Tuesday, 7th December 2021

ಚೀನಾ ವಿರುದ್ಧ ಸರ್ಜಿಕಲ್ ಸ್ಟ್ರೈಕ್ ನಡೆಸಿ: ರಾವತ್ ಸವಾಲು

ಮುಂಬಯಿ : ಚೀನಾ ವಿರುದ್ಧ ಕೇಂದ್ರ ಸರಕಾರ ಸರ್ಜಿಕಲ್ ಸ್ಟ್ರೈಕ್ ನಡೆಸಿ ಸಾಮರ್ಥ್ಯ ತೋರಿಸಲಿ ಎಂದು ಶಿವಸೇನಾ ನಾಯಕ ಸಂಜಯ್ ರಾವತ್ ಸವಾಲು ಹಾಕಿದ್ದಾರೆ.

ರಾವತ್ ಅವರು, ಸದ್ಯ ಕಾಶ್ಮೀರದಲ್ಲಿ ಸ್ಥಿತಿ ಚಿಂತಾಜನಕವಾಗಿದೆ. ಕೇಂದ್ರ ಸರಕಾರ ಅಮಾಯಕರು, ವಲಸಿ ಗರು ಮತ್ತು ಕಾರ್ಮಿಕರ ಹತ್ಯೆಗಳನ್ನು ತಡೆಯಲು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಕಾಶ್ಮೀರಿ ಪಂಡಿತರು , ಬಿಹಾರಿಗಳು ಸಿಖ್ ಜನಾಂಗದವರ ಮೇಲೆ ದಾಳಿ ಮಾಡಲಾಗುತ್ತಿದೆ. ನೀವು ಪಾಕಿಸ್ತಾನಕ್ಕೆ ಸರ್ಜಿಕಲ್ ಸ್ಟ್ರೈಕ್ ಮಾಡುತ್ತೀರಿ, ಚೀನಾದ ಮೇಲೂ ಸರ್ಜಿಕಲ್ ಸ್ಟ್ರೈಕ್ ನಡೆಯಲಿ. ಜಮ್ಮು ಮತ್ತು ಕಾಶ್ಮೀರ, ಲಡಾಕ್ ನಲ್ಲಿನ ಸ್ಥಿತಿಗತಿಯ ಬಗ್ಗೆ ರಕ್ಷಣಾ ಸಚಿವರಾಗಲಿ ಗೃಹ ಸಚಿವರಾಗಲಿ ದೇಶಕ್ಕೆ ಮಾಹಿತಿ ತಿಳಿಸಲಿ ಎಂದು ರಾವತ್ ಹೇಳಿರುವುದಾಗಿ  ವರದಿಯಾಗಿದೆ.