Friday, 2nd December 2022

ಸಚಿವ ಮಲ್ಲಿಕ್ ವಿರುದ್ಧ ಸಮೀರ್ ತಂದೆ ಮಾನನಷ್ಟ ಮೊಕದ್ದಮೆ

ಮುಂಬೈ: ಎನ್’ಸಿಬಿ ವಲಯ ನಿರ್ದೇಶಕ ಸಮೀರ್ ವಾಂಖಡೆ ತಂದೆ ಧ್ಯಾನ್ ದೇವ್ ಮಹಾರಾಷ್ಟ್ರ ಸಚಿವ ನವಾಬ್ ಮಲ್ಲಿಕ್ ವಿರುದ್ಧ ಮಾನನಷ್ಟ ಮೊಕದ್ದಮೆ ಪ್ರಕರಣ ದಾಖಲಿಸಿದ್ದಾರೆ.

ನವಾಬ್ ಮಲಿಕ್ ಸಮೀರ್ ವಾಂಖಡೆ ಕುಟುಂಬವನ್ನು ವಂಚಕರ ಕುಟುಂಬ ಎಂದು ಕರೆದಿದ್ದು, ಅವರ ಧರ್ಮದ ಬಗ್ಗೆಯೂ ಪ್ರಶ್ನಿಸಿದ್ದಾರೆ. ಸಮೀರ್ ಇಡೀ ಕುಟುಂಬದ ವಿರುದ್ಧ ಹಲವು ಆರೋಪಗಳನ್ನು ಮಾಡುತ್ತಿರುವ ಹಿನ್ನೆಲೆಯಲ್ಲಿ ಸಚಿವ ನವಾಬ್ ಮಲ್ಲಿಕ್ ವಿರುದ್ಧ ಬಾಂಬೆ ಹೈಕೋರ್ಟ್ ನಲ್ಲಿ ಧ್ಯಾನ್ ದೇವ್ ವಾಂಖಡೆ 1.25 ಕೋಟಿ ರೂ.ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ.

 

ಸಮೀರ್ ಕುಟುಂಬದ ಸಾಮಾಜಿಕ ಗೌರವ, ಕುಟುಂಬದ ಹೆಸರಿಗೆ ಹಾನಿಯುಂಟು ಮಾಡಿದ್ದು, ಎಂದಿಗೂ ಸರಿಪಡಿಸಲಾಗದ ನಷ್ಟ ವುಂಟಾಗಿದೆ. ನವಾಬ್ ಮಲ್ಲಿಕ್ ಹಾಗೂ ಅವರ ಪಕ್ಷದವರು ವಾಂಖಡೆ ವಿರುದ್ಧ ಮಾತನಾಡುವುದನ್ನು ನಿಲ್ಲಿಸುವಂತೆ ನಿರ್ದೇಶನ ನೀಡಬೇಕು ಎಂದು ಮೊಕದ್ದಮೆಯಲ್ಲಿ ಉಲ್ಲೇಖಿಸಲಾಗಿದೆ.

ಯಾವುದೇ ಸುದ್ದಿ ಪ್ರಸಾರ ಮಾಡದಂತೆ ತಡೆಯೊಡ್ಡುವಂತೆಯೂ ದ್ಯಾನ್ ದೇವ್ ಮನವಿ ಮಾಡಿದ್ದಾರೆನ್ನಲಾಗಿದೆ.