Thursday, 16th September 2021

ಸ್ಯಾಕ್ಸೋಫೋನ್ ಕಲಾವಿದ ಮಚೇಂದ್ರನಾಥ್ ಕೋವಿಡ್ ಸೋಂಕಿಗೆ ಬಲಿ

ಮಂಗಳೂರು : ಸ್ಯಾಕ್ಸೋಫೋನ್ ಕಲಾವಿದ ಮಚೇಂದ್ರನಾಥ್ ಭಾನುವಾರ ಕೋವಿಡ್ ಸೋಂಕಿಗೆ ಬಲಿಯಾಗಿದ್ದಾರೆ.

ಸೋಂಕಿನಿಂದಾಗಿ ದೇರಳಕಟ್ಟೆಯ ಖಾಸಗಿ ಆಸ್ಪತ್ರೆ ಚಿಕಿತ್ಸೆ ಪಡೆಯುತ್ತಿದ್ದ ಅವರು ಚಿಕಿತ್ಸೆ ಫಲಕಾರಿ ಯಾಗದೆ ಮೃತರಾಗಿದ್ದಾರೆ. ಕೆಲದಿನಗಳ ದಿನ ಹಿಂದೆ ಅವರ ಪತ್ನಿ ಸೋಂಕಿಗೆ ಬಲಿಯಾಗಿದ್ದರು.

ಮಚೇಂದ್ರನಾಥ್ ಅವರಿಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಹಲವಾರು ಸಂಘಟನೆಗಳು ಅವರನ್ನು ಸನ್ಮಾನಿಸಿದ್ದವು. ದೇಶ ವಿದೇಶಗಳಲ್ಲಿ ಹಲವಾರು ಸಂಗೀತ ಕಚೇರಿಗಳನ್ನು ನಡೆಸಿದ್ದರು. ಮಚೇಂದ್ರನಾಥ್ ಅವರ ಪುತ್ರಿ ಸಿಂಧು ಭೈರವಿ ಅಂತರಾಷ್ಟ್ರೀಯ ಮಟ್ಟದ ಸ್ಯಾಕ್ಸೋಫೋನ್ ಕಲಾವಿದೆ ಯಾಗಿದ್ದಾರೆ.

Leave a Reply

Your email address will not be published. Required fields are marked *