Friday, 30th September 2022

ಸರ್ಕಾರದಿಂದ e-ಸಂಜೀವಿನಿ ಟೆಲಿಮೆಡಿಸಿನ್ ಯೋಜನೆ

*ಕೊರೋನಾ ಮಧ್ಯೆ ಸರ್ಕಾರದಿಂದ ಹೊಸ ಯೋಜನೆ

ಚಿಕ್ಕಬಳ್ಳಾಪುರ: ಕೊರೋನಾ ಸೋಂಕು ಕಾಣಿಸಿಕೊಂಡರೂ ಚಿಕಿತ್ಸೆಗಾಗಿ ಆಸ್ಪತ್ರೆಗೆ ಬರಲು ರೋಗಿಗಳು ಹಿಂದೇಟು ಹಾಕುತ್ತಿರುವ ಹಿನ್ನೆಲೆಯಲ್ಲಿ ಚಿಕ್ಕಬಳ್ಳಾಪುರದಲ್ಲಿ ಆರೋಗ್ಯ ಇಲಾಖೆ, ಈ ಯೋಜನೆಯನ್ನು ಜಾರಿಗೆ ತಂದಿದೆ.

ಇದರಿಂದ, ವೈದ್ಯರ ಸಲಹೆಗೆ ಇನ್ನು ಮುಂದೆ ಆಸ್ಪತ್ರೆಗೆ ಹೋಗಬೇಕಿಲ್ಲ, ವೈದ್ಯರೇ ರೋಗಿಗಳಿಗೆ ಫೋನ್ ಮಾಡುತ್ತಾರೆ. ಜಿಲ್ಲೆಯ ಜನರಿಗೆ 37 ವೈದ್ಯರಿಂದ ಮೊಬೈಲಿನಲ್ಲೇ ವೈದ್ಯಕೀಯ ಸಲಹೆಗಳು ನೀಡುತ್ತಾರೆ.