Friday, 24th September 2021

ಸ್ಯಾಂಡಲ್ ವುಡ್ ಹಿರಿಯ ನಿರ್ಮಾಪಕ ಸಿ.ಜಯರಾಮ್ ಇನ್ನಿಲ್ಲ

ಬೆಂಗಳೂರು : ಅನಾರೋಗ್ಯದಿಂದ ಬಳಲುತ್ತಿದ್ದ ಸ್ಯಾಂಡಲ್ ವುಡ್ ಹಿರಿಯ ನಿರ್ಮಾಪಕ ಸಿ. ಜಯರಾಮ್ ಅವರು ಗುರುವಾರ ಬೆಳಗಿನ ಜಾವ ಬೆಂಗಳೂರಿನಲ್ಲಿ ನಿಧನರಾದರು.

ಸಿ.ಜಯರಾಮ್​ ಅನೇಕ ಸ್ಟಾರ್​ ನಟರ ಸಿನಿಮಾಗಳಿಗೆ ಅವರು ಬಂಡವಾಳ ಹೂಡಿದ್ದರು. ಶಂಕರ್​ ನಾಗ್​ ನಟನೆಯ ಆಟೋ ರಾಜ, ಅನಂತ್​ ನಾಗ್​ ನಟನೆಯ ನಾ ನಿನ್ನ ಬಿಡಲಾರೆ, ವಿಷ್ಣುವರ್ಧನ್​ ಹಾಗೂ ರಜನಿಕಾಂತ್​ ನಟಿಸಿದ್ದ ಗಲಾಟೆ ಸಂಸಾರ ಶ್ರೀನಾಥ್​-ಆರತಿ ಜೋಡಿಯ ಪಾವನ ಗಂಗಾ ಮುಂತಾದ ಸಿನಿಮಾ ಗಳನ್ನು ಸಿ. ಜಯರಾಮ್​ ನಿರ್ಮಾಣ ಮಾಡಿದ್ದರು.

ಸಿ. ಜಯರಾಮ್​ ಅವರ ಪುತ್ರ ಮಿಲನ ಪ್ರಕಾಶ್ ಕೂಡ​ ಸ್ಯಾಂಡಲ್ ವುಡ್ ನಲ್ಲಿ ಯಶಸ್ವಿ ನಿರ್ದೇಶಕರಾಗಿದ್ದು, ಪುನೀತ್ ರಾಜ್ ಕುಮಾರ್ ನಟನೆಯ ಮಿಲನ, ದರ್ಶನ್​ ಅಭಿನಯದ ತಾರಕ್​ ಮುಂತಾದ ಸಿನಿಮಾಗಳಿಗೆ ನಿರ್ದೇಶನ ಮಾಡಿದ್ದಾರೆ.

ಸಿ. ಜಯರಾಮ್ ಅವರ ಅಂತ್ಯಕ್ರಿಯೆ ಮಧ್ಯಾಹ್ನ 12 ಗಂಟೆಗೆ ಸುಮ್ಮನಹಳ್ಳಿ ಸ್ಮಶಾನದಲ್ಲಿ ನೆರವೇರಲಿದೆ.

Leave a Reply

Your email address will not be published. Required fields are marked *