Friday, 24th March 2023

ಅಧ್ಯಕ್ಷರಾಗಿ ಸಂದೇಶ ಭಟ್ ಬೆಳಖಂಡ ಅವಿರೋಧ ಆಯ್ಕೆ

ಶಿರಸಿ: ಶಿರಸಿ ತಾಲೂಕಾ ಕಾರ್ಯನಿರತ ಪತ್ರಕರ್ತರ ಸಂಘದ ನೂತನ ಅಧ್ಯಕ್ಷರಾಗಿ ಸಂದೇಶ ಭಟ್ ಬೆಳಖಂಡ ಅವಿರೋಧವಾಗಿ ಆಯ್ಕೆಯಾದರು.

ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ನಡೆದ ಚುನಾವಣಾ ಪ್ರಕ್ರಿಯೆಯಲ್ಲಿ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾ ಯಿತು. ಸಂಘದ ಕಾರ್ಯದರ್ಶಿಯಾಗಿ ಕೃಷ್ಣಮೂರ್ತಿ ಕೆರೆಗದ್ದೆ, ಉಪಾಧ್ಯಕ್ಷರಾಗಿ ವಿನುತಾ ಹೆಗಡೆ ಹಾಗೂ ಖಜಾಂಚಿಯಾಗಿ ಮಹಾದೇವ ನಾಯ್ಕ ಅವರ ಅವಿರೋಧ ಆಯ್ಕೆಯನ್ನು ಘೋಷಣೆ ಮಾಡಲಾಯಿತು.

ಸಂಘದ ಕಾರ್ಯಕಾರಿ ಸದಸ್ಯರಾಗಿ ರಾಜೇಂದ್ರ ಶಿಂಗನಮನೆ, ರಾಘವೇಂದ್ರ ಬೆಟ್ಟಕೊಪ್ಪ, ಮಂಜುನಾಥ ಸಾಯೀಮನೆ, ಗಣಪತಿ ಹೆಗಡೆ ಹಾಗೂ ಪ್ರದೀಪ ಶೆಟ್ಟಿ ಆಯ್ಕೆಯಾದರು.

ಈ ವೇಳೆ ಮಾತನಾಡಿದ ನೂತನ ಅಧ್ಯಕ್ಷ ಸಂದೇಶ ಭಟ್, ಸಂಘದ ಉನ್ನತಿಗೆ, ಶ್ರೇಯಸ್ಸಿಗೆ ಅನುಕೂಲ ಆಗುವಂತೆ ಉತ್ತಮ ರೀತಿಯಲ್ಲಿ ಕೆಲಸ ಮಾಡಲಾಗುವುದು ಎಂದು ಭರವಸೆ ನೀಡಿದರು. ಅಲ್ಲದೇ ಉತ್ತಮ ಸಂಘಟನೆ ಮಾಡಿ ಪತ್ರಕರ್ತರ ಸಮಸ್ಯೆಗಳಿಗ ಸ್ಪಂದನೆ ಮಾಡುವುದಾಗಿ ತಿಳಿಸಿದರು.

ಚುನಾವಣಾಧಿಕಾರಿಯಾಗಿ ನಿವೃತ್ತ ಪ್ರಾಂಶುಪಾಲ ಕೆ.ಎನ್.ಹೊಸ್ಮನಿ ಕಾರ್ಯನಿರ್ವಹಿಸಿದರು. ಸಂಘದಲ್ಲಿ ಎಲ್ಲರ ಸಹಕಾರ ದೊಂದಿಗೆ ಸುರಳಿತ ವಾಗಿ ಆಯ್ಕೆ ಪ್ರಕ್ರಿಯೆ ನಡೆದಿರುವುದನ್ನು ಹಿಸ್ಮನಿ ಅಭಿನಂದಿಸಿದರು. ನಂತರ ಪತ್ರಕರ್ತರಿಂದ ಚುನಾವಣಾಧಿ ಕಾರಿಗಳನ್ನು ಸನ್ಮಾನಿಸಲಾಯಿತು.

ಚುನಾವಣೆಯಲ್ಲಿ ವೀಕ್ಷಕರಾಗಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಸುಬ್ರಾಯ ಭಟ್ ಬಕ್ಕಳ ಉಪಸ್ಥಿತರಿದ್ದರು. ಜಿಲ್ಲಾ ಪ್ರದಾನ ಕಾರ್ಯದರ್ಶಿ ಸುಮಂಗಲಾ ಹೊನ್ನೆಕೊಪ್ಪ, ಜಿಲ್ಲಾ ಖಜಾಂಚಿ ರಾಜೇಂದ್ರ ಹೆಗಡೆ ಶಿಂಗನಮನೆ ಸೇರಿದಂತೆ ವಿವಿಧ ಪತ್ರಕರ್ತರು ಹಾಜರಿದ್ದರು.‌

error: Content is protected !!