Wednesday, 1st February 2023

ಯುವ ಜನರಿಗೆ ಮೌಲ್ಯಯುತ ಶಿಕ್ಷಣ ಅನಿವಾರ್ಯ: ಶ್ರೀ ವಿರೇಶಾನಂದ ಸರಸ್ವತಿ ಶ್ರೀಗಳು

ವಿದ್ಯಾರ್ಥಿಗಳು ಅಲಂಕಾರ ಪ್ರಿಯರಾಗದೆ ಅಂದೋಲನ ಕಲಿಕೆಯ ಪ್ರಿಯರಾಗಬೇಕು

ತಿಪಟೂರು: ಇಂದಿನ ಯುವ ಜನರಿಗೆ ವಿವೇಕಾನಂದರ ಚಿಂತನೆಗಳಲ್ಲಿರುವ ಮೌಲ್ಯಯುತವಾದ ಶಿಕ್ಷಣದ ಅಗತ್ಯತೆ ಅನಿವಾರ್ಯ ವಾಗಿದೆ ಎಂದು ಸ್ವಾಮಿ ವೀರೇಶಾನಂದ ಸರಸ್ವತಿ ಸ್ವಾಮೀಜಿಗಳು ತಿಳಿಸಿದರು.

ನಗರದ ಗುರುಕುಲಾನಂದಾಶ್ರಮದಲ್ಲಿ ನಡೆದ ಕರ್ನಾಟಕ ಗಾಂಧಿ ಸ್ಮಾರಕ ನಿಧಿ ಬೆಂಗಳೂರು, ಎಂ. ಎಸ್. ಸಂದೀಪ್ ಟ್ರಸ್ಟ್, ಶ್ರೀ ಗುರುಕುಲಾನಂದಾಶ್ರಮ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು ತಿಪಟೂರು ಇವರ ಸಂಯುಕ್ತಾಶ್ರಯದಲ್ಲಿ ನಡೆದ ಎಂ.ಎಸ್. ಸಂದೀಪ್ ದತ್ತಿ ಉಪನ್ಯಾಸ ಕರ‍್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದರು.

ಯುವಕರು ಸ್ವಪ್ರಯತ್ನದಿಂದ ಅಸಾಧ್ಯವಾದುದನ್ನು ಸಾಧಿಸಬಹುದಾಗಿದೆ. ಅಂದರೆ ನೀವು ಪ್ರಾಮಾಣಿಕವಾಗಿದ್ದರೆ ಅಂದು ಕೊ0ಡಿರುವುದನ್ನು ಸಾಧಿಸಬಹುದಾಗಿದೆ. ವಿದ್ಯಾರ್ಥಿಗಳು ಗುರುಗಳಿಂದ ೨೫%, ಸತತ ಪರಿಶ್ರಮದಿಂದ ೨೫%, ಸ್ನೇಹಿತರಿಂದ ೨೫%, ಜೀವನದಿಂದ ೨೫% ಕಲಿಯಬಹುದಾಗಿದೆ. ಕಾಲೇಜು ಅಂದರೆ ವಸ್ತು ಪ್ರದರ್ಶನ ಕೇಂದ್ರವಲ್ಲ, ಅದು ಬೌದ್ಧಿಕ ಸಾಮರ್ಥ್ಯ ದಿಂದ ತುಂಬಿದ ಪವಿತ್ರವಾದ ಸ್ಥಳವಾಗಿದೆ. ಬುದ್ಧಿ ಮತ್ತು ಹೃದಯದ ಸಂಸ್ಕಾರವೇ ಶಿಕ್ಷಣವಾಗಿ, ವಿದ್ಯಾರ್ಥಿಗಳು ಅಲಂಕಾರ ಪ್ರಿಯರಾಗದೆ ಆಂದೋಲನ ಕಲಿಕೆಯ ಪ್ರಿಯರಾಗಬೇಕು ಆಗ ಮಾತ್ರ ಯಶಸ್ವಿಯಾಗುತ್ತೀರಿ. ಕಠಿಣ ಪರಿಶ್ರಮವಿದ್ದರೆ ಗೆದ್ದೇ ಗೆಲ್ಲುತ್ತೀರಿ ಎಂಬ ವಿಶ್ವಾಸ ವನ್ನು ಸದಾಕಾಲ ತಮ್ಮ ಜೊತೆ ಇರಿಸಿಕೊಳ್ಳಿ ಎಂದರು.

ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿದ ಗುರುಕುಲ ಶ್ರೀಗಳಾದ ಇಮ್ಮಡಿ ಕರಿಬಸವದೇಶಿ ಕೇಂದ್ರ ಸ್ವಾಮೀಜಿಗಳು ಮಾತನಾಡಿ ಮನುಷ್ಯನು ಏನನ್ನಾದರೂ ಸಾಧಿಸಬೇಕಾದರೆ ಶ್ರದ್ದೆ, ನಿರಂತರ ಪ್ರಯತ್ನ, ನಿಜವಾದ ತಪಸ್ಸು ಇರಬೇಕು. ನಮ್ಮ ಅಂತರ0ಗ ದಲ್ಲಿ ಪ್ರಾಣ ಚೈತನ್ಯವೇ ನಿಜವಾದ ದೇವರು. ಮನೋ ಏಕಾಗ್ರತೆಯು ಸದಾಕಾಲ ಇರಬೇಕಾಗುತ್ತದೆ ಮನುಷ್ಯನಲ್ಲಿ ಅಹಂಕಾರ ಕಡಿಮೆಯಾದರೆ ಏನನ್ನಾದರೂ ಸಾಧಿಸಬಹುದು ಎಂದರು.

ನಾಡೋಜ ಡಾ. ವೂಡೇ ಪಿ. ಕೃಷ್ಣರವರು ಆಶಯನುಡಿ ನುಡಿದ ಅವರು ಜೀವನದಲ್ಲಿ ಎಷ್ಟು ದಿನ ಬದುಕಿದ್ದೇವೆ ಅಂತಲ್ಲ ಹೇಗೆ ಬದುಕಿದ್ದೀವಿ ಎಂಬುದು ಮುಖ್ಯ. ವಿವೇಕಾನಂದರು, ಶಂಕರಾಚಾರ್ಯರು, ಗಾಂಧೀಜಿಯವರು ಬದುಕಿದ್ದು ಅಲ್ಪವಾಗಿದ್ದರೂ, ಸಾಧನೆ ಶ್ಲಾಘನೀಯವಾದದ್ದು ಎಂದರು.

ಪ್ರಾಸ್ತಾವಿಕ ಮಾತಾಡಿದ ಪ್ರೊ. ಶಿವರಾಜು ಬಿ. ರವರು ಯುವಕರಿಗೆ ಬೇಕಾಗಿರುವುದು ಬದುಕು ಕಟ್ಟಿರುವ ಮೌಲ್ಯಗಳೇ ಹೊರತು ಆಡಂಬರದ ಜೀವನವಲ್ಲ. ಗಾಂಧೀಜಿಯವರ ಮೌಲ್ಯ ಮರೆತರೆ ವಿಶ್ವ ನಾಶವಾಗುತ್ತದೆಂದು ಎಚ್ಚರಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ನಿವೃತ್ತ ಐ.ಎ.ಎಸ್. ಅಧಿಕಾರಿ ಶಂಕರಲಿ0ಗೇಗೌಡ ಎಂ.ಕೆ. ಮಾತನಾಡಿ ಯುವಕರು ಯಾವುದೇ ಸಂದರ್ಭದಲ್ಲಿ ಭಯಪಡಬಾರದು ಎಲ್ಲವನ್ನು ಆತ್ಮಸ್ಥೈರ್ಯದಿಂದ ಎದುರಿಸಿದರೆ ಮಾತ್ರ ಸದೃಢ ಬದುಕನ್ನು ಕಟ್ಟಿಕೊಳ್ಳಬಹುದು. ಸಕಾರಾತ್ಮಕ ಯೋಚನೆಗಳಿಂದ ಮಾತ್ರ ಜೀವನ ಉತ್ಕೃಷ್ಟವಾಗುತ್ತದೆ ಎಂದರು.

ಈ ಸಂದರ್ಭದಲ್ಲಿ ಎನ್. ಆರ್ ವಿಶುಕುಮಾರ್, ಉಷಾ ಶಂಕರಲಿAಗೇಗೌಡರು ಬಿ, ಗಂಗಣ್ಣ, ಎಸ್ ಪಾಪಣ್ಣ, ಕೆ ಜಿ ಶ್ರೀನಿವಾಸ್, ಶ್ರೀ ಗುರುಕುಲ ಮಠದ ಕಾರ್ಯದರ್ಶಿಗಳಾದ ಹೆಚ್. ಎಸ್ ಸಿದ್ದರಾಮಯ್ಯ , ಕರ್ನಾಟಕ ಗಾಂಧಿ ಸ್ಮಾರಕನಿಧಿಯ ಯುವ ಸದಸ್ಯ ಕ್ಯಾಪ್ಟನ್ ಬಿ.ಎಮ್ ಹರಿಪ್ರಸಾದ್, ಲೇಖಕರು,ಸಮಾಜ ಸೇವಕರಾದ ಬಿ.ಪ್ರತಾಪ್ ಸಿಂಗ್, ಗುರುಕುಲ ವಿಜ್ಞಾನ ಮತ್ತು ವಾಣಿಜ್ಯ ಪಿ.ಯು ಕಾಲೇಜಿನ ಸಂಯೋಜಕ ಎಸ್ ಆರ್ ಮಂಜುನಾಥ್ ,ಡಾ. ಹೊನ್ನಾಂಜಿನಯ್ಯ ಡಿ.ಆರ್, ಡಾ. ವೆಂಕಟೇಶ್ ಎಲ್ ಎಂ, ಡಾ. ಚಿಕ್ಕಹೆಗಡೆ ಪ್ರೊ.ಜ್ಯೋತಿ, ಮತ್ತಿತರು ಹಾಜರಿದ್ದರು.

*

ಯುವಕರಿಗೆ ಬೇಕಾಗಿರುವುದು ಬದುಕು ಕಟ್ಟಿರುವ ಮೌಲ್ಯಗಳೇ ಹೊರತು ಆಡಂಬರದ ಜೀವನವಲ್ಲ. ಗಾಂಧೀಜಿಯವರ ಮೌಲ್ಯ ಮರೆತರೆ ವಿಶ್ವ ನಾಶವಾಗುತ್ತದೆ.

ಪ್ರೋ ಶಿವರಾಜು

error: Content is protected !!