Sunday, 17th October 2021

ಎಲ್ಲಾ ಮೊಬೈಲ್ ಫೋನ್‍ಗಳಿಗೆ ಒಂದೇ ವಿಧದ ಚಾರ್ಜರ್: ಯುರೋಪಿಯನ್ ಕಮಿಷನ್ ಆದೇಶ

ಪ್ಯಾರಿಸ್: ಎಲ್ಲಾ ಮೊಬೈಲ್ ಫೋನ್‍ಗಳು, ಐಪಾಡ್ ಹಾಗೂ ಇಯರ್ ಫೋನ್‍ಗಳಿಗೆ ಇನ್ಮುಂದೆ ಒಂದೇ ವಿಧದ ಚಾರ್ಜರ್ ಪೋರ್ಟ್ ಇರಬೇಕೆಂದು ಯುರೋಪಿ ಯನ್ ಕಮಿಷನ್ ಹೊಸ ಆದೇಶ ಹೊರಡಿಸಿರುವುದು ವರದಿಯಾಗಿದೆ.

ಪ್ರಸ್ತುತ ಮಾರುಕಟ್ಟೆಯಲ್ಲಿ ಸಾಕಷ್ಟು ಬಗೆಯ ಚಾರ್ಜರ್ ಗಳಿವೆ. ಪ್ರಮುಖವಾಗಿ ಟೈಪ್ ಸಿ ಯುಎಸ್‍ಬಿ, ಮೈಕ್ರೊ ಯುಎಸ್‍ಬಿ ಚಾರ್ಜರ್ ಗಳಿದ್ದು, ಆಪಲ್‍ ಮೊಬೈಲ್‍ಗಳು ತನ್ನದೇ ವಿಭಿನ್ನ ವಾದ ಚಾರ್ಜರ್ ಹೊಂದಿವೆ. ಜೊತೆಗೆ ಕೆಲವೊಂದು ಐಪಾಡ್, ಇಯರ್ ಫೋನ್ ಗಳಿಗೂ ಪ್ರತ್ಯೇಕ ಚಾರ್ಜರ್ ಗಳಿವೆ. ಇವುಗಳು ಒಂದು ರೀತಿಯಲ್ಲಿ ಗ್ರಾಹಕರಿಗೆ ಕಿರಿಕಿರಿಯನ್ನುಂಟು ಮಾಡುವುದು ಸುಳ್ಳಲ್ಲ. ದೂರದ ಪ್ರಯಾಣದ ವೇಳೆ ಎಲ್ಲಾ ಚಾರ್ಜರ್ ಗಳನ್ನು ಜೊತೆಯಲ್ಲಿ ತೆಗೆದು ಕೊಂಡೊಯ್ಯುವುದು ಕಿರಿಕಿರಿಯಾಗಬಹುದು. ಈ ಸಮಸ್ಯೆಗೆ ಅಂತ್ಯ ಹಾಡುವ ಉದ್ದೇಶದಿಂದ ಯುರೋಪಿಯನ್ ಕಮಿಷನ್ ಹೊಸ ಆದೇಶವೊಂದನ್ನು ಹೊರಡಿಸಿದೆ.

ಯುರೋಪಿಯನ್ ಕಮಿಷನ್ ಪ್ರಸ್ತಾವನೆಯಲ್ಲಿ ಹೇಳಿರುವಂತೆ ಮೊಬೈಲ್ ಫೋನ್, ಟ್ಯಾಬ್ಲೆಟ್ ಮತ್ತು ಹೆಡ್‌ಫೋನ್‌ಗಳಿಗೆ ಸಾಮಾನ್ಯ ಚಾರ್ಜಿಂಗ್ ಪೋರ್ಟ್ ಇರಬೇಕೆಂದು ಸೂಚಿಸಿದೆ. ಹೊಸ ಪ್ರಸ್ತಾಪವನ್ನು ಆಯಪಲ್ ಸಂಸ್ಥೆ ವಿರೋಧಿಸಿದೆ. ಈ ರೀತಿಯ ಕಟ್ಟುನಿಟ್ಟಿನ ನಿಯಂತ್ರಣವು ಇಲೆಕ್ಟ್ರಾನಿಕ್ ಸಾಧನಗಳ ನಾವೀನ್ಯತೆಯನ್ನು ಮೊಟಕು ಗೊಳಿಸುತ್ತದೆ ಎಂದು ಹೇಳಿದೆ.

Leave a Reply

Your email address will not be published. Required fields are marked *