Thursday, 19th May 2022

ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ

ಸ್ವಾತಂತ್ರ‍್ಯದ ಆ ಕ್ಷಣಗಳು (ಭಾಗ- ೭)

ಡಾ.ಉಮೇಶ್ ಪುತ್ರನ್

ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಸಂಗೊಳ್ಳಿ ಗ್ರಾಮದ ಕುರುಬರ ಮನೆತನದ ಭರಮಪ್ಪ ಮತ್ತು ಕೆಂಚಮ್ಮಾಜಿಯವರ ಪುತ್ರನಾಗಿ ಆಗಸ್ಟ್ 15, 1796 ರಂದು ಜನಿಸಿದ ಸಂಗೊಳ್ಳಿ ರಾಯಣ್ಣ , ಸೈನಿಕನಾಗಿ ಕಿತ್ತೂರು ಸೇನೆಯನ್ನು ಸೇರಿದ.

ರಾಜ ಮಲ್ಲರುದ್ರ ಸರ್ಜನಿಗೆ ಸ್ವಾಮಿ ನಿಷ್ಠನಾಗಿ ಇದ್ದುದರಿಂದ ಸೇನೆಯಲ್ಲಿ ಬಡ್ತಿ ಹೊಂದುತ್ತ ಸಾಗುತ್ತಾನೆ. ಮಲ್ಲರುದ್ರ ಸರ್ಜಾ ತೀರಿಹೋದ ನಂತರ 1824 ರಲ್ಲಿ ನಡೆದ ಕಿತ್ತೂರು ಕದನದಲ್ಲಿ ಬ್ರಿಟಿಷರ ವಿರುದ್ಧ ಅಪ್ರತಿಮ ಸಾಹಸವನ್ನು ತೋರುತ್ತಾನೆ. ಚೆನ್ನಮ್ಮ ರಾಣಿಗೆ ಹೆಗಲಿಗೆ ಹೆಗಲು ಕೊಟ್ಟು, ದತ್ತು ಪುತ್ರನಾದ ಶಿವಲಿಂಗಪ್ಪನನ್ನು ಅಧಿಕಾರದ ಗದ್ದುಗೆಯಲ್ಲಿ ಕೂರಿಸುವ ಸಂಕಲ್ಪ ತೊಡುತ್ತಾನೆ. 1824ರ ಯುದ್ಧದಲ್ಲಿ ರಾಯಣ್ಣನನ್ನು ಜೈಲಿಗೆ ಹಾಕಲಾಗಿತ್ತು, ಮತ್ತು ನಂತರ ಬಿಡುಗಡೆಗೊಳಿಸಲಾಯಿತು.

21 ಫೆಬ್ರವರಿ, 1829 ರಂದು ರಾಣಿ ಚೆನ್ನಮ್ಮ ಸೆರೆಮನೆಯಲ್ಲಿ ಮಡಿದ ನಂತರ ಕೂಡ ಬ್ರಿಟಿಷರ ವಿರುದ್ಧ ತನ್ನ ಯುದ್ಧವನ್ನು ಮುಂದುವರಿಸುತ್ತಾನೆ. ಸ್ಥಳೀಯ ಜನರನ್ನು ಒಟ್ಟುಗೂಡಿಸಿ ಗೆರಿ ಯುದ್ಧವನ್ನು ಪ್ರಾರಂಭಿಸುತ್ತಾನೆ. ಒಂದು ಕಡೆಯಿಂದ ಇನ್ನೊಂದು ಕಡೆಗೆ ರಹಸ್ಯವಾಗಿ ಸಾಗುವ ಇವನ ಗೆರಿ ಸೈನ್ಯವು ಕಂಡಕಂಡಲ್ಲಿ ಸರಕಾರಿ ಕಚೇರಿಗಳನ್ನು ಸುಟ್ಟು ಹಾಕುತ್ತದೆ. ಬ್ರಿಟಿಷ್ ಸೇನಾ ತುಕಡಿಗಳ ಮೇಲೆ ಹೊಂಚುದಾಳಿ ಪ್ರಾರಂಭಿಸಿ ಅವರನ್ನು ಮುಗಿಸಿಬಿಡುತ್ತದೆ. ಬ್ರಿಟಿಷರ ಮತ್ತು ಜಮೀನುದಾರರ ಸಂಪತ್ತನ್ನು ದೋಚಿ, ಅದನ್ನು ಬಡವರಿಗೆ ಹಂಚುತ್ತದೆ.

ರಾಯಣ್ಣ ಬ್ರಿಟಿಷರಿಗೆ ತಲೆನೋವಾಗಿ ಪರಿಣಮಿಸಿದ. ಎಷ್ಟೇ ಪ್ರಯತ್ನ ಪಟ್ಟರೂ ಈತನನ್ನು ಹಿಡಿಯಲು ಸಾಧ್ಯ ವಾಗಲೇ ಇಲ್ಲ. ಈತನ ಆಸ್ತಿಗಳನ್ನು ಸರಕಾರ ಮುಟ್ಟುಗೋಲು ಹಾಕುತ್ತದೆ. ಆದರೂ ಕೂಡ ರಾಣಿಯ ದತ್ತು ಪುತ್ರ ಶಿವಲಿಂಗಪ್ಪನನ್ನು ಗದ್ದುಗೆಯ ಮೇಲೆ ಕುಳ್ಳಿಸುವ ಈತನ ಛಲ ಮಾತ್ರ ಕಡಿಮೆಯಾಗಲಿಲ್ಲ. ರಾಯಣ್ಣ ನನ್ನು ಹಿಡಿಯಲು ಸಾಧ್ಯವಾಗದೇ ಇದ್ದಾಗ ಬ್ರಿಟಿಷರು ಒಂದು ಉಪಾಯ ಹೂಡಿದರು. ಈತನ ಚಿಕ್ಕಪ್ಪ ಲಿಂಗಣ್ಣ ಗೌಡನಿಗೆ ಆಮಿಷ ತೋರಿಸಿ ರಾಯಣ್ಣನನ್ನು ಹಿಡಿದು ಕೊಡುವಂತೆ ಹೇಳಿದರು. ಅಂದು ಏಪ್ರಿಲ್ 8, 1830. ರಾಯಣ್ಣ ಸ್ನಾನಕ್ಕಾಗಿ ಆಯುಧವನ್ನು ತೆಗೆದಿಟ್ಟು ಹೋಗಿದ್ದ. ಆಗ ಲಿಂಗಣ್ಣ ಗೌಡ ಹಾಗೂ ಆತನ ಸಹಚರರು ಬಂದು ರಾಯಣ್ಣನನ್ನು ಹಿಂದಿನಿಂದ ಕೈ ಮತ್ತು ಕಾಲು ಕಟ್ಟಿ ಬ್ರಿಟಿಷರಿಗೆ ಒಪ್ಪಿಸಿದರು. ಈ ಕಾರ್ಯ ಮಾಡಿದ್ದಕ್ಕೆ ಲಿಂಗಣ್ಣ ಗೌಡನಿಗೆ 300 ಬಹುಮಾನ ನೀಡಿದ್ದಲ್ಲದೇ, ಕೆಲವು ಹಳ್ಳಿಗಳನ್ನು ದಾನ ನೀಡಿದರು.

ಬ್ರಿಟಿಷರು ರಾಯಣ್ಣನನ್ನು ಜನವರಿ 26, 1831ರಂದು ಬೆಳಗಾವಿಯ ಹತ್ತಿರದ ನಂದಗಡದ ಸಮೀಪ ಸಾರ್ವಜನಿಕವಾಗಿ ಆಲದ ಮರಕ್ಕೆ ನೇಣು ಹಾಕಿದರು.
ಕೆಳದಿ ಸಿಂಹಾಸನವನ್ನು ಏರಬೇಕಾಗಿದ್ದ ಶಿವಲಿಂಗಪ್ಪನನ್ನು ಸೆರೆಮನೆಗೆ ತಳ್ಳಲಾಯಿತು. ರಾಯಣ್ಣನ ಸಂಗಾತಿಗಳಾದ ರುದ್ರನಾಯಕ, ಎಲ್ಲಾ ನಾಯಕ, ಅಪ್ಪಾಜಿ ಮುಂತಾದ ಆರು ಜನರನ್ನು ಜೀವಾವಽ ಶಿಕ್ಷೆ ನೀಡಿ ಸಮುದ್ರದಾಚೆಗೆ ಕಳಿಸಿದರು. ಸಂಗೊಳ್ಳಿ ರಾಯಣ್ಣನ ಸಮಾಧಿಯ ಮೇಲೆ ಅದೇ ಗ್ರಾಮದ ಚನ್ನಬಸವಣ್ಣ ಅಂದು ನೆಟ್ಟ ಆಲದ ಸಸಿ, ಇಂದಿಗೂ ಕೂಡ ಇದೆ. ಇವತ್ತು ಇದು ಹೆಮ್ಮರವಾಗಿ ಬೆಳೆದು ರಾಷ್ಟ್ರಾಭಿಮಾನದ ಸಂಕೇತವಾಗಿದೆ.

ರಾಯಣ್ಣನ ಜೀವನ ಆಧಾರಿತ ಚಲನಚಿತ್ರ 1967 ರಲ್ಲಿ ಹಾಗೂ ಮತ್ತೆ ಪುನಃ 2002ರಲ್ಲಿ ಹೊರಬಂದಿತ್ತು. ಉತ್ತರ ಕರ್ನಾಟಕದಲ್ಲಿ ಗೀಯ ಗೀಯ ಗಾಗಿಯ ಗೀಯ ಹಾಡಿನ ಮೂಲಕ ರಾಯಣ್ಣನ ಶೌರ್ಯವನ್ನು ಇವತ್ತಿಗೂ ಜನ ಹಾಡಿ ಹೊಗಳುತ್ತಿದ್ದಾರೆ. ಈತನ ಕಂಚಿನ ಆಳೆತ್ತರದ ವಿಗ್ರಹ ಬೆಂಗಳೂರು ರೈಲ್ವೆ ನಿಲ್ದಾಣ ದಲ್ಲಿ ಕಾಣಸಿಗುತ್ತದೆ. ಅಷ್ಟೇ ಅಲ್ಲ, ಈ ರೈಲ್ವೆ ನಿಲ್ದಾಣಕ್ಕೆ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಎಂದು ಕೂಡ ಹೆಸರಿಡಲಾಗಿದೆ.

ಸ್ವಾತಂತ್ರ್ಯೋತ್ಸವದಂದು ಹುಟ್ಟಿ (ಆಗಸ್ಟ್ 15), ಪ್ರಜಾಪ್ರಭುತ್ವ ದಿನದಂದು (ಜನವರಿ 26) ವೀರಮರಣವನ್ನಪ್ಪಿದ ರಾಯಣ್ಣ, ನಾವೆಲ್ಲ ನೆನಪಿಡಬೇಕಾದ
ಭಾರತ ಸ್ವಾತಂತ್ರ್ಯ ಸಂಗ್ರಾಮದ ಒಬ್ಬ ಧೀರ ನಾಯಕ. ಮೈಸೂರಿನ ರಾಕೆಟ್‌ಗಳು 1780ರ ನಂತರ ಹೈದರಾಲಿ ಮತ್ತು ಟಿಪ್ಪು ಸುಲ್ತಾನ್ ಮಾಡಿದ ಎಲ್ಲಾ ಯುದ್ಧಗಳಲ್ಲಿ ಮೈಸೂರಿನ ರಾಕೆಟ್ ಪ್ರಮುಖ ಪಾತ್ರ ವಹಿಸಿದೆ. ಏನಿದು ಮೈಸೂರು ರಾಕೆಟ, ಆಶ್ಚರ್ಯವಾಯಿತೆ? ರಾಕೆಟ್‌ಗಳು ಯುರೋಪ್ ಮತ್ತು ಅಮೆರಿಕಾ ದೇಶಗಳಲ್ಲಿ ಆಗಲೇ ಪ್ರಚಲಿತವಾಗಿದ್ದರೂ ಕೂಡ ಮೈಸೂರು ರಾಕೆಟ್‌ನಷ್ಟು ಶಕ್ತಿಶಾಲಿ ಆಗಿರಲಿಲ್ಲ. ಇದಕ್ಕೆ ಕಾರಣ ಏನೆಂದರೆ ಇದರ ನಳಿಕೆಯನ್ನು ಮೆದು ಕಬ್ಬಿಣದಿಂದ ಮಾಡಲಾಗಿತ್ತು. ಅಲ್ಲಿಯ ವರೆಗೆ ಬಿದಿರಿನ ನಳಿಕೆ ಇದ್ದಿತ್ತು. ಕಬ್ಬಿಣ ತಂತ್ರeನ ಇಲ್ಲಿ ಆಗ ಅತ್ಯುತ್ತಮವಾಗಿತ್ತು.

ಇದರ ನಳಿಕೆಯು ಸುಮಾರು 8 ಇಂಚು ಉದ್ದ ಹಾಗೂ 3 ಇಂಚು ವ್ಯಾಸವನ್ನು ಹೊಂದಿದೆ. ಇದರ ಒಳಗೆ ಒಂದು ಪೌಂಡ್ ಸ್ಫೋಟಕ ತುಂಬಿಸಿದರೆ ಅದು ಸುಮಾರು ಒಂದು ಕಿಲೋಮೀಟರ್ ತನಕ ಸಾಗಿ, ಸಿಡಿಯುತ್ತಿತ್ತು. ಇದಕ್ಕೆ ಹರಿತವಾದ ಖಡ್ಗವನ್ನು ಕೂಡ ಜೋಡಿಸಿರುತ್ತಾರೆ. ಅದು ಕೂಡ ದೂರದವರೆಗೆ ಹಾರಿ ವೈರಿಗಳಿಗೆ ಘಾಸಿ ಮಾಡಬಲ್ಲದು. ಎರಡನೆಯ ಆಂಗ್ಲೋ-ಮೈಸೂರು ಯುದ್ಧದಲ್ಲಿ ಹೈದರಾಲಿ ಪೊಳಿಲೂರಿನಲ್ಲಿ ಹೋರಾಡುವಾಗ ಈತನ ಒಂದು ರಾಕೆಟ್
ಕರ್ನಲ್ ವಿಲಿಯಂ ಬೈಲಿಯ ಸೋಟಕ ತುಂಬಿದ ಕೋಣೆಗೆ ತಗುಲಿ, ಆತನಲ್ಲಿದ್ದ ಎಲ್ಲಾ ಸ್ಪೋಟಕಗಳನ್ನು ನಾಶ ಪಡಿಸಲಾಯಿತು. ಇದು ಬ್ರಿಟಿಷರ ಹೀನಾಯ ಸೋಲಿಗೆ ಕೂಡ ಕಾರಣವಾಯಿತು.

1801 ರಲ್ಲಿ ರಾಯಲ್ ವೂಲ್ ವಿಚ್ ಆರ್ಸೆನಲ್ ಎನ್ನುವವನು ಮೈಸೂರು ರಾಕೆಟ್ ಬಗ್ಗೆ ಅಧ್ಯಯನ ಮಾಡಿ, ಅದನ್ನು ಇನ್ನೂ ಹೆಚ್ಚು ಅಭಿವೃದ್ಧಿಪಡಿಸಲು ಪ್ರಯತ್ನಿಸಿದ. ವಿಲಿಯಂ ಕಾಂಗ್ರೀವ್ ಎನ್ನುವವನು 1802 ರಲ್ಲಿ ರಾಕೆಟ್ ಬಗ್ಗೆ ಕ್ರಮಬದ್ಧದ ಅಧ್ಯಯನವನ್ನು ಮಾಡಿ ಮತ್ತೂ ಹೆಚ್ಚು ಸಂಶೋಧನೆ ಮಾಡಿದ. ಇದನ್ನು1812ರ ವಾಟರ್‌ಲೂ ನೆಪೋಲಿಯನ್ ವಿರುದ್ಧ ಯುದ್ಧದಲ್ಲಿ ಬ್ರಿಟಿಷರು ಉಪಯೋಗಿಸಿ ವಿಜಯಿಯಾದರು. ಶಿವಮೊಗ್ಗ ಜಿಲ್ಲೆಯಲ್ಲಿ ಟಿಪ್ಪು ಸುಲ್ತಾನ್ ಕಾಲದ 102  ಉಪಯೋಗಿಸದೇ ಇರುವ ರಾಕೆಟ್‌ಗಳು 2017ರಲ್ಲಿ ಪತ್ತೆಯಾಗಿವೆ. (ಮುಂದುವರಿಯುವುದು