Vishwavani Editorial: ಪುಸ್ತಕ ಮೇಳ: ಸ್ಪೀಕರ್ ನಡೆ ಶ್ಲಾಘನೀಯ
ಕರ್ನಾಟಕದಲ್ಲಿ 60 ಸಾವಿರಕ್ಕೂ ಹೆಚ್ಚು ಮದ್ಯದ ಅಂಗಡಿಗಳಿವೆ. ಆದರೆ ಪುಸ್ತಕ ಮಾರಾಟ ಮಳಿಗೆಗಳು ಜಿಲ್ಲೆಗೆ ಒಂದರಂತೆಯೂ ಇಲ್ಲ. ರಾಜ್ಯದಲ್ಲಿ ಹುಡುಕಾಡಿದರೆ 15 ರಿಂದ 20 ನಗರ ಗಳನ್ನು ಬಿಟ್ಟರೆ, ಉಳಿದ ನಗರಗಳಲ್ಲಿ ಪುಸ್ತಕ ಮಾರಾಟ ಮಳಿಗೆಗಳು ಕಾಣಿಸದಿರುವುದು ವಿಷಾ ದದ ಸಂಗತಿ.

ವಿಧಾನ ಸೌಧದ ಆವರಣದಲ್ಲಿ ಪುಸ್ತಕ ಮೇಳ

ಕರ್ನಾಟಕ ವಿಧಾನಸಭಾ ಸಚಿವಾಲಯವು ದೇಶದಲ್ಲಿಯೇ ಮೊದಲ ಬಾರಿಗೆ ವಿಧಾನ ಸೌಧದ ಆವರಣದಲ್ಲಿ ಪುಸ್ತಕ ಮೇಳವನ್ನು ಆಯೋಜಿಸಿದ್ದು, ಗುರುವಾರದಿಂದ ಐದು ದಿನಗಳ ಕಾಲ ಈ ಪುಸ್ತಕ ಮೇಳ ನಡೆಯಲಿದೆ. ಇದರಲ್ಲಿ ರಾಜ್ಯ ಹಾಗೂ ಅಂತಾರಾಜ್ಯ ಪ್ರಕಾಶಕರು ಭಾಗವಹಿಸುತ್ತಿದ್ದಾರೆ. ಸುಮಾರು 120ಕ್ಕೂ ಹೆಚ್ಚು ಪ್ರಕಾಶಕರು ಭಾಗವಹಿಸು ತ್ತಿರುವ ಪುಸ್ತಕ ಮೇಳದ ಮೂಲಕ ಶಾಸಕಾಂಗವನ್ನು ಸಾಹಿತ್ಯ ಕ್ಷೇತ್ರದ ಹತ್ತಿರಕ್ಕೆ ತೆಗೆದು ಕೊಂಡು ಹೋಗುವ ಹಾಗೂ ಪುಸ್ತಕ ಮೇಳದ ನೆಪದಲ್ಲಿ ಸಾರ್ವಜನಿಕರು, ಸಾಹಿತ್ಯಾಸಕ್ತ ರನ್ನು ವಿಧಾನಸೌಧಕ್ಕೆ ಹತ್ತಿರವಾಗಿಸುವ ಪ್ರಯತ್ನ ಮಾಡಿರುವ ವಿಧಾನಸಭಾಧ್ಯಕ್ಷ ಯು.ಟಿ.ಖಾದರ್ ನಡೆ ಶ್ಲಾಘನೀಯ.ಕನ್ನಡದಲ್ಲಿ ವಿಫಲವಾದ ಸಾಹಿತ್ಯ ಸಂಪತ್ತಿದ್ದರೂ ಯುವ ಪೀಳಿಗೆಯಲ್ಲಿ ಪುಸ್ತಕವನ್ನು ಕೊಂಡು ಓದುವ ಸಂಸ್ಕೃತಿ ಕಡಿಮೆಯಾಗುತ್ತಿದೆ ಎನ್ನುವ ಮಾತು ಕೇಳಿ ಬರುತ್ತಿದೆ.
ಇದನ್ನೂ ಓದಿ: Vishwavani Editorial: ಮೈಮರೆವು ದುಬಾರಿಯಾಗಬಲ್ಲದು
ಕರ್ನಾಟಕದಲ್ಲಿ 60 ಸಾವಿರಕ್ಕೂ ಹೆಚ್ಚು ಮದ್ಯದ ಅಂಗಡಿಗಳಿವೆ. ಆದರೆ ಪುಸ್ತಕ ಮಾರಾಟ ಮಳಿಗೆಗಳು ಜಿಲ್ಲೆಗೆ ಒಂದರಂತೆಯೂ ಇಲ್ಲ. ರಾಜ್ಯದಲ್ಲಿ ಹುಡುಕಾಡಿದರೆ 15 ರಿಂದ 20 ನಗರಗಳನ್ನು ಬಿಟ್ಟರೆ, ಉಳಿದ ನಗರಗಳಲ್ಲಿ ಪುಸ್ತಕ ಮಾರಾಟ ಮಳಿಗೆಗಳು ಕಾಣಿಸದಿರು ವುದು ವಿಷಾದದ ಸಂಗತಿ.
ಇನ್ನು ಕನ್ನಡ ಸಾಹಿತ್ಯ ಪರಿಷತ್ತು, ಪುಸ್ತಕ ಪ್ರಾಧಿಕಾರಗಳಿಂದ ರಿಯಾಯಿತಿ ದರದಲ್ಲಿ ಪುಸ್ತಕ ಖರೀದಿಗೆ ಅವಕಾಶ ನೀಡಲಾಗುತ್ತಿದೆ. ಆದರೆ ಇತರೆ ವಸ್ತುಗಳಿಗೆ ಮಾಡುವ ಮಾರ್ಕೆ ಟಿಂಗ್ ಅನ್ನು ಪುಸ್ತಕದ ವಿಷಯದಲ್ಲಿ ಮಾಡುವ ವಿಫಲವಾಗುತ್ತಿದ್ದೇವೆ.
ತಡವಾಗಿಯಾದರೂ ಸರಕಾರ ವಿಧಾನಸೌಧದಲ್ಲಿ ಪುಸ್ತಕ ಮೇಳವನ್ನು ಹಮ್ಮಿಕೊಳ್ಳುತ್ತಿದೆ. ಕೇವಲ ಮೇಳ ಮಾತ್ರವಲ್ಲದೇ, ಸಂವಾದ, ಪುಸ್ತಕ ಬಿಡುಗಡೆ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುವುದು ಉತ್ತಮ ನಡೆ. ದೈನಂದಿನ ಜಂಜಾಟದಲ್ಲಿ ಮುಳುಗಿ ಹೋಗಿರುವ ನಗರದ ನಾಗರಿಕರಲ್ಲಿ ಸಾಹಿತ್ಯದ ಅಭಿರುಚಿ ಮೂಡಿಸುವ ನಿಟ್ಟಿನಲ್ಲಿ ಈ ತೀರ್ಮಾನ ಸ್ವಾಗತಾರ್ಹ.
ಶಕ್ತಿ ಸೌಧದ ಮಂದೆ ಸಾಹಿತ್ಯದ ತೇರನ್ನು ಎಳೆದು ಈ ಮೇಳವನ್ನು ಯಶಸ್ವಿಗೊಳಿಸುವ ಹೊಣೆ ಈಗ ನಮ್ಮೆಲ್ಲರ ಮೇಲಿದೆ.