Thursday, 16th September 2021

ಸವದಿಗೆ ಡಿಸಿಎಂ ಪಟ್ಟ ಸಿಕ್ಕಿದ್ದು ಬರೀ ಅದೃಷ್ಟದಿಂದಲ್ಲ!

ಲಕ್ಷ್ಮಣ ಸವದಿ ಅವರಿಗೆ ಡಿಸಿಎಂ ಪಟ್ಟ ಸಿಕ್ಕಿಿದ್ದು ಕೇವಲ ಹೈಕಮಾಂಡ್‌ನ ಕೃಪೆಯಿಂದ ಎಂಬುದು ಬಹುತೇಕರ ವಾದ. ಆದರೆ, ವಾಸ್ತವವಾಗಿ ಅವರ ನಾಯಕತ್ವ ಗುಣ ಮತ್ತು ಜನರೊಂದಿಗಿನ ಒಡನಾಟವನ್ನು ಅರಿತೇ ಅವರಿಗೆ ಹೈಕಮಾಂಡ್ ಮನ್ನಣೆ ನೀಡಿದೆ ಎನ್ನಬಹುದು

ಬಿಜೆಪಿ ದೇಶಾದ್ಯಂತ ಗೆಲುವು ಸಾಧಿಸುವ ಮೂಲಕ ಗಟ್ಟಿಿತನ ಗಳಸಿಕೊಂಡಿದೆ. ಪಕ್ಷದ ಈ ವಿಜಯಯಾತ್ರೆೆ ಮುಂದುವರಿಸಿಕೊಂಡು ಹೋಗಲು ಎರಡನೇ ಹಂತದ ನಾಯಕರನ್ನು ಬೆಳೆಸಬೇಕಾದುದು ಇಂದಿನ ಅನಿವಾರ್ಯ. ಇಲ್ಲವಾದಲ್ಲಿ ಬಿಜೆಪಿ ಕೂಡ ಕಾಂಗ್ರೆೆಸ್‌ನಂತೆ ಒಂದು ದಿನ ಸೂಕ್ತ ನಾಯಕತ್ವದ ಕೊರತೆಯಿಂದ ಬಳಲುವಂತಾಗುತ್ತದೆ. ಇದನ್ನು ಅರಿತು ಬಿಜೆಪಿ ಹೈಕಮಾಂಡ್ ಎರಡನೇ ಹಂತದ ನಾಯಕರ ಸೃಷ್ಟಿಿಸುವ ಕಡೆಗೆ ಕಾರ್ಯಮಗ್ನವಾಗಿದೆ.

ಬಿಜೆಪಿಯ ಈ ದೂರದೃಷ್ಟಿಿಯ ಫಲವಾಗಿಯೇ ಲಕ್ಷ್ಮಣ್ ಸವದಿ ಕರ್ನಾಟಕದ ಡಿಸಿಎಂ ಹುದ್ದೆೆ ಅಲಂಕರಿಸಿದ್ದಾಾರೆ. ಕರ್ನಾಟಕದಲ್ಲಿ ಬಿಎಸ್‌ವೈ ನಂತರ ಮುಂದಿನ ನಾಯಕ ಯಾರು ಎಂಬ ಪರಿಸ್ಥಿಿತಿ ನಿರ್ಮಾಣವಾಗಿತ್ತು. ಮೋದಿ ಅಲೆಯಲ್ಲಿ ಹಿಂದಿನ ಚುನಾವನೆಗಳನ್ನು ಗೆದ್ದದ್ದನ್ನು ಬಿಟ್ಟರೆ ರಾಜ್ಯ ನಾಯಕರ ಶ್ರಮ ಇದರಲ್ಲಿ ಅಷ್ಟಾಾಗಿ ಕಾಣಿಸಲೇ ಇಲ್ಲ. ಇದು ಮುಂದುವರಿದರೆ ಅಪಾಯವಿದೆ ಎಂಬುದನ್ನು ಅರಿತ ಬಿಜೆಪಿ ನಾಯಕರು ಹೊಸ ನಾಯಕತ್ವಕ್ಕೆೆ ಮಣೆಹಾಕುವ ಸಾಹಸ ಮಾಡಿದರು.

ಇದೀಗ ಲಕ್ಷ್ಮಣ ಸವದಿ ಅವರನ್ನು ಮುನ್ನೆೆಲೆಗೆ ತರುವ ಮೂಲಕ ಲಿಂಗಾಯತ ಸಮುದಾಯಕ್ಕೆೆ ಪರ್ಯಾಯ ನಾಯಕನನ್ನು ಬೆಳೆಸವು ಅಲೋಚನೆಯನ್ನು ಬಿಜೆಪಿ ಹೈಕಮಾಂಡ್ ಮಾಡಿದೆ. ಅಶ್ವತ್ಥ ನಾರಾಯಣ ಮೂಲಕ ಪ್ರಬಲ ಒಕ್ಕಲಿಗ ಸಮುದಾಯಕ್ಕೆೆ ಪರ್ಯಾಯ ನಾಯಕನ ಸೃಷ್ಟಿಿಗೆ ಮುಂದಾಗಿದೆ. ಇದನ್ನು ಊಹಿಸದೆ ಹಳೆಯ ಮುಖಗಳಿಗೆ ಮಣೆ ಹಾಕಿದ್ದರ ಫಲವನ್ನು ಕಾಂಗ್ರೆೆಸ್ ಈಗ ಉಣ್ಣುತ್ತಿಿದ್ದು, ಕಾಂಗ್ರೆೆಸ್‌ನಲ್ಲಿ ಹೊಸ ತಲೆಮಾರಿನ ನಾಯಕತ್ವವೇ ಮರೆಯಾಗಿದೆ. ಇದೇ ಪರಿಣಾಮವಾಗಿ ಈಗ ಕಾಂಗ್ರೆೆಸ್ ದೇಶಾದ್ಯಂತ ನೆಲಕಚ್ಚಿಿದೆ.

ಜನಸಾಮಾನ್ಯರಿಗೂ ಸವದಿ ಹತ್ತಿಿರ
ಅಷ್ಟಕ್ಕೂ ಹೈಕಮಾಂಡ್ ಗುರುತಿಸಿದ ಲಕ್ಷ್ಮಣ ಸವದಿ ಜನರೊಂದಿಗೂ ಒಡನಾಟ ಹೊಂದಿರುವ ನಾಯಕ. ಕ್ಷೇತ್ರದ ಸಾಮಾನ್ಯ ಜನರ ಜತೆಗೆ ಹತ್ತಿಿರವಾಗಿದ್ದು, ಪ್ರತಿ ಕಾರ್ಯಕ್ರಮಕ್ಕೂ ಭೇಟಿ ನೀಡುವುದು, ಸೋತಿದ್ದರೂ ಕ್ಷೇತ್ರದ ಜನರ ಸಮಸ್ಯೆೆಗಳಿಗೆ ಮಿಡಿಯುವ ಮೂಲಕ ಜನಸ್ನೇಹ ಬೆಳೆಸಿಕೊಂಡಿದ್ದರು. ಇದನ್ನು ಅರಿತೇ ಅವರನ್ನು ಡಿಸಿಎಂ ಹುದ್ದೆೆಗೆ ನೇಮಿಸಲಾಗಿದೆ. ಜತೆಗೆ, ರಾಜಕೀಯ ತಂತ್ರಗಾರಿಕೆಯಲ್ಲಿ ಸವದಿ ಒಂದು ಹೆಜ್ಜೆೆ ಮುಂದಿದ್ದಾಾರೆ ಎಂಬುದು ಸಮ್ಮಿಿಶ್ರ ಸರಕಾರ ಪತನದ ವೇಳೆ ಸಾಬೀತಾಗಿದೆ. ನಾಲ್ಕೈದು ಬಾರಿ ವಿಫಲವಾಗಿದ್ದ ಆಪರೇಷನ್ ಕಮಲ ನಂತರ ಯಶ ಕಂಡಿದ್ದು, ಸವದಿ ಮತ್ತು ಅಶ್ವತ್ಥ ನಾರಾಯಣ ಅವರ ತಂತ್ರಗಾರಿಕೆಯಿಂದ ಎನ್ನಬಹುದು.

ಇಲಾಖೆ ಸುಧಾರಣೆಗೂ ಮುಂದೆ:
ಇದೆಲ್ಲದರ ಜತೆಗೆ ಸವದಿ ಹಿಂದಿನ ಬಿಎಸ್‌ವೈ ಸರಕಾರದಲ್ಲಿ ಸಹಕಾರ ಸಚಿವರಾಗಿ ಕೆಲಸ ಮಾಡಿದ್ದರು. ಈಗ ಡಿಸಿಎಂ ಹುದ್ದೆೆ ಜತೆಗೆ ಸಾರಿಗೆ ಇಲಾಖೆಯ ಹೊಣೆ ಹೊತ್ತಿಿದ್ದು, ಇಲಾಖೆ ಸುಧಾರಣೆಗೆ ಪಣ ತೊಟ್ಟಿಿದ್ದಾಾರೆ. ತಾವು ಜವಾಬ್ದಾಾರಿ ಹೊತ್ತ ದಿನದಿಂದಲೂ ಅಧಿಕಾರಿಗಳ ಜತೆಗೆ ಸಂಪರ್ಕ ಸಾಧಿಸುತ್ತಾಾ, ಸೂಕ್ತ ಸುಧಾರಣೆಗಳನ್ನು ತರಲು ತೀರ್ಮಾನಿಸಿದ್ದಾಾರೆ. ಸಾರಿಗೆ ಸಂಸ್ಥೆೆಗಳ ನಷ್ಟ ತಡೆಗಟ್ಟಲು ವಿಶೇಷ ಕಾರ್ಯ ಯೋಜನೆ ಪ್ರಕಟಿಸಿದ್ದಾರೆ. ವಾಯುಮಾಲಿನ್ಯ ತಡೆಗಾಗಿ ಎಲೆಕ್ಟ್ರಿಿಕ್ ಬಸ್ಸುಗಳನ್ನು ಓಡಿಸಲು ತೀರ್ಮಾನಿಸಿದ್ದಾಾರೆ. ಇದಕ್ಕೆೆ ಸಂಬಂಧಿಸಿ ದೇಶ-ವಿದೇಶಗಳ ವಾಹನ ತಯಾರಿಕಾ ಸಂಸ್ಥೆೆಗಳ ಸಲಹೆ- ಸೂಚನೆ, ಪ್ರಸ್ತಾಾವನೆಗಳನ್ನು ಪಡೆದಿದ್ದಾಾರೆ.

Leave a Reply

Your email address will not be published. Required fields are marked *