Monday, 3rd October 2022

ಒಂದು ಸಹಕಾರ ಸಂಸ್ಥೆ ನಡೆಯಲು ಸಿಂಹಾವಲೋಕನ ಇರಬೇಕು

ಇಂಡಿ: ಶ್ರೀಭೀಮಾಶಂಕರ ಸಹಕಾರಿ ಸಕ್ಕರೆ ಕಾರ್ಖಾನೆಗೆ ರೈತಾಪಿ ವರ್ಗ, ಸರಕಾರದ ಜನಪ್ರತಿನಿಗಳು ಹಾಗೂ ಅಧಿಕಾರಿ ವರ್ಗ ಸಹಕರಿಸಿದಾಗ ಶ್ರೇಯೋಭಿವೃದ್ದಿ ಸಾಧ್ಯ ಒಂದು ಸಹಕಾರ ಸಂಸ್ಥೆ ನಡೆಯಲು ಸಿಂಹಾವಲೋಕನ ಇರಬೇಕು ಎಂದು ಶಾಸಕ ಹಾಗೂ ಶ್ರೀಭೀಮಾಶಂಕರ ಸಹಕಾರಿ ಸಕ್ಕರೆ ಕಾರ್ಖಾನೆ ಅಧ್ಯಕ್ಷ ಯಶವಂತರಾಯಗೌಡ ಪಾಟೀಲ ಹೇಳಿದರು.

ರಾಷ್ಟಿçÃಯ ಹೆದ್ದಾರಿ ಸಮೀಪ ಶ್ರೀಭೀಮಾಶಂಕರ ಸಹಕಾರಿ ಸಕ್ಕರೆ ಕಾರ್ಖಾನೆ ನಿಯ ಮಿತ ಮರಗೂರ ೨೦೨೧ – ೨೨ ನೇ ಸಾಲಿನ ವಾರ್ಷಿಕ ಸರ್ವ ಸಾಧಾರಣಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು. ಸಹಕಾರಿ ಸಕ್ಕರೆ ಕಾರ್ಖಾನೆಗೆ ಹಿಂದಿನ ಮುಖ್ಯ ಮಂತ್ರಿ ಸಿದ್ದರಾಮಯ್ಯನವರು ಹಾಗೂ ಸಹಕಾರಿ ಸಚಿವ ಮಹಾದೇವ ಪ್ರಸಾದ ಸೇರಿದಂತೆ ಪ್ರಸಕ್ತ ಮುಖ್ಯ ಮಂತ್ರಿಗಳಾದ ಎಸ್.ಆರ್ ಬೋಮ್ಮಾಯಿ ಹಾಗೂ ಸಚಿವ ಸಂಪುಟದ ಅನೇಕ ಸಚಿವರುಗಳು ಕಾರ್ಖಾನೆಯ ಅಭಿವೃದ್ದಿಗೆ ಸಹಕರಿಸಿದ್ದಾರೆ ಯಾರು ಉಪಕಾರ ಮಾಡಿದ್ದಾರೆ ಪಕ್ಷಾತೀತ ಸ್ಮರಿಸಬೇಕಾಗಿರುವುದು ಮನುಷ್ಯ ಧರ್ಮ.

೨೦೨೧-೨೨ನೇಸಾಲಿನಲ್ಲಿ ಕಬ್ಬು ಪೂರೈಸಿದ ರೈತರಿಗೆ ಉತ್ತಮ ಕಬ್ಬಿನ ಬಿಲ್ಲ ನೀಡಲಾ ಗಿದೆ. ಪ್ರಸಕ್ತ ವರ್ಷ ರೈತರಿಗೆ ಪ್ರತಿ ಮೇಟ್ರಿಕ್ ಟನ್ ಕಬ್ಬಿಗೆ ೩೧೩೪ ರಂತೆ ನೀಡಲಾಗಿದೆ. ಕಾರ್ಖಾನೆ ರೈತರ ಆಸ್ತಿಯಾಗಿದ್ದು ಇದರ ಶ್ರೇಯೋಭಿವೃದ್ದಿ ನಿಮ್ಮೇಲ್ಲರ ಹೋಣೆ. ಸಹಕಾರಿ ಸಕ್ಕರೆ ಕಾರ್ಖಾನೆಗೆ ನನ್ನ ಮೇಲಿನ ವಿಶ್ವಾಸದಿಂದ ಅನೇಕ ಸಹಕಾರಿ ರಂಗದ ಡಿ.ಸಿ,ಸಿ ಬ್ಯಾಂಕ್ , ಅಪೇಕ್ಷ ಬ್ಯಾಂಕ್, ಶ್ರೀಭೀರಲಿಂಗೇಶ್ವರ ಬ್ಯಾಂಕ್ ಇತರೇ ಬ್ಯಾಂಕುಗಳ ದಿಗ್ಗಜರು ೨-೩ ಕೋಟಿ ಸಾಲ ಕೊಟ್ಟಿದ್ದಾರೆ.

ಈ ಖುಣ ಭಾರ ಮುಟ್ಟಿಸುವ ಜವಾಬ್ದಾರಿ ನನ್ನದಾಗಿದೆ. ಪ್ರತಿ ವರ್ಷ ಮಾರ್ಚ ನಲ್ಲಿ ಬಡ್ಡಿ, ಗಂಟ್ಟು ಸಮೇತ ಸಾಲ ಕಟ್ಟಿದ ಏಕೈಕ ಸಹಕಾರಿ ಸಂಸ್ಥೆ ನಮ್ಮದಾ ಗಿದೆ. ಪ್ರಸಕ್ತ ವರ್ಷ ವಿದ್ಯುತ ಘಟಕದಿಂದ ಒಟ್ಟು ೫.೨೦.೦೭.೪೩೮ ಯುನಿಟ ವಿದ್ಯುತ ಉತ್ಪಾದಿಸ ಲಾಗಿದೆ.

ಕಾರ್ಖಾನೆಗೆ ಬೇಕಾದ ವಿದ್ಯುತ ಉಪಯೋಗಿಸಿ ಉಳಿದ ವಿದ್ಯುತ ೩.೩೮.೮೬. ೮೦೦ ಯುನಿಟ ವಿದ್ಯುತ ಹೆಸ್ಕಾಂ ಇವರಿಗೆ ಮಾರಾಟ ಮಾಡಲಾಗಿದ್ದು ೨೦.೨೧.೩೮.೫೪೫ ಆದಾಯ ಬಂದಿದೆ. ಕೇಂದ್ರ ಸರಕಾರದ ಸಚಿವ ನಿತೀನ ಗಡ್ಕರಿ, ಪಿಯೋಷ ಘೋಯಲ್ ಇವರು ಕಾರ್ಖಾನೆಗಳ ಹಿತ ಚಿಂತನೆ ಕಾಪಾಡಿದ್ದಾರೆ ಸಾರ್ವಜನಿಕ, ರೈತರ ಬಗ್ಗೆ ಕಳಕಳಿಯಿಂದ ಕೆಲಸ ಮಾಡಿದವರಿಗೆ ಅಭಿ ನಂದನೆ ಸಲ್ಲಿಸುವುದಾಗಿ ತಿಳಿಸಿದ ಅವರು ಇಥೇನಾಲ್ ಉತ್ಪಾದನೆಯಲ್ಲಿ ದೇಶದಲ್ಲಿಯೇ ಕರ್ನಾಟಕ ರಾಜ್ಯ ಪ್ರಥಮ ಸ್ಥಾನದಲ್ಲಿದೆ.

ರೈತರು ಗುಣಮಟ್ಟದ ಕಬ್ಬು ಕಳಿಸುವಲ್ಲಿ ಸಹಕಾರ ಮಾಡಿ ಕಾರ್ಖಾನೆಯ ಶ್ರೇಯೋಭಿವೃದ್ದಿಗೆ ಎಲ್ಲರೂ ಶ್ರಮಿಸಬೇಕು ಎಂದು ಮನವಿ ಮಾಡಿದರು.

ಬಾಕ್ಸ: ಸಹಕಾರಿ ಚಳುವಳಿ ಪ್ರಥಮ ನಡೆದಿದ್ದು ೧೯೦೫ರಲ್ಲಿ ಗದಗ ಜಿಲ್ಲೆ ಕಣಗಿಹಾಳದಲ್ಲಿ. ಯಾವುದೇ ಕ್ಷೇತ್ರ ಬೆಳವಣಿಗೆಗೆ ಪಾರದರ್ಶಕತೆ , ಶಾಂತಿ, ಸಹನೆ ಮುಖ್ಯ ಯಾವುದೇ ಅಧಿಕಾರಿಗಳಿಗೆ ಕೆಲಸ ಮಾಡಲು ರಾಜಕಾರಣದಿಂದ ಮುಕ್ತವಾಗಿದ್ದಾಗ ಸಾರ್ವಜನಿಕ ರಂಗದಲ್ಲಿ ಕೆಲಸ ಮಾಡಿ ಯಶಸ್ವಿಯಾಗಲು ಸಾಧ್ಯೆ. ಶಾಸಕ ಯಶವಂತರಾಯಗೌಡ ಪಾಟೀಲ ದೂರದೃಷ್ಠಿಯುಳ್ಳ, ಜನರ ಭಾವನೆಗೆ ಸ್ಪದಿಸುವ ಗುಣ ಹೀಗಾಗಿ ಮತಕ್ಷೇತ್ರದಲ್ಲಿ ಸಾಕಷ್ಟು ಕೆಲಸ ಮಾಡಿ ಜನಾನುರಾಗಿಯಾಗಿದ್ದಾರೆ. ಮುಂಬರುವ ದಿನಗಳಲ್ಲಿ ಶ್ರೀಭೀಮಾಶಂಕರ ಸಹಕಾರಿ ಸಕ್ಕರೆ ಕಾರ್ಖಾನೆ ಅಭಿವೃದ್ದಿಯತ್ತ ಸಾಗಲಿ ಎಂದು ಹಾರೈಸಿದರು. ಡಾ. ಮಹಾಂತೇಶ ಧಾನಮ್ಮನವರ್ ಜಿಲ್ಲಾಧಿಕಾರಿ ವಿಜಯಪೂರ.

ಇದೇ ಸಂಧರ್ಬದಲ್ಲಿ ಸಹಕಾರ ಕ್ಷೇತ್ರದಲ್ಲಿ ಸೇವೆಸಲ್ಲಿಸಿ ರಾಜ್ಯಮಟ್ಟದ ಸಹಕಾರಿ ಪ್ರಶೇಸ್ತಿಗೆ ಭಾಜನರಾದ ಶ್ರೀಮಂತ ಇಂಡಿ ಹಾಗೂ ಕಾರ್ಖಾನೆ ಸ್ಥಾಪನೆಗೆ ಅಂಕುಶ ಇಟ್ಟ ದಿ, ನಾಕರೆ ಕುಟುಂಬ ಸದಸ್ಯರಿಗೆ ಮತ್ತು ಆಡಳಿತ, ವಿರೋಧ ಪಕ್ಷಗಳು ಮಾತ್ರ ಇರಬೇಕು ಎಂದು ದೆಹಲಿಯವರೆಗೆ ಪಾದಯಾತ್ರೆ ಮಾಡಿದ ಬಾಪುರಾಉ ಲೋಣಿ ಇವರಿಗೆ ಸನ್ಮಾನಿಸಲಾಯಿತು.

ಜಿಲ್ಲಾಧಿಕಾರಿ ಡಾ. ಮಹಾಂತೇಶ ಧಾನಮ್ಮನವರ್ , ಉಪಾಧ್ಯಕ್ಷ ವಿಶ್ವನಾಥ ಬಿರಾದಾರ, ನಿರ್ದೇಶಕ ಬಸಣ್ಣ ಕೋರೆ, ಮಲ್ಲನಗೌಡ ಪಾಟೀಲ, ಸಿದ್ದಣ್ಣಾ ಬಿರಾದಾರ, ಜಟ್ಟೆಪ್ಪ ರವಳಿ, ಸುರೇಶಗೌಡ ಪಾಟೀಲ, ಶೋಕ ಗಜಾಕೋಶ, ಅರ್ಜುನ ನಾಯ್ಕೋಡಿ, ಲಲಿತಾ ನಡಗೇರಿ, ಧಾನಮ್ಮಗೌಡತಿ ಬಿರಾದಾರ, ಮಹಾದೇವ ನಗರೆ, ವ್ಯವಸ್ಥಾಪಕ ನಿರ್ದೇಶಕ ಸಿ.ಎಸ್ ನಿಂಬಾಳ. ಆಹಾರ ನಿರೀಕ್ಷಕ ಶ್ರೀಧರ ಮಾರಿಹಾಳ,ಅಮರೇಶ ತಾಂಡೂರ ಸೇರಿದಂತೆ ಕಾರ್ಖಾನೆಯ ಇಂಡಿ- ಸಿಂದಗಿ ಭಾಗದ ರೈತರು ಷೇರುದಾರರು ಹಾಗೂ ಆಡಳಿತ ಮಂಡಳಿ ಸದಸ್ಯರು,ಕಾರ್ಮಿಕರು ಇದ್ದರು.