Monday, 30th January 2023

ಸ್ಯಾಮ್‌ಸಂಗ್ E.D.G.E. ಕ್ಯಾಂಪಸ್‌ ಪ್ರೋಗ್ರಾಮ್‌ನ ಏಳನೇ ಆವೃತ್ತಿ

ಐಐಎಂ ಬೆಂಗಳೂರು ವಿಜೇತ; ಎನ್‌ಐಡಿ ಬೆಂಗಳೂರು ಮತ್ತು ಐಐಎಫ್‌ಟಿ ರನ್ನರ್ ಅಪ್

ನವೆಂಬರ್: ಭಾರತದ ಅತಿದೊಡ್ಡ ಮತ್ತು ಅತ್ಯಂತ ವಿಶ್ವಾಸಾರ್ಹ ಗ್ರಾಹಕರ ಎಲೆಕ್ಟ್ರಾನಿಕ್ಸ್‌ ಬ್ರ್ಯಾಂಡ್‌ ಸ್ಯಾಮ್‌ಸಂಗ್‌ ತನ್ನ ಕ್ಯಾಂಪಸ್ ಪ್ರೋಗ್ರಾಮ್ ಸ್ಯಾಮ್‌ಸಂಗ್‌ E.D.G.E.ನ ಏಳನೇ ಆವೃತ್ತಿಯನ್ನು ಪೂರ್ತಿಗೊಳಿಸಿದ್ದು, 27 ಅಗ್ರ ಸಂಸ್ಥೆಗಳಿಂದ 9,000 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಐಐಎಂ ಬೆಂಗಳೂರಿನ ಟೀಮ್‌ ಟ್ರಾನ್ಸೆಂಡೆನ್ಸ್‌ನ ಶ್ರೇಯಸ್ ಎಸ್‌, ಅಮೃತಾ ಸಿಂಗ್‌ ಮತ್ತು ಶಿಂಧೆ ಚೈತನ್ಯ ಶರದ್‌ ಮೊದಲ ಬಹುಮಾನವನ್ನು ಗಳಿಸಿದ್ದಾರೆ. ಅವರ ನವೀನ ಮತ್ತು ಅಸಾಂಪ್ರದಾಯಿಕ ಪರಿಹಾರವು ಭಾರತದಲ್ಲಿ ಐಒಟಿ ಸಾಧನಗಳನ್ನು ಗ್ರಾಹಕರು ಅಳವಡಿಸಿಕೊಳ್ಳುವಿಕೆಯನ್ನು ಹೆಚ್ಚಿಸುವಲ್ಲಿ ನೆರವಾಗಲಿದೆ. ಇದು ಜ್ಯೂರಿಗೆ ಹೆಚ್ಚು ಮೆಚ್ಚುಗೆಯಾಗಿದ್ದಯ, 450,000 ನಗದು ಬಹುಮಾನವನ್ನು ಗೆದ್ದುಕೊಂಡಿದೆ. ಸ್ಯಾಮ್‌ಸಂಗ್‌ನ ಫ್ಲಾಗ್‌ಶಿಪ್‌ ಸ್ಮಾರ್ಟ್‌ಫೋನ್‌ಗಳು ಮತ್ತು ಸ್ಯಾಮ್‌ಸಂಗ್‌ನಿಂದ ಪ್ಲೇಸ್‌ಮೆಂಟ್‌ಗೂ ಮೊದಲಿನ ಕೊಡುಗೆಗಳು ಇದರಲ್ಲಿವೆ.

ಸಂಪೂರ್ಣ ಮೋಶನ್ ವೀಡಿಯೋ ಮೂಲಕ ಗೇಮಿಫಿಕೇಶನ್ ಬಳಸಿಕೊಂಡು ಗ್ರಾಹಕರ ಜೊತೆಗೆ ನೇರ ಸಂವಹನ ನಡೆಸುವ ಆಧುನಿಕ ವಿನ್ಯಾಸ ಪರಿಹಾರವನ್ನು ರೂಪಿಸಿದ ಎನ್‌ಐಡಿ ಬೆಂಗಳೂರಿನ ಟೀಮ್ ಸೃಜನ್‌ ಎರಡನೇ ಸ್ಥಾನ ಪಡೆದುಕೊಂಡಿದ್ದಾರೆ. ಇವರು ರೂ. 300,000 ನಗದು ಬಹುಮಾನವನ್ನು ಗೆದ್ದಿದ್ದಾರೆ ಮತ್ತು ಸ್ಯಾಮ್‌ಸಂಗ್‌ನೊಂದಿಗೆ ಪ್ಲೇಸ್‌ಮೆಂಟ್ ಪೂರ್ವ ಸಂದರ್ಶನಗಳನ್ನು ಗೆದ್ದಿದ್ದಾರೆ.

ಐಐಎಫ್‌ಟಿಯ ಟೀಮ್‌ ಜಿ.ಯು.ಜಿ ಮೂರನೇ ಸ್ಥಾನವನ್ನು ಪಡೆದಿದ್ದು, ಇನ್‌ ಸ್ಟೋರ್ ಸ್ಮಾರ್ಟ್ ಹೋಮ್ ಮಾಡೆಲ್ ಮತ್ತು ಮೆಟಾವರ್ಸ್‌ ಎಕ್ಸ್‌ಪೀರಿಯನ್ಸ್‌ ಸ್ಟೋರ್‌ ಮೂಲಕ ಕನೆಕ್ಟೆಡ್‌ ಸಾಧನಗಳ ಪರಿಸರವನ್ನು ಅನುಭವಿಸಲು ಗ್ರಾಹಕರಿಗೆ ಅನುವು ಮಾಡುವ ಸೌಲಭ್ಯವನ್ನು ಇದು ಅಭಿವೃದ್ಧಿಪಡಿಸಿದೆ. ತಂಡವು ರೂ. 150,000 ನಗದು ಬಹುಮಾನವನ್ನು ಗಳಿಸಿದೆ.

ಕಳೆದ ಎರಡು ವರ್ಷಗಳಿಂದ ಕಾರ್ಯಕ್ರಮವನ್ನು ಆನ್‌ಲೈನ್‌ನಲ್ಲಿ ನಡೆಸಲಾಗುತ್ತಿತ್ತು. ಆದರೆ, 2022 ಆವೃತ್ತಿಯ ಸ್ಯಾಮ್‌ಸಂಗ್‌ E.D.G.E. ಅನ್ನು ಭೌತಿಕವಾಗಿ ನಡೆಸಲಾಯಿತು. ಗುರುಗ್ರಾಮದಲ್ಲಿ ನಡೆದ ಫಿನಾಲೆಯಲ್ಲಿ ಸ್ಯಾಮ್‌ಸಂಗ್‌ ಸೌತ್‌ವೆಸ್ಟ್ ಏಷ್ಯಾದ ಅಧ್ಯಕ್ಷರು ಮತ್ತು ಸಿಇಒ ಕೆನ್‌ ಕಾಂಗ್‌ ಭಾಗವಹಿಸಿದ್ದರು ಮತ್ತು ಸ್ಯಾಮ್‌ಸಂಗ್‌ ಇಂಡಿಯಾದ ಇತರ ಹಿರಿಯ ನಾಯಕರು ಭಾಗವಹಿಸಿದ್ದರು.

“ಸ್ಯಾಮ್‌ಸಂಗ್‌ನಲ್ಲಿ ಬುದ್ಧಿವಂತ ಯುವಕರನ್ನು ನಾವು ಪೋಷಿಸುತ್ತೇವೆ. ಅವರಲ್ಲಿನ ನಿಜವಾದ ಸಾಮರ್ಥ್ಯವನ್ನು ಹೊರತರಲು ನಾವು ಈ ಮೂಲಕ ನೆರವಾಗುತ್ತೇವೆ. ಸ್ಯಾಮ್‌ಸಂಗ್ E.D.G.E.ಒಂದು ಪ್ಲಾಟ್‌ಫಾರಂ ಆಗಿದ್ದು, ನಿಜವಾದ ಬದಲಾವಣೆಗಳನ್ನು ಮಾಡಲು ಬಯಸುವ ವಿದ್ಯಾರ್ಥಿಗಳ ಕ್ರಿಯಾಶೀಲ ಮತ್ತು ನವೀನ ಪರಿಕಲ್ಪನೆಗಳಿಗೆ ಜೀವ ತುಂಬುವ ಪ್ರಯತ್ನವನ್ನು ಮಾಡಲಿದೆ. ಭೌತಿಕ ಕಾರ್ಯಕ್ರಮವನ್ನು ಪುನಃ ಆರಂಭಿಸುವುದು ಮತ್ತು ಯುವಕರ ಜೊತೆಗೆ ಸಂಪರ್ಕ ಸಾಧಿಸುವುದಕ್ಕೆ ನಾವು ಉತ್ಸಾಹಿತರಾಗಿದ್ದೇವೆ. ಈ ವರ್ಷದ ಭಾರತದಲ್ಲಿನ ಕ್ಯಾಂಪಸ್‌ಗಳಲ್ಲಿ ಭಾಗವಹಿಸುವ ಮತ್ತು ಪರಿಕಲ್ಪನೆಯನ್ನು ರೂಪಿಸುವುದಕ್ಕೆ ಅಪಾರ ಉತ್ಸಾಹ ಮೂಡಿಬಂದಿತ್ತು” ಎಂದು ಸ್ಯಾಮ್‌ಸಂಗ್ ಇಂಡಿಯಾದ ಮಾನವ ಸಂಪನ್ಮೂಲಗಳ ವಿಭಾಗದ ಮುಖ್ಯಸ್ಥ ಸಮೀರ್‌ ವಧವನ್ ಹೇಳಿದ್ದಾರೆ.

ಸ್ಯಾಮ್‌ಸಂಗ್ E.D.G.E. ಎಂಬುದು ರಾಷ್ಟ್ರಾದ್ಯಂತ ನಡೆಯುವ ಕ್ಯಾಂಪಸ್ ಪ್ಲಾಟ್‌ಫಾರಂ ಆಗಿದ್ದು, ವಿದ್ಯಾರ್ಥಿಗಳಿಗೆ ತಮ್ಮೊಳಗಿನ ಉದ್ಯಮಶೀಲತೆ, ವ್ಯೂಹಾತ್ಮಕ ಚಿಂತನೆ ಮತ್ತು ನಾಯಕತ್ವ ಕೌಶಲಗಳನ್ನು ಪ್ರದರ್ಶಿಸುವುದಕ್ಕೆ ಉತ್ತಮ ಅವಕಾಶವನ್ನು ಒದಗಿಸುತ್ತದೆ. 2016 ರಲ್ಲಿ ಆರಂಭವಾಗಿರುವ ಕಾರ್ಯಕ್ರಮದಲ್ಲಿ ಅಗ್ರ ಬ್ಯುಸಿನೆಸ್ ಸ್ಕೂಲ್‌ಗಳು, ಇಂಜಿನಿಯ ರಿಂಗ್‌ ಮತ್ತು ಡಿಸೈನ್ ಇನ್‌ಸ್ಟಿಟ್ಯೂಟ್‌ಗಳ ಯುವಕರು ಒಟ್ಟಾಗಿ ಕಾಣಿಸಿಕೊಳ್ಳುತ್ತಾರೆ ಮತ್ತು ಸವಾಲುಗಳಿಗೆ ಪರಿಹಾರವನ್ನು ಒದಗಿಸುತ್ತಾರೆ. ದೇಶದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು, ಅರ್ಥವತ್ತಾದ ಒಳನೋಟಗಳನ್ನು ವಿನಿಮಯ ಮಾಡಿಕೊಳ್ಳಲು ಮತ್ತು ತಮ್ಮ ವೃತ್ತಿ ಜೀವನವನ್ನು ಆರಂಭಿಸಲು ಒಂದು ಅವಕಾಶವನ್ನು ಈ ಕಾರ್ಯಕ್ರಮವು ಒದಗಿಸುತ್ತದೆ.

2 ತಿಂಗಳ ಕಾರ್ಯಕ್ರಮವನ್ನು ಮೂರು ಸುತ್ತಿನ ಕಟ್ಟುನಿಟ್ಟಿನ ಮೌಲ್ಯಮಾಪನದ ಮೂಲಕ ನಡೆಸಲಾಗುತ್ತದೆ. ಈ ವರ್ಷ 27 ಕಾಲೇಜುಗಳ 2700 ಕ್ಕೂ ಹೆಚ್ಚು ತಂಡಗಳು ಭಾಗವಹಿಸಿದ್ದವು. ಮೊದಲ ಸುತ್ತಿನಲ್ಲಿ ಪ್ರತಿ ತಂಡವೂ ಸಾಕಷ್ಟು ಸಂಶೋಧನೆ ಮತ್ತು ಪರಿಕಲ್ಪನೆಯ ರೂಪಣೆಯ ನಂತರದಲ್ಲಿ ಎಕ್ಸೆಕ್ಯೂಟಿವ್ ಸಾರಾಂಶವನ್ನು ಪ್ರಸ್ತುತಪಡಿಸಬೇಕಿರುತ್ತದೆ.

ಇದನ್ನು ಮೌಲ್ಯಮಾಪನ ಮಾಡಿದ ನಂತರ, ಪ್ರತಿ ಕ್ಯಾಂಪಸ್‌ನಿಂದ ಒಂದು ತಂಡವನ್ನು ಆಯ್ಕೆ ಮಾಡಲಾಗುತ್ತದೆ. ಅವರು ಪ್ರಕರಣ ಅಧ್ಯಯನ ನಡೆಸಿ, ವಿವರವಾದ ಪರಿಹಾರವನ್ನು ಪ್ರಾದೇಶಿಕ ಸುತ್ತಿನಲ್ಲಿ ಪ್ರಸ್ತುತಪಡಿಸುತ್ತಾರೆ. ಈ ವರ್ಷ ಒಟ್ಟು ಒಂಬತ್ತು ತಂಡಗಳನ್ನು ಶಾರ್ಟ್‌ಲಿಸ್ಟ್‌ ಮಾಡಲಾಗಿತ್ತು ಮತ್ತು ರಾಷ್ಟ್ರೀಯ ಸುತ್ತಿನಲ್ಲಿ ಅಗ್ರ 3 ಸ್ಥಾನಗಳಿಗೆ ಸ್ಫರ್ಧಿಸಲು ಸ್ಯಾಮ್‌ ಸಂಗ್‌ ಲೀಡರ್‌ಗಳು ಮಾರ್ಗದರ್ಶನ ನೀಡಿದ್ದರು.

error: Content is protected !!